Home
ಸುದ್ದಿಜಾಲ

108ಎಂಪಿ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಫ್ಲಿಪ್‌ಕಾರ್ಟ್‌ ಪ್ರಮುಖ ಇ ಕಾಮರ್ಸ್‌ ವೆಬ್‌ಸೈಟ್‌ ಆಗಿ ಗುರುತಿಸಿಕೊಂಡಿದ್ದು, ಮುಖ್ಯವಾಗಿ ಮೊಬೈಲ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡುವ ಮೂಲಕ ಗಮನ ಸೆಳದಿದೆ. ಈ ತಾಣದಲ್ಲಿ ಎಲ್ಲ ಮಾದರಿಯ ಫೋನಿಗಳಿಗೂ ಆಫರ್‌ ಲಭ್ಯ ಇರುತ್ತದೆ. ಇದೀಗ ಸದ್ಯ ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ಗೂ ಆಕರ್ಷಕ ರಿಯಾಯಿತಿ ಲಭ್ಯವಾಗಿದೆ. ಇದು ನೋಡಲು ಬಹುತೇಕ ನಥಿಂಗ್‌ ಫೋನ್‌ ರಚನೆ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ ಶೇ. 12% ರಷ್ಟು ರಿಯಾಯಿತಿ ಪಡೆದಿದ್ದು, 8 GB RAM + 256 GB ವೇರಿಯಂಟ್‌ ಫೋನ್‌ ಅನ್ನು ಗ್ರಾಹಕರು 21,999 ರೂ. ಗಳ ದರದಲ್ಲಿ ಖರೀದಿಗೆ ಮಾಡಬಹುದಾಗಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳ ರಿಯಾಯಿತಿ, ಹಾಗೆಯೇ ಎಕ್ಸ್‌ಚೇಂಜ್ ಆಫರ್‌ಗಳು ಸಹ ಗ್ರಾಹಕರಿಗೆ ಲಭ್ಯವಾಗಲಿದ್ದು, ಇವಯಗಳೊಂದಿಗೆ ಫೋನ್‌ ಅನ್ನು ಇನ್ನಷ್ಟಯ ಡಿಸ್ಕೌಂಟ್‌ ದರದಲ್ಲಿ ಖರೀದಿ ಮಾಡಬಹುದು.

108ಎಂಪಿ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಅಂದಹಾಗೆ ಈ ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ಕೆಲಸ ಮಾಡಲಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಹೊಂದಿದೆ. ಹಾಗೆಯೇ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಆಗಿದೆ. ಹಾಗಾದರೇ ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹಾಗೂ ವಿನ್ಯಾಸ ಹೀಗಿದೆ

ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 10 ಬಿಟ್ ಅಮೋಲೆಡ್‌ ಮಾದರಿಯಲ್ಲಿದೆ. ಜೊತೆಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು ಡಿಸ್‌ಪ್ಲೇ 360Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ಹೊಂದಿದೆ. ಅಲ್ಲದೇ ಡಿಸ್‌ಪ್ಲೇ 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ.

108ಎಂಪಿ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಪ್ರೊಸೆಸರ್‌ ಪವರ್ ಯಾವುದು

ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಲಭ್ಯ. ಇದರ ಜೊತೆಗೆ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದು, ಇದಲ್ಲದೆ ಲಭ್ಯವಿರುವ ಸ್ಟೋರೇಜ್‌ ಬಳಸಿಕೊಂಡು RAM ಅನ್ನು ವರ್ಚುವಲ್ 16GB ವರೆಗೆ ವಿಸ್ತರಿಸಲು ಅವಕಾಶ ಇದೆ.

108ಎಂಪಿ ಕ್ಯಾಮೆರಾ ಇರುವ ಈ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಕ್ಯಾಮೆರಾ ಸೆನ್ಸಾರ್ ರಚನೆ

ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ ಕೂಡ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇದರ ಜೊತೆಗೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಪಡೆದಿದೆ.

ಬ್ಯಾಟರಿ ಮತ್ತು ಇತರೆ ಆಯ್ಕೆಗಳು ಹೀಗಿವೆ

ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 45W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್ ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಗಾಗಿ 5G, NFC, 3.5mm ಆಡಿಯೋ ಜ್ಯಾಕ್, FM ರೇಡಿಯೋ, GPS, USB ಟೈಪ್-ಸಿ ಪೋರ್ಟ್ ಸೌಲಭ್ಯ ಪಡೆದಿದೆ.

Best Mobiles in India

English summary
Infinix GT10 Pro available at reduced price on flipkart india. check offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+