Home
ಸುದ್ದಿಜಾಲ

ಈ ಸ್ಟೈಲಿಶ್‌ ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ; ಗ್ರಾಹಕರು ಖುಷ್!

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಶಿಯೋಮಿ ಸಂಸ್ಥೆಯ ಫೋನ್‌ಗಳು ಕೂಡಾ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ಮಾರಾಟ ಮೇಳದಲ್ಲಿ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ ಶೇ. 12% ರಷ್ಟು ನೇರ ಡಿಸ್ಕೌಂಟ್‌ ಪಡೆದಿದ್ದು, 8 GB RAM + 256 GB ವೇರಿಯಂಟ್‌ ಫೋನ್‌ 21,999 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಕೊಡುಗೆಗಳು ಕೂಡಾ ಗ್ರಾಹಕರಿಗೆ ಸಿಗಲಿವೆ. ಈ ನಿಟ್ಟಿನಲ್ಲಿ ಮತ್ತಷ್ಟು ಡಿಸ್ಕೌಂಟ್‌ ದರದಲ್ಲಿ ಮೊಬೈಲ್‌ ಖರೀದಿ ಮಾಡಬಹುದು

ಈ ಸ್ಟೈಲಿಶ್‌ ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ; ಗ್ರಾಹಕರು ಖುಷ್!

ಈ ಮೊಬೈಲ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ಪಡೆದಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಆಗಿದೆ. ಇನ್ನುಳಿದಂತೆ ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಫೋನ್ ಡಿಸೈನ್‌ ಹೀಗಿದೆ

ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ ಡಿಸೈನ್‌ ಅನ್ನು ಹೊಂದಿದ್ದು, ಇದು ಬಹುತೇಕ ನಥಿಂಗ್‌ ಫೋನ್‌ ಮಾದರಿ ಹೋಲುತ್ತದೆ. ಇದು ಸೈಬರ್‌ಪಂಕ್‌ ಶೈಲಿಯ ರಿಯರ್‌ ಶೆಲ್‌ ಅನ್ನು ಪಡೆದಿದ್ದು, ಕಸ್ಟಮೈಸ್ ಮಾಡಬಹುದಾದ ಮಿನಿ-ಎಲ್ಇಡಿ ಸೂಚಕವನ್ನು ಹೊಂದಿದೆ. ಇದು ನೋಟಿಫೀಕೇಶನ್‌ಗಳು, ಚಾರ್ಜಿಂಗ್ ಮತ್ತು ಗೇಮಿಂಗ್ಗಾಗಿ ಗ್ಲೋ ಆಗಲಿದೆ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸದ ಮಾಹಿತಿ

ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಡಿಸ್‌ಪ್ಲೇ 10-ಬಿಟ್ ಅಮೋಲೆಡ್‌ ಮಾದರಿಯಲ್ಲಿದೆ. ಜೊತೆಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು ಡಿಸ್‌ಪ್ಲೇ 360Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ಪಡೆದಿದೆ. ಅಲ್ಲದೇ ಡಿಸ್‌ಪ್ಲೇ 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಪವರ್ ಯಾವುದು

ಇನ್ಫಿನಿಕ್ಸ್‌ GT 10 ಪ್ರೊ ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಇದೆ. ಜೊತೆಗೆ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದು, ಇದಲ್ಲದೆ ಲಭ್ಯವಿರುವ ಸ್ಟೋರೇಜ್‌ ಬಳಸಿಕೊಂಡು RAM ಅನ್ನು ವರ್ಚುವಲ್ 16GB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್ ರಚನೆ

ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ತೃತೀಯ ಕ್ಯಾಮೆರಾ ಕೂಡ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.

ಅಧಿಕ ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ಮಾಹಿತಿ

ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಗಾಗಿ 5G, NFC, 3.5mm ಆಡಿಯೋ ಜ್ಯಾಕ್, FM ರೇಡಿಯೋ, GPS, USB ಟೈಪ್-ಸಿ ಪೋರ್ಟ್ ಸೌಲಭ್ಯ ಹೊಂದಿದೆ.

Best Mobiles in India

English summary
Infinix GT10 Pro available huge price cut on flipkart India. offer price, specifications and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+