Infinix: ಇನ್ಫಿನಿಕ್ಸ್‌ನ ಈ ಬಜೆಟ್ ಬೆಲೆಯ ಫೋನ್ ಇನ್ನೂ ಕಡಿಮೆ ಬೆಲೆಗೆ! 64 GB ಸ್ಟೋರೇಜ್...
ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix smartphone) ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ಹೊಂದಿದ್ದು, ಈ ಮೂಲಕ ಭಾರತದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಇನ್ಫಿನಿಕ್ಸ್ ಕಂಪೆನಿ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಈ ಫೋನ್‌ಗಳ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಈ ಫೋನ್‌ಗೆ ಪ್ರಮುಖ ಇ- ಕಾಮರ್ಸ್ ಸೈಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಇನ್ಫಿನಿಕ್ಸ್ ಹಾಟ್ 10 ಪ್ಲೇ ಸ್ಮಾರ್ಟ್‌ಫೋನ್‌ಗೆ (Infinix Hot 10 Play Smartphone) ಇದೀಗ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಈ ಮೂಲಕ ಬಜೆಟ್ ಬೆಲೆಯಲ್ಲಿ ಫೋನ್‌ನಲ್ಲಿ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 64 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದ್ದು, 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಇನ್ಫಿನಿಕ್ಸ್ ಹಾಟ್ 10 ಪ್ಲೇ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 10,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 8,090 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್(Flipkart) 26% ರಿಯಾಯಿತಿ ಘೋಷಣೆ ಮಾಡಿದೆ. ಅದಾಗ್ಯೂ ನೀವು ಬ್ಯಾಂಕ್ ಆಫರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ.
6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೇಲೆ 500 ರೂ.ಗಳ ಹೆಚ್ಚುವರಿ ರಿಯಾಯಿತಿ, 9 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೇಲೆ 750 ರೂ.ಗಳ ರಿಯಾಯಿತಿ, ಐಡಿಎಫ್‌ಸಿ ಮೊದಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ ಸಿಗಲಿದೆ.

ಇನ್ಫಿನಿಕ್ಸ್ ಹಾಟ್ 10 ಪ್ಲೇ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.82 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 720 x 1640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 440 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, 263 ppi ಸಾಂದ್ರತೆ ಹಾಗೂ 82.4% ಸ್ಕ್ರೀನ್-ಟು-ಬಾಡಿ ಅನುಪಾತ ಪಡೆಯುವ ಮೂಲಕ ಅತ್ಯುತ್ತಮ ವೀಕ್ಷಣೆ ಅನುಭವ ನೀಡಲಿದೆ.
ಇನ್ಫಿನಿಕ್ಸ್ ಹಾಟ್ 10 ಪ್ಲೇ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ MT6762G ಹಿಲಿಯೊ G25 (12 nm) ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 (ಗೋ ಎಡಿಷನ್), ಎಕ್ಸ್‌ಓಎಸ್ 7 ಅನ್ನು ರನ್ ಮಾಡಲಿದೆ. ಇದರೊಂದಿಗೆ ಪವರ್ ವಿಆರ್ GE8320GPU ಬಲ ಹಾಗೂ 64GB ಇಂಟರ್ ಸ್ಟೋರೇಜ್ ಹಾಗೂ 4GB RAM ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಇನ್ನೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ಇನ್ಫಿನಿಕ್ಸ್ ಹಾಟ್ 10 ಪ್ಲೇ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಸೆನ್ಸರ್‌ಗಳು ಕ್ವಾಡ್-ಎಲ್ಇಡಿ ಫ್ಲ್ಯಾಶ್, ಪನೋರಮಾ, ಎಚ್‌ಡಿಆರ್ ಫೀಚರ್ಸ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಇದರೊಂದಿಗೆ 1080p@30fps ಸಾಮರ್ಥ್ಯದಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ.

ಇನ್ಫಿನಿಕ್ಸ್ ಹಾಟ್ 10 ಪ್ಲೇ ಬ್ಯಾಟರಿ ಸಾಮರ್ಥ್ಯ: ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ. ಇದರೊಂದಿಗೆ ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE , ಎಫ್‌ಎಮ್ ರೇಡಿಯೋ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.


Click it and Unblock the Notifications








