ಇನ್ಫಿನಿಕ್ಸ್ ಹಾಟ್ 30 5G ಸ್ಮಾರ್ಟ್‌ಫೋನ್ ಲಾಂಚ್: ಕ್ಯಾಮೆರಾ ಪ್ರಿಯರಿಗೆ ಬೆಸ್ಟ್ ಫೋನ್ !
ಇನ್ಫಿನಿಕ್ಸ್ (Infinix) ಸ್ಮಾರ್ಟ್‌ಡಿವೈಸ್‌ಗಳು ಭಾರತೀಯರ ಮನಗೆದ್ದಿವೆ. ಈ ಕಾರಣಕ್ಕೆ ಯಾವುದೇ ಇನ್ಫಿನಿಕ್ಸ್ ಸ್ಮಾರ್ಟ್ ಡಿವೈಸ್ ಲಾಂಚ್ ಆದರೂ ಸಹ ಅದನ್ನು ಖರೀದಿ ಮಾಡಲು ಗ್ರಾಹಕರು ಕಾತುರದಿಂದ ಕಾಯುತ್ತಿರುತ್ತಾರೆ. ಈ ನಡುವೆ ಭಾರತದಲ್ಲಿ ಇನ್ಫಿನಿಕ್ಸ್ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದು ಬರೋಬ್ಬರಿ 6000mAh ಸಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಎಂದು ಕರೆಸಿಕೊಳ್ಳುತ್ತಿರುವ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಈಗ ಇನ್ಫಿನಿಕ್ಸ್ ಹಾಟ್ 30 5G (Infinix Hot 30 5G) ಫೋನ್ ಸೇರಿಕೊಳ್ಳಲಿದೆ. ಈ ಫೋನ್ ಮೀಡಿಯಾಟೆಕ್ 6020 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಲಿದ್ದು, 8GB ಯೊಂದಿಗೆ ವಿಸ್ತರಣೆ ಮಾಡಬಹುದಾದ RAM ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿಯೋಣ ಬನ್ನಿ.

ಇನ್ಫಿನಿಕ್ಸ್ ಹಾಟ್ 30 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಜೊತೆಗೆ 580 nits ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇದ್ದು, ಈ ಮೂಲಕ ಹೊಸ ಅನುಭವ ಪಡೆಯಬಹುದು. ಇನ್ನು ಕ್ಯಾಮೆರಾ ಉದ್ದೇಶಕ್ಕೆ ಪಂಚ್ ಹೋಲ್ ಆಯ್ಕೆ ಹೊಂದಿದೆ.
ಇನ್ಫಿನಿಕ್ಸ್ ಹಾಟ್ 30 5G ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ ಆಪರೇಟಿಂಗ್ ಸಾಫ್ಟ್‌ವೇರ್ XOS 13 ನಲ್ಲಿ ರನ್ ಆಗುತ್ತದೆ. ಉಳಿದಂತೆ 8GB RAM ಮತ್ತು 8GB ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನು ಇದು ಹೊಂದಿದ್ದು, ವಿಶೇಷ ಎನಿಸಿಕೊಂಡಿದೆ.
ಇನ್ಫಿನಿಕ್ಸ್ ಹಾಟ್ 30 5G ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಇದರ ಜೊತೆಗೆ ಕ್ವಾಡ್-ಎಲ್ಇಡಿ ಫ್ಲ್ಯಾಶ್ ಲೈಟ್ ಆಯ್ಕೆ ವಿಡಿಯೋ ಹಾಗೂ ಫೋಟೋ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗಿದೆ. ಜೊತೆಗೆ ಇದು 2K ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತದೆ. ಉಳಿದಂತೆ ಎಲ್ಇಡಿ ಫ್ಲ್ಯಾಶ್‌ನೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ.
ಇನ್ಫಿನಿಕ್ಸ್ ಹಾಟ್ 30 5G ಬ್ಯಾಟರಿ ಹಾಗೂ ಇತರೆ: ಈ ವಿಶೇಷ ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 18W ಟೈಪ್-ಸಿ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ ಹಾಗೂ ಈ ಫೋನ್ ಪವರ್ ಮ್ಯಾರಥಾನ್ ತಂತ್ರಜ್ಞಾನವನ್ನು ಪಡೆದಿದ್ದು, 53 ಗಂಟೆಗಳ ಕರೆ, 21 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್, 13 ಗಂಟೆಗಳ ಗೇಮಿಂಗ್ ಮತ್ತು 35 ದಿನಗಳ ಸ್ಟ್ಯಾಂಡ್‌ಬೈ ನೀಡಲಿದೆ ಎಂದು ಕಂಪೆನಿ ತಿಳಿಸಿದೆ.
ಉಳಿದಂತೆ ಈ ಫೋನ್ ಡ್ಯುಯಲ್ ಸ್ಪೀಕರ್‌ಗಳು ಮತ್ತು ಡಿಟಿಎಸ್ ಸೌಂಡ್ ತಂತ್ರಜ್ಞಾನವನ್ನು ಹೊಂದಿದ್ದು, ಮ್ಯೂಸಿಕ್, ವಿಡಿಯೋ ಮತ್ತು ಗೇಮಿಂಗ್‌ಗಾಗಿ ವರ್ಧಿತ ಆಡಿಯೊ ಅನುಭವವನ್ನು ಒದಗಿಸುತ್ತದೆ. ಜೊತೆಗೆ ಸುಮಾರು 14 5G ಬ್ಯಾಂಡ್‌ಗಳೊಂದಿಗೆ ಹೊಂದಿಕೊಳ್ಳಲಿದ್ದು, ವೈ-ಫೈ, ಬ್ಲೂಟೂತ್, ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಕನೆಕ್ಟಿವಿಟಿ ಬೆಂಬಲ ಪಡೆದಿದೆ. ಇದೆಲ್ಲಕ್ಕೂ ಮಿಗಿಲಾಗಿ IP53 ರೇಟಿಂಗ್ ಹೊಂದಿದೆ.
ಭದ್ರತಾ ವಿಚಾರಕ್ಕೆ ಬರುವುದಾದರೆ ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆದುಕೊಂಡಿದ್ದು, ಫೇಸ್ ಅನ್‌ಲಾಕ್ ಫೀಚರ್ಸ್ ಸಹ ಇದೆ. ಇದರೊಂದಿಗೆ NFC ಪಾವತಿ ಫೀಚರ್ಸ್ ಆಯ್ಕೆ ನೀಡಲಾಗಿದ್ದು, ಇದರಿಂದಾಗಿ ಬಳಕೆದಾರರು ಒಂದೇ ಟ್ಯಾಪ್‌ನಲ್ಲಿ ಸುಲಭ ಪಾವತಿ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಇನ್ಫಿನಿಕ್ಸ್ ಹಾಟ್ 30 5G ಬೆಲೆ ಹಾಗೂ ಲಭ್ಯತೆ: ಈ ಫೋನ್ ಸಾಮಾನ್ಯ ವೇರಿಯಂಟ್ 4GB RAM ಗೆ 12,499 ರೂ.ಗಳನ್ನು ಹೊಂದಿದ್ದು, 8GB RAM ಸ್ಟೋರೇಜ್ ಆಯ್ಕೆಗೆ 13,499ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಆಫರ್ ಕೊಡುಗೆಯಾಗಿ ಪ್ರಮುಖ ಬ್ಯಾಂಕ್‌ಗಳ ಕಾರ್ಡ್‌ಗಳ ಮೇಲೆ 1,000 ರೂಪಾಯಿಗಳ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಈ ಫೋನ್ ಅರೋರಾ ಬ್ಲೂ ಮತ್ತು ನೈಟ್ ಬ್ಲಾಕ್ ನಲ್ಲಿ ಕಾಣಿಸಿಕೊಂಡಿದೆ.


Click it and Unblock the Notifications








