8GB RAMನ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್!..8,999ರೂ.ಗೆ ಬೆಲೆ!
ಇನ್ಫಿನಿಕ್ಸ್ ಮೊಬೈಲ್ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಮುಖ್ಯವಾಗಿ ಸಂಸ್ಥೆಯ ಬಹುತೇಕ ಫೋನ್‌ಗಳು ಬಜೆಟ್ ಹಾಗೂ ಅಗ್ಗದ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಇನ್ಫಿನಿಕ್ಸ್ ಹಾಟ್ 30i ಸ್ಮಾರ್ಟ್‌ಫೋನ್ ಸಹ ಪ್ರೈಸ್‌ಟ್ಯಾಗ್ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಈ ಫೋನ್ ಬೊಂಬಾಟ್ ರಿಯಾಯಿತಿ ಪಡೆದಿದೆ.
ಹೌದು, ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಇನ್ಫಿನಿಕ್ಸ್ ಹಾಟ್ 30i (Infinix HOT 30i) ಫೋನ್ 25% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನ್ 11,999ರೂ. ಪ್ರೈಸ್‌ಟ್ಯಾಗ್ ಅನ್ನು ಹೊಂದಿದ್ದು, ಈಗ ಡಿಸ್ಕೌಂಟ್‌ನಲ್ಲಿ 8,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗೆಯೇ ಗ್ರಾಹಕರಿಗೆ ಎಕ್ಸ್‌ಚೇಂಜ್ ಕೊಡುಗೆ ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಆಫರ್ ಸಹ ಸಿಗಲಿದೆ.

ಇನ್ಫಿನಿಕ್ಸ್ ಹಾಟ್ 30i ಫೋನ್ ಮೀಡಿಯಾ ಟೆಕ್ G37 ಪ್ರೊಸೆಸರ್ ಪಡೆದಿದ್ದು, ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇನ್ನು ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ಸೆಲ್ಫಿ ಕ್ಯಾಮೆರಾವು 5 ಮೆಗಾಪಿಕ್ಸಲ್ ನಲ್ಲಿದೆ. ಇನ್ನುಳಿದಂತೆ ಇನ್ಫಿನಿಕ್ಸ್ ಹಾಟ್ 30i ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ ಹಾಟ್ 30i ಡಿಸ್‌ಪ್ಲೇ ರಚನೆ ಹೇಗಿದೆ : ಇನ್ಫಿನಿಕ್ಸ್ ಹಾಟ್ 30i ಫೋನ್ 6.6 ಇಂಚಿನ ಫುಲ್ ವ್ಯೂ ಡಿಸ್‌ಪ್ಲೇ ಒಳಗೊಂಡಿದ್ದು, ಹಾಗೆಯೇ ಇದರ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಪಡೆದಿದೆ. ಇದರೊಂದಿಗೆ 80Hz ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಸಹ ಒಳಗೊಂಡಿದೆ.
ಇನ್ಫಿನಿಕ್ಸ್ ಹಾಟ್ 30i ಪ್ರೊಸೆಸರ್ ಬಲ ಯಾವುದು : ಇನ್ಫಿನಿಕ್ಸ್ ಹಾಟ್ 30i ಫೋನ್ ಮೀಡಿಯಾ ಟೆಕ್ G37 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ಸಪೋರ್ಟ್ ಸಹ ಪಡೆದಿದೆ. ಇನ್ನುಳಿದಂತೆ ಈ ಫೋನ್ 8 GB RAM ಮತ್ತು 128GB ಹಾಗೂ 4GB + 64GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಅನ್ನು 1TB ವರೆಗೆ ವಿಸ್ತರಣೆ ಮಾಡಬಹುದಾಗಿದೆ.
ಇನ್ಫಿನಿಕ್ಸ್ ಹಾಟ್ 30i ಕ್ಯಾಮೆರಾ ಸೆನ್ಸಾರ್ ರಚನೆ ಏನು : ಇನ್ಫಿನಿಕ್ಸ್ ಹಾಟ್ 30i ಫೋನ್ ಡ್ಯುಯಲ್ AI ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್ ನಲ್ಲಿದೆ. ಇದರೊಂದಿಗೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. ಕ್ಯಾಮೆರಾಗಳು ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಸೌಲಭ್ಯ AI ಬ್ಯೂಟಿ ಮತ್ತು ಪೋರ್ಟ್ರೇಟ್ ಸೇರಿದಂತೆ ಫೋಟೋ ಕ್ಲಿಕ್ ಮಾಡಲು ಹಲವಾರು ಆಕರ್ಷಕ ಮೋಡ್‌ಗಳ ಆಯ್ಕೆಯನ್ನು ಬೆಂಬಲಿಸಲಿವೆ.
ಇನ್ಫಿನಿಕ್ಸ್ ಹಾಟ್ 30i ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ : ಇನ್ಫಿನಿಕ್ಸ್ ಹಾಟ್ 30i ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಇದಕ್ಕೆ ಪೂರಕವಾಗಿ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಸೈಡ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಒದಗಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳನ್ನು ನೋಡುವುದಾರೆ ಇನ್ಫಿನಿಕ್ಸ್ ಹಾಟ್ 30i ಫೋನ್ 4G, ವೈ ಫೈ, ಬ್ಲೂಟೂತ್ ಆವೃತ್ತಿ 5.0 ಹಾಗೂ ಯುಎಸ್‌ಬಿ ಟೈಪ್ ಸಿ, ಓಟಿಜಿ ಫೀಚರ್ಸ್ ಹೊಂದಿದೆ.


Click it and Unblock the Notifications








