ಕಡಿಮೆ ದರದ ಈ ಸ್ಟೈಲಿಶ್ ಮೊಬೈಲ್ ಈಗ ಮತ್ತಷ್ಟು ಅಗ್ಗ!
ಕಡಿಮೆ ಪ್ರೈಸ್‌ಟ್ಯಾಗ್‌ನ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ ಇನ್ಫಿನಿಕ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇನ್ಫಿನಿಕ್ಸ್ ಸಂಸ್ಥೆಯ ಇನ್ಫಿನಿಕ್ಸ್ ಹಾಟ್ 30i ಮೊಬೈಲ್ ಇದೀಗ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಬೊಂಬಾಟ್ ರಿಯಾಯಿತಿ ಬೆಲೆಯನ್ನು ಪಡೆದಿದ್ದು, ಖರೀದಿದಾರರು ಅಚ್ಚರಿಯಿಂದ ನೋಡುವಂತೆ ಆಗಿದೆ.
ಹೌದು, ದೈತ್ಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್‌ನಲ್ಲಿ ಇನ್ಫಿನಿಕ್ಸ್ ಹಾಟ್ 30i ಫೋನ್ ಶೇ. 30% ರಷ್ಟು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8 GB RAM + 128 GB ಸ್ಟೋರೇಜ್ ವೇರಿಯಂಟ್ ಅನ್ನು 8,299 ರೂ. ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಗ್ರಾಹಕರಿಗೆ ಎಕ್ಸ್‌ಚೇಂಜ್ ಕೊಡುಗೆ ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಡಿಸ್ಕೌಂಟ್ ಸಹ ಸಿಗಲಿದೆ.

ಹಾಗೆಯೇ ಇನ್ಫಿನಿಕ್ಸ್ ಸಂಸ್ಥೆಯ ಈ ಮೊಬೈಲ್ ಮೀಡಿಯಾ ಟೆಕ್ G37 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಇನ್ನು ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದ್ದು, ಇದರ ಸೆಲ್ಫಿ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗಾದರೇ ಇನ್ಫಿನಿಕ್ಸ್ ಹಾಟ್ 30i ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ ಹಾಟ್ 30i - ಫೀಚರ್ಸ್
ಇನ್ಫಿನಿಕ್ಸ್ ಹಾಟ್ 30i ಮೊಬೈಲ್ 6.6 ಇಂಚಿನ ಫುಲ್ ವ್ಯೂ ಡಿಸ್‌ಪ್ಲೇ ಪಡೆದುಕೊಂಡಿದ್ದು, ಹಾಗೆಯೇ ಇದರ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಪಡೆದಿದೆ. ಇದರೊಂದಿಗೆ 80Hz ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಸಹ ಒಳಗೊಂಡಿದೆ.

ಇನ್ಫಿನಿಕ್ಸ್ ಹಾಟ್ 30i ಫೋನ್ ಮೀಡಿಯಾ ಟೆಕ್ G37 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ಸಪೋರ್ಟ್ ಸಹ ಪಡೆದಿದೆ. ಇನ್ನುಳಿದಂತೆ ಈ ಫೋನ್ 8 GB RAM ಮತ್ತು 128GB ಹಾಗೂ 4GB + 64GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಅನ್ನು 1TB ವರೆಗೆ ವಿಸ್ತರಣೆ ಮಾಡಬಹುದಾಗಿದೆ.
ಇನ್ಫಿನಿಕ್ಸ್ ಹಾಟ್ 30i ಫೋನ್ ಡ್ಯುಯಲ್ AI ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಕ್ಯಾಮೆರಾಗಳು ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಸೌಲಭ್ಯ AI ಬ್ಯೂಟಿ ಮತ್ತು ಪೋರ್ಟ್ರೇಟ್ ಸೇರಿದಂತೆ ಫೋಟೋ ಕ್ಲಿಕ್ ಮಾಡಲು ಹಲವಾರು ಆಕರ್ಷಕ ಮೋಡ್‌ಗಳ ಆಯ್ಕೆಯನ್ನು ಸಪೋರ್ಟ್ ಮಾಡುತ್ತದೆ.
ಇನ್ಫಿನಿಕ್ಸ್ ಸಂಸ್ಥೆಯ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಇದಕ್ಕೆ ಪೂರಕವಾಗಿ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಸೈಡ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಒದಗಿಸಲಾಗಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳನ್ನು ನೋಡುವುದಾರೆ ಇನ್ಫಿನಿಕ್ಸ್ ಹಾಟ್ 30i ಫೋನ್ 4G, ವೈ ಫೈ, ಬ್ಲೂಟೂತ್ ಆವೃತ್ತಿ 5.0 ಹಾಗೂ ಯುಎಸ್‌ಬಿ ಟೈಪ್ ಸಿ, ಓಟಿಜಿ ಫೀಚರ್ಸ್ ಹೊಂದಿದೆ. ಇನ್ಫಿನಿಕ್ಸ್ ಹಾಟ್ 30i ಮೊಬೈಲ್ 8 GB RAM + 128 GB ಹಾಗೂ 4GB + 64 GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಇದು ಒಳಗೊಂಡಿದೆ.


Click it and Unblock the Notifications








