5,000mAh ಬ್ಯಾಟರಿಯ ಈ ಫೋನ್ ಭಾರೀ ಡಿಸ್ಕೌಂಟ್ ಪಡೆದಿದೆ!..ಆಫರ್ ಬೆಲೆ?
ಲೀಡಿಂಗ್ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಇದೀಗ ಮೊಬೈಲ್ ಬೊನಾಂಜಾ ಸೇಲ್ ಶುರು ಮಾಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಈ ಮಾರಾಟ ಮೇಳದಲ್ಲಿ ಮೊಬೈಲ್‌ಗಳಿಗೆ ಭಾರೀ ರಿಯಾಯಿತಿ ಲಭ್ಯ ಮಾಡಿದೆ. ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾಂಜಾ ಸೇಲ್ ಮೇಳದಲ್ಲಿ ಕಡಿಮೆ ದರದ ಇನ್ಫಿನಿಕ್ಸ್ ಹಾಟ್ 30i ಮೊಬೈಲ್ ಬಿಗ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಸಂಸ್ಥೆಯು ಮೊಬೈಲ್ಸ್ ಬೊನಾಂಜಾ ಸೇಲ್ ಆಯೋಜಿಸಿದ್ದು, ಈ ಸೇಲ್ ಇದೇ ಡಿಸೆಂಬರ್ 6 ರ ವರೆಗೂ ಲೈವ್ ಇರಲಿದೆ. ಈ ಸೇಲ್ ನಲ್ಲಿ ಇನ್ಫಿನಿಕ್ಸ್ ಹಾಟ್ 30i (128GB) ಮೊಬೈಲ್ ಮೇಲೆ ಶೇ. 25% ರಷ್ಟು ಆಫರ್ ಲಭ್ಯ ಮಾಡಿದ್ದು, ಖರೀದಿದಾರರು 7,499ರೂ. ಗಳಿಗೆ ಖರೀದಿಸಬಹುದು. ಲಭ್ಯ ಇರುವ ಇತರೆ ಕೊಡುಗೆ ಸೇರಿ ಈ ಫೋನ್ ಅನ್ನು 7,499ರೂ. ಗಳಿಗೂ ಖರೀದಿಸಲು ಅವಕಾಶ ಇದೆ.

ಅಂದಹಾಗೆ ಇನ್ಫಿನಿಕ್ಸ್ ಹಾಟ್ 30i ಮೊಬೈಲ್ ಮೀಡಿಯಾ ಟೆಕ್ G37 ಪ್ರೊಸೆಸರ್ ಒಳಗೊಂಡಿದ್ದು, ಇದರೊಂದಿಗೆ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇನ್ನು ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ಸೆಲ್ಫಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಇನ್ಫಿನಿಕ್ಸ್ ಹಾಟ್ 30i ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹೇಗಿದೆ ಇದರ ಡಿಸೈನ್ ಹಾಗೂ ರಚನೆ
ಇನ್ಫಿನಿಕ್ಸ್ ಹಾಟ್ 30i ಮೊಬೈಲ್ 6.6 ಇಂಚಿನ ಫುಲ್ ವ್ಯೂ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಹಾಗೆಯೇ ಇದರ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಹೊಂದಿದೆ. ಇದರೊಂದಿಗೆ 80Hz ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಸಹ ಒಳಗೊಂಡಿದೆ.
ಪ್ರೊಸೆಸರ್ ಪವರ್ ಎಷ್ಟಿದೆ
ಇನ್ಫಿನಿಕ್ಸ್ ಹಾಟ್ 30i ಮೊಬೈಲ್ ಮೀಡಿಯಾ ಟೆಕ್ G37 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ಸಪೋರ್ಟ್ ಸಹ ಪಡೆದಿದೆ. ಇನ್ನುಳಿದಂತೆ ಈ ಫೋನ್ 8 GB RAM ಮತ್ತು 128GB ಹಾಗೂ 4GB + 64GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಅನ್ನು 1TB ವರೆಗೆ ವಿಸ್ತರಣೆ ಮಾಡಬಹುದಾಗಿದೆ.
ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಮಾಹಿತಿ
ಇನ್ಫಿನಿಕ್ಸ್ ಹಾಟ್ 30i ಮೊಬೈಲ್ ಡ್ಯುಯಲ್ AI ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್ ನಲ್ಲಿದೆ. ಇದರೊಂದಿಗೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಕ್ಯಾಮೆರಾಗಳು ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಸೌಲಭ್ಯ AI ಬ್ಯೂಟಿ ಮತ್ತು ಪೋರ್ಟ್ರೇಟ್ ಸೇರಿದಂತೆ ಫೋಟೋ ಕ್ಲಿಕ್ ಮಾಡಲು ಹಲವಾರು ಆಕರ್ಷಕ ಮೋಡ್‌ಗಳ ಆಯ್ಕೆಯನ್ನು ಸಪೋರ್ಟ್ ಮಾಡುತ್ತದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ
ಇನ್ಫಿನಿಕ್ಸ್ ಹಾಟ್ 30i ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಇದಕ್ಕೆ ಪೂರಕವಾಗಿ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಸೈಡ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಒದಗಿಸಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ 4G, ವೈ ಫೈ, ಬ್ಲೂಟೂತ್ ಆವೃತ್ತಿ 5.0 ಹಾಗೂ ಯುಎಸ್‌ಬಿ ಟೈಪ್ ಸಿ, ಓಟಿಜಿ ಫೀಚರ್ಸ್ ಹೊಂದಿದೆ.


Click it and Unblock the Notifications








