Home
ಸುದ್ದಿಜಾಲ

ಇನ್ಫಿನಿಕ್ಸ್ ಹಾಟ್‌ 30i ಅನಾವರಣ: ವಿಶೇಷ ಫೀಚರ್ಸ್‌ ಏನು?, ಬೆಲೆ ಎಷ್ಟು?

ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ನಿರ್ಮಾಣ ಆಗಿದ್ದು, ಬಹುನಿರೀಕ್ಷಿತ ಇನ್ಫಿನಿಕ್ಸ್ ಹಾಟ್‌ ಸರಣಿಯ ಇನ್ಫಿನಿಕ್ಸ್ ಹಾಟ್‌ 30i ಇಂದು ಅನಾವರಣವಾಗಿದೆ. ಈ ಫೋನ್‌ನಲ್ಲಿ RAM ಅನ್ನು 16GB ವರೆಗೆ ವಿಸ್ತರಿಸಬಹುದಾದ ಅವಕಾಶ ಕಲ್ಪಿಸಲಾಗಿದ್ದು, ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿರುವ ಈ ಫೋನ್‌ನಲ್ಲಿ ಇನ್ನೂ ಹಲವು ವಿಶೇಷತೆ ಇವೆ.

ಹೌದು, ಭಾರತದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಇನ್ಫಿನಿಕ್ಸ್ ಹಾಟ್‌ 30i ( Infinix HOT 30i ) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದ್ದು, ಇದು ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಮೀಡಿಯಾಟೆಕ್ G37 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ಫಿನಿಕ್ಸ್ ಹಾಟ್‌ 30i ಅನಾವರಣ: ವಿಶೇಷ ಫೀಚರ್ಸ್‌ ಏನು?, ಬೆಲೆ ಎಷ್ಟು?

ಇನ್ಫಿನಿಕ್ಸ್ ಹಾಟ್‌ 30i ಡಿಸ್‌ಪ್ಲೇ ವಿವರ: ಈ ಫೋನ್ 6.6 ಇಂಚಿನ ಫುಲ್ ವ್ಯೂ ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್‌ ನೀಡಲಿದೆ. ಹಾಗೆಯೇ 80Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹಾಗೂ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಇನ್ಫಿನಿಕ್ಸ್ ಹಾಟ್‌ 30i ಪ್ರೊಸೆಸರ್‌ ಯಾವುದು? : ಈ ಹೊಸ ಫೋನ್ ಆರ್ಮ್ ಮಾಲಿ G57 GPU ನೊಂದಿಗೆ ಮೀಡಿಯಾ ಟೆಕ್ G37 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ನಲ್ಲಿ ರನ್‌ ಆಗಲಿದೆ. ಇನ್ನುಳಿದಂತೆ ಈ ಫೋನ್ 8GB RAM ಮತ್ತು 8GB ವರ್ಚುವಲ್ RAM ಆಯ್ಕೆಯೊಂದಿಗೆ 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಇದನ್ನು 1TB ವರೆಗೆ ವಿಸ್ತರಣೆ ಮಾಡಬಹುದಾಗಿದೆ.

ಇನ್ಫಿನಿಕ್ಸ್ ಹಾಟ್‌ 30i ಕ್ಯಾಮೆರಾ ರಚನೆ: ಕ್ಯಾಮೆರಾ ವಿಚಾರದಲ್ಲಿ ಈ ಫೋನ್ ಡ್ಯುಯಲ್‌ AI ಕ್ಯಾಮೆರಾ ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಪ್ರಮುಖವಾಗಿದೆ. ಇದರೊಂದಿಗೆ ಸೆಲ್ಫಿ ಉದ್ದೇಶಕ್ಕೆ 5 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್‌ ಆಯ್ಕೆ ನೀಡಲಾಗಿದೆ. ಈ ಎರಡೂ ಕ್ಯಾಮೆರಾಗಳು ಡ್ಯುಯಲ್ ಎಲ್ಇಡಿ ಫ್ಲ್ಯಾಶ್‌ ಸೌಲಭ್ಯ AI ಬ್ಯೂಟಿ ಮತ್ತು ಪೋರ್ಟ್ರೇಟ್ ಸೇರಿದಂತೆ ಚಿತ್ರಗಳನ್ನು ಕ್ಲಿಕ್ ಮಾಡಲು ಹಲವಾರು ಮೋಡ್‌ಗಳ ಆಯ್ಕೆಯನ್ನು ಬೆಂಬಲಿಸಲಿವೆ.

ಇನ್ಫಿನಿಕ್ಸ್ ಹಾಟ್‌ 30i ಅನಾವರಣ: ವಿಶೇಷ ಫೀಚರ್ಸ್‌ ಏನು?, ಬೆಲೆ ಎಷ್ಟು?

ಇನ್ಫಿನಿಕ್ಸ್ ಹಾಟ್‌ 30i ಬ್ಯಾಟರಿ ಸಾಮರ್ಥ್ಯ: ಪವರ್ ಮ್ಯಾರಥಾನ್ ತಂತ್ರಜ್ಞಾನ ಆಧಾರಿತ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದ್ದು, ಈ ವಿಶೇಷ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ನ ಶಕ್ತಿಯನ್ನು ಉಳಿಸುವ ಮೂಲಕ ಹೆಚ್ಚಿನ ಬ್ಯಾಕಪ್‌ ನೀಡಲಿದೆ. ಅಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 25 ಗಂಟೆಗಳಿಗಿಂತ ಹೆಚ್ಚುಕಾಲ ಬ್ಯಾಕಪ್‌ ನೀಡಲಿದ್ದು, 30 ದಿನಗಳಿಗಿಂತ ಹೆಚ್ಚು ಸ್ಟ್ಯಾಂಡ್‌ಬೈ ಸಮಯವನ್ನು ನೀಡಲಿದೆ.

ಇನ್ನುಳಿದಂತೆ ಈ ಫೋನ್‌ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ನೀಡಲಾಗಿದ್ದು, ಕನೆಕ್ಟಿವಿಟಿ ವಿಚಾರದಲ್ಲಿ ಇನ್ಫಿನಿಕ್ಸ್ ಹಾಟ್‌ 30i ಇದು 4G, ವೈ ಫೈ, ಬ್ಲೂಟೂತ್ ಆವೃತ್ತಿ 5.0 ಹಾಗೂ ಯುಎಸ್‌ಬಿ ಟೈಪ್‌ ಸಿ, ಓಟಿಜಿ ಸೇರಿದಂತೆ ಫೆಸ್‌ ಅನ್‌ಲಾಕ್‌ ಫೀಚರ್ಸ್‌ ಆಯ್ಕೆಯನ್ನು ಇದು ಪಡೆದುಕೊಂಡಿದೆ.

ಇನ್ಫಿನಿಕ್ಸ್ ಹಾಟ್‌ 30i ಅನಾವರಣ: ವಿಶೇಷ ಫೀಚರ್ಸ್‌ ಏನು?, ಬೆಲೆ ಎಷ್ಟು?

ಇನ್ಫಿನಿಕ್ಸ್ ಹಾಟ್‌ 30i ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ 8,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಈ ಫೋನ್ ಮಾರಿಗೋಲ್ಡ್, ಡೈಮಂಡ್ ವೈಟ್, ಗ್ಲೇಸಿಯರ್ ಬ್ಲೂ ಮತ್ತು ಮಿರರ್ ಬ್ಲ್ಯಾಕ್ ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಫೋನ್‌ ಖರೀದಿ ಮಾಡಲು ನೀವು ಸ್ವಲ್ಪ ಸಮಯ ಕಾಯಬೇಕು. ಯಾಕೆಂದರೆ ಏಪ್ರಿಲ್ 3 ರಿಂದ ಫ್ಲಿಪ್‌ಕಾರ್ಟ್‌ ಮಾರಾಟಕ್ಕೆ ಲಭ್ಯವಿರಲಿದೆ.

Best Mobiles in India

English summary
Infinix Hot 30i smartphone has been unveiled in India and this phone has got a special new technology in terms of battery and RAM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+