Infinix: ಇನ್ಫಿನಿಕ್ಸ್ ಹಾಟ್ 40 ಪ್ರೊ, ಇನ್ಫಿನಿಕ್ಸ್ ಹಾಟ್ 40 ಲಾಂಚ್: ಸಖತ್ ಫೀಚರ್ಸ್ ಆಯ್ಕೆ, ಬೆಲೆ ಎಷ್ಟು?
ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix smartphone) ಲಾಂಚ್ ಆದರೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಿರುಗಾಳಿ ಖಂಡಿತಾ. ಯಾಕೆಂದರೆ ಈ ಫೋನ್‌ಗಳು ಅತ್ಯಂತ ಉತ್ತಮ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತವೆ. ಅದರಂತೆ ಈಗ ಇನ್ಫಿನಿಕ್ಸ್ ಹಾಟ್ 40 ಸರಣಿ (Infinix Hot 40 Series) ಫೋನ್‌ಗಳನ್ನು ಅನಾವರಣ ಮಾಡಲಾಗಿದೆ.
ಹೌದು, ಇನ್ಫಿನಿಕ್ಸ್ ಹಾಟ್ 40 ಸರಣಿಯಲ್ಲಿ ಮೂರು ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ. ಇನ್ಫಿನಿಕ್ಸ್ ಹಾಟ್ 40i ಫೋನ್, ಇನ್ಫಿನಿಕ್ಸ್ ಹಾಟ್ 40 ಪ್ರೊ ಹಾಗೂ ಇನ್ಫಿನಿಕ್ಸ್ ಹಾಟ್ 40 ಅನ್ನು (Infinix Hot 40i, Infinix Hot 40 Pro and Infinix Hot 40) ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್ ಆಯ್ಕೆ ಪಡೆದಿವೆ. ಇದರಲ್ಲಿ ಪ್ರೊ ಮಾದರಿ 120Hz ರಿಫ್ರೆಶ್ ರೇಟ್ ಆಯ್ಕೆ, 256GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಈ ಫೋನ್ ಹೊಂದಿದೆ. ಹಾಗಿದ್ರೆ, ಈ ಇನ್ಫಿನಿಕ್ಸ್ ಹಾಟ್ 40 ಪ್ರೊ ಹಾಗೂ ಇನ್ಫಿನಿಕ್ಸ್ ಹಾಟ್ 40 ಫೋನ್‌ಗಳ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ಫಿನಿಕ್ಸ್ ಹಾಟ್ 40 ಪ್ರೊ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ (Infinix Hot 40 Pro) 6.78 ಇಂಚಿನ ಫುಲ್ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 460 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 85% NTSC ಬಣ್ಣದ ಹರವು, 120Hz ರಿಫ್ರೆಶ್ ರೇಟ್, 2 40Hz ಟಚ್ ಮಾದರಿ ರೇಟ್ ಮೂಲಕ ಉತ್ತಮ ಎನಿಸಿದೆ.
ಇನ್ಫಿನಿಕ್ಸ್ ಹಾಟ್ 40 ಪ್ರೊ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G99 6nm ಪ್ರೊಸೆಸರ್ ಬಲ ಪಡೆದಿದ್ದು, ಆರ್ಮ್ ಮಾಲಿ-G57 MC2 ನೊಂದಿಗೆ ಪ್ಯಾಕ್ ಆಗಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 13 ಅನ್ನು ರನ್ ಮಾಡಲಿದೆ. ಉಳಿದಂತೆ ಈ ಫೋನ್ 8GB RAM, 128GB / 256GB ಸ್ಟೋರೇಜ್ ಆಯ್ಕೆ ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು 1TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಇನ್ಫಿನಿಕ್ಸ್ ಹಾಟ್ 40 ಪ್ರೊ ಕ್ಯಾಮೆರಾ ರಚನೆ: ಈ ಫೋನ್ f/1.75 ಅಪರ್ಚರ್ ನೊಂದಿಗೆ 108 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ, 2 ಮೆಗಾಪಿಕ್ಸೆಲ್‌ಮ್ಯಾಕ್ರೋ ಕ್ಯಾಮರಾ ಹಾಗೂ f/2.2 ಅಪರ್ಚರ್ ಜೊತೆಗೆ 32 ಮೆಗಾಪಿಕ್ಸೆಲ್‌ಮ್ಯಾಕ್ರೋ ಫ್ರಂಟ್ ಕ್ಯಾಮೆರಾ ಹಾಗೂ ಡ್ಯುಯಲ್ ಎಲ್‌ಇಡಿ ಫ್ಲಾಶ್ ಆಯ್ಕೆ ಪಡೆದಿದೆ. ಈ ಮೂಲಕ ಬಳಕೆದಾರರು ಉತ್ತಮವಾದ ಫೋಟೋಗ್ರಫಿ ಅನುಭವ ಪಡೆಯಬಹುದು.
ಇನ್ಫಿನಿಕ್ಸ್ ಹಾಟ್ 40 ಪ್ರೊ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೋ ಜಾಕ್, ಎಫ್‌ಎಮ್ ರೇಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಡಿಟಿಎಸ್, ಹೈ-ರೆಸ್ ಆಡಿಯೋ, ಡ್ಯುಯಲ್ 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5, ಜಿಪಿಎಸ್ + GLONASS, ಯುಎಸ್‌ಬಿ ಟೈಪ್-ಸಿ ಜೊತೆಗೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ಇನ್ಫಿನಿಕ್ಸ್ ಹಾಟ್ 40 ಡಿಸ್‌ಪ್ಲೇ ವಿವರ: ಇನ್ನು ಇನ್ಫಿನಿಕ್ಸ್ ಹಾಟ್ 40 (Infinix Hot 40) ಫೋನ್ ವಿಚಾರಕ್ಕೆ ಬಂದರೆ ಈ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 2460× 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 500 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹಾಗೂ 85% NTSC ಬಣ್ಣದ ಹರವು, 90Hz ರಿಫ್ರೆಶ್ ರೇಟ್, 270Hz ಟಚ್ ಮಾದರಿ ರೇಟ್ ಪಡೆದಿದೆ.
ಇನ್ಫಿನಿಕ್ಸ್ ಹಾಟ್ 40 ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G88 12nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ARM ಮಾಲಿ-G52 2EEMC2 GPU ಬಲದೊಂದಿಗೆ 8GB RAM, 128GB / 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಇದರೊಂದಿಗೆ ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲ ನೀಡಲಾಗಿದ್ದು, 1TB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದು.
ಇನ್ಫಿನಿಕ್ಸ್ ಹಾಟ್ 40 ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾ ಆಯ್ಕೆಯೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆ ಉದ್ದೇಶಕ್ಕೆ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಫೋನ್ ಸಹ ಡ್ಯುಯಲ್ ಎಲ್‌ಇಡಿ ಫ್ಲಾಶ್ ಆಯ್ಕೆ ಪಡೆದಿದ್ದು, ಅತ್ಯುತ್ತಮ ಫೋಟೋಗಳನ್ನು ಒದಗಿಸುವ ಕೆಲಸ ಮಾಡುತ್ತದೆ.

ಇನ್ಫಿನಿಕ್ಸ್ ಹಾಟ್ 40 ಬ್ಯಾಟರಿ ಹಾಗೂ ಇತರೆ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೋ ಜಾಕ್, ಎಫ್‌ಎಮ್ ರೇಡಿಯೋ, ಡ್ಯುಯಲ್ 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5, ಜಿಪಿಎಸ್ + GLONASS, ಯುಎಸ್‌ಬಿ ಟೈಪ್- ಸಿ ಸೇರಿದಂತೆ ಇತರೆ ಫೀಚರ್ಸ್ ಅನ್ನು ಈ ಫೋನ್ ಹೊಂದಿದೆ.
ಇನ್ಫಿನಿಕ್ಸ್ ಹಾಟ್ 40 ಸರಣಿ ಫೋನ್‌ಗಳ ಬೆಲೆ ಹಾಗೂ ಲಭ್ಯತೆ: ಇನ್ಫಿನಿಕ್ಸ್ ಹಾಟ್ 40 8GB + 256GB ಮಾದರಿಗೆ NGN 168,600 (USD 213 / ಅಂದಾಜು 17,800 ರೂ.ಗಳು) ಮತ್ತು ಇನ್ಫಿನಿಕ್ಸ್ ಹಾಟ್ 40 ಪ್ರೊ 8GB + 256GB ಮಾದರಿಗೆ NGN 195,500 ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ಗಳು ಸದ್ಯಕ್ಕೆ ನೈಜೀರಿಯಾದಲ್ಲಿ ಮಾತ್ರ ಲಭ್ಯ ಇವೆ. ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಲಾಂಚ್ ಆಗುವ ನಿರೀಕ್ಷೆ ಇದೆ.


Click it and Unblock the Notifications








