Home
ಸುದ್ದಿಜಾಲ

50ಎಂಪಿ ಕ್ಯಾಮೆರಾ ಸೌಲಭ್ಯ ಇರುವ ಈ ಅಗ್ಗದ ಫೋನ್‌ ಈಗ ಇನ್ನಷ್ಟು ಅಗ್ಗ!

ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಎನಿಸಿರುವ ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಗೋಟ್‌ ಸೇಲ್‌ (Flipkart GOAT Sale 2024) ಮಾರಾಟ ಮೇಳ ಲೈವ್‌ ಆಗಿದೆ. ಈ ಮಾರಾಟದಲ್ಲಿ ಆಯ್ದ ಮೊಬೈಲ್‌ಗಳಿಗೆ ಬೊಂಬಾಟ್‌ ರಿಯಾಯಿತಿ ಘೋಷಿಸಿದೆ. ಆ ಲಿಸ್ಟ್‌ನಲ್ಲಿ ಇನ್ಫಿನಿಕ್ಸ್‌ ಹಾಟ್‌ 40i (Infinix Hot 40i) ಮೊಬೈಲ್‌ ಸಹ ಭಾರೀ ಡಿಸ್ಕೌಂಟ್‌ ಪಡೆದಿದ್ದು, ಗ್ರಾಹಕರು ಫುಲ್‌ ಖುಷ್‌ ಆಗುವಂತೆ ಮಾಡಿದೆ. ಅಂದಹಾಗೆ ಈ ಫೋನ್‌ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತನ್ನ ವೆಬ್‌ಸೈಟ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಗೋಟ್‌ ಸೇಲ್‌ (Flipkart GOAT Sale 2024) ಮಾರಾಟ ಚಾಲ್ತಿ ಇದೆ. ಈ ಸೇಲ್‌ನಲ್ಲಿ ಶಿಯೋಮಿ ಸಂಸ್ಥೆಯ ಅಗ್ಗದ ಬೆಲೆಯ ವಿವೋ T3x 5G ಮೊಬೈಲ್‌ ಶೇ. 18% ರಷ್ಟು ನೇರ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಫೋನಿನ 8 GB RAM + 256 GB ವೇರಿಯಂಟ್‌ ಆಫರ್‌ನಲ್ಲಿ 8,999ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ.

50ಎಂಪಿ ಕ್ಯಾಮೆರಾ ಸೌಲಭ್ಯ ಇರುವ ಈ ಅಗ್ಗದ ಫೋನ್‌ ಈಗ ಇನ್ನಷ್ಟು ಅಗ್ಗ!

ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಜೊತೆಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ 8 GB RAM + 256 GB ವೇರಿಯಂಟ್‌ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಮುಂದೆ ನೋಡೋಣ ಬನ್ನಿರಿ.

Infinix HOT 40i ಫೀಚರ್ಸ್‌

Infinix HOT 40i ಸ್ಮಾರ್ಟ್‌ಫೋನ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 480 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲದೊಂದಿಗೆ ಪಡೆದಿದೆ, 1500:1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಹಾಗೂ 180Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಒಳಗೊಂಡಿದೆ.

Infinix HOT 40i ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್‌ ಯುನಿಸೋಕ್‌ T606 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಜೊತೆಗೆ ಮಾಲಿ G57 MP1 GPU ಸಪೋರ್ಟ್‌ ಅನ್ನು ಪಡೆದಿದೆ. ಈ ಫೋನ್‌ ಆಂಡ್ರಾಯ್ಡ್‌ 13 ಬೆಮಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಜೊತೆಗೆ 8GB ವರ್ಚುವಲ್ RAM ಅನ್ನು ಸಹ ಬೆಂಬಲಿಸಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

Infinix HOT 40i ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. ಜೊತೆಗೆ AI ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ವಾಡ್ LED ರಿಂಗ್ ಫ್ಲಾಶ್ ಹಾಗೂ ಡ್ಯುಯಲ್ LED ಫ್ಲ್ಯಾಶ್ ಅನ್ನು ಸಹ ಪಡೆದುಕೊಂಡಿದೆ.

Infinix HOT 40i ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.0, GPS + GLONASS, USB ಟೈಪ್-C ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಅನ್ನು Starlit Black, Palm Blue, Horizon Gold ಮತ್ತು Starfall ಗ್ರೀನ್ ಬಣ್ಣಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
Infinix HOT 40i amazing price drop on Flipkart goat sale 2024. check out offer, price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+