Home
ಸುದ್ದಿಜಾಲ

ಇನ್ಫಿನಿಕ್ಸ್‌ ಹಾಟ್‌ 40i ಲಾಂಚ್‌ಗೆ ಮುಹೂರ್ತ ಫಿಕ್ಸ್‌!..ಬೆಲೆ ಬಗ್ಗೆ ತಿಳಿದ್ರೆ ಅಚ್ಚರಿ ಪಡ್ತೀರಾ!

ಇನ್ಫಿನಿಕ್ಸ್‌ ಮೊಬೈಲ್‌ ಸಂಸ್ಥೆಯು (Infinix) ದೇಶಿಯ ಮಾರುಕಟ್ಟೆಗೆ ತನ್ನ ಹಾಟ್ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಲು ಸಕಲ ರೀತಿ ಸಜ್ಜಾಗಿದೆ. ಇನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವ ಫೋನ್‌ ಇನ್ಫಿನಿಕ್ಸ್‌ ಹಾಟ್‌ 40i (Infinix Hot 40i) ಆಗಿದೆ.

ಹೌದು, ಸಂಸ್ಥೆಯು ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ ಅನ್ನು ಇದೇ ಫೆಬ್ರವರಿ 16 ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇನ್ನು ಬಿಡುಗಡೆಗೆ ಮುಂಚಿತವಾಗಿ, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಮೈಕ್ರೋ-ಸೈಟ್ ಲೈವ್ ಆಗಿದೆ. ಅಂದಹಾಗೆ ಈ ಫೋನಿನ ಲೀಕ್‌ ಫೀಚರ್ಸ್‌ ಈಗಾಗಲೇ ಮೊಬೈಲ್‌ ಪ್ರಿಯರ ಗಮನ ಸೆಳೆದಿವೆ.

ಇನ್ಫಿನಿಕ್ಸ್‌ ಹಾಟ್‌ 40i ಲಾಂಚ್‌ಗೆ ಮುಹೂರ್ತ ಫಿಕ್ಸ್‌!..ಅಚ್ಚರಿ ಬೆಲೆ!

ಈ ಫೋನ್‌ 8GB ವರ್ಚುವಲ್ RAM ಸೌಲಭ್ಯ ಕೂಡಾ ಪಡೆದಿರಲಿದ್ದು, ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಇದೆ. ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಸೌಲಭ್ಯ ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಉಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ಹಾಟ್‌ 40i ಫೋನಿನ ನಿರೀಕ್ಷಿತ ಫೀಚರ್ಸ್

ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು, ಈ ಡಿಸ್‌ಪ್ಲೇಯು 720 × 1612 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇರಲಿದೆ. ಇದು 90Hz ರಿಫ್ರೆಶ್ ರೇಟ್ ಜೊತೆಗೆ ಸೆಂಟರ್ಡ್ ಪಂಚ್-ಹೋಲ್ ಕಟೌಟ್ ರಚನೆ ಪಡೆದಿದ್ದು, 480 ನಿಟ್ಸ್ ಪೀಕ್ ಬ್ರೈಟ್‌ನೆಸ್ ಸೌಲಭ್ಯದೊಂದಿಗೆ ಎಂಟ್ರಿ ಕೊಡಲಿದೆ.

ಇನ್ಫಿನಿಕ್ಸ್‌ ಹಾಟ್‌ 40i ಲಾಂಚ್‌ಗೆ ಮುಹೂರ್ತ ಫಿಕ್ಸ್‌!..ಅಚ್ಚರಿ ಬೆಲೆ!

ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಪವರ್‌ ಸೌಲಭ್ಯವನ್ನು ಪಡೆದಿರಲಿದ್ದು, ಇದಕ್ಕೆ ಸಪೋರ್ಟ್‌ ಆಗಿ ARM ಮಾಲಿ G57 MP1 GPU ಅನ್ನು ಪಡೆದಿರಲಿದೆ. ಹಾಗೆಯೇ ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ.

ಹಾಗೆಯೇ 4GB RAM ಮತ್ತು 128GB ಹಾಗೂ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಲಗ್ಗೆ ಇಡಲಿದೆ. ಈ ಫೋನ್‌ 8GB ವರ್ಚುವಲ್ RAM ಸೌಲಭ್ಯ ಕೂಡಾ ಪಡೆದಿರಲಿದ್ದು, ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಇದೆ.

ಇನ್ಫಿನಿಕ್ಸ್‌ ಹಾಟ್‌ 40i ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿರುವುದು ಬಹುತೇಕ ಖಚಿತ ಆಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿರಲಿದ್ದು, ಇದು ಸೆಕೆಂಡರಿ AI ಲೆನ್ಸ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಪಡೆದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ವೈ-ಫೈ, ಬ್ಲೂಟೂತ್, 4 ಜಿ, ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌, ಕಂಪಾಸ್‌ ಅನ್ನು ಪಡೆದಿರಲಿದೆ.

ಇನ್ಫಿನಿಕ್ಸ್‌ ಹಾಟ್‌ 40i ಬಜೆಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಸುಮಾರು 8000ರೂ. ಗಳ ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ. ಈ ಫೋನ್‌ ಪಾಮ್ ಬ್ಲೂ, ಹಾರಿಜಾನ್ ಗೋಲ್ಡ್, ಸ್ಟಾರ್ಲಿಟ್ ಬ್ಲಾಕ್, ಸ್ಟಾರ್ಫಾಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Infinix Hot 40i India Launch Date Set for February 16. Here's what to expect and all other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+