Home
ಸುದ್ದಿಜಾಲ

ಇಂದು ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಫಸ್ಟ್‌ ಸೇಲ್‌!..ಭಾರೀ ಆಫರ್‌ ಲಭ್ಯ!

ಅಗ್ಗದ ಬೆಲೆಯ ಫೋನ್‌ಗಳ ಮೂಲಕ ಗುರುತಿಸಿಕೊಂಡಿರುವ ಇನ್ಫಿನಿಕ್ಸ್‌ ಸಂಸ್ಥೆಯು ಹೊಸದಾಗಿ ಮಾಡಿರುವ ಇನ್ಫಿನಿಕ್ಸ್‌ ಹಾಟ್‌ 40i ಈಗಾಗಲೇ ತನ್ನ ಫೀಚರ್ಸ್‌ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ಇಂದು (ಫೆಬ್ರವರಿ 21 ರಂದು) ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮಧ್ಯಾಹ್ನ 12 ರಿಂದ ಮಾರಾಟ ಪ್ರಾರಂಭ ಮಾಡಲಿದೆ.

ಹೌದು, ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ ಸೇಲ್‌ ಫ್ಲಿಪ್‌ಕಾರ್ಟ್‌ ಇಂದು ಶುರುವಾಗಲಿದ್ದು, ಗ್ರಾಹಕರು ಭರ್ಜರಿ ರಿಯಾಯಿತಿ ಕೊಡುಗೆಯೊಂದಿಗೆ ಫೋನ್‌ ಖರೀದಿ ಮಾಡಲು ಅವಕಾಶ ಇದೆ. ಅಂದಹಾಗೆ ಈ ಮೊಬೈಲ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಒಳಗೊಂಡಿದ್ದು, ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ.

ಇಂದು ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಫಸ್ಟ್‌ ಸೇಲ್‌!..ಭಾರೀ ಆಫರ್‌ ಲಭ್ಯ!

ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಬೆಲೆಯು 9,999ರೂ. ಆಗಿದ್ದು, ಗ್ರಾಹಕರು ಲಭ್ಯ ಇರುವ ಆಫರ್‌ ಮೂಲಕ 8,999ರೂ. ಗಳಿಗೆ ಖರೀದಿಸಲು ಚಾನ್ಸ್‌ ಇದೆ. ಅಂದಹಾಗೆ ಈ ಫೋನ್‌ 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದು ಇನ್ಫಿನಿಕ್ಸ್‌ ಹಾಟ್‌ 40i ಫೋನ್‌ ಫಸ್ಟ್‌ ಸೇಲ್‌!..ಭಾರೀ ಆಫರ್‌ ಲಭ್ಯ!

ಇನ್ಫಿನಿಕ್ಸ್‌ ಹಾಟ್‌ 40i - ಫೀಚರ್ಸ್‌

ಇನ್ಫಿನಿಕ್ಸ್‌ ಕಂಫನಿಯ ಈ ಫೋನ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 480 ನಿಟ್ಸ್‌ ಬ್ರೈಟ್‌ನೆಸ್‌ ಸಪೋರ್ಟ್‌ ಜೊತೆಗೆ 1500:1 ಕಾಂಟ್ರಾಸ್ಟ್ ಅನುಪಾತವನ್ನು ಪಡೆದಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಹಾಗೂ 180Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಒಳಗೊಂಡಿದೆ.

ಈ ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್‌ ಯುನಿಸೋಕ್‌ T606 SoC ಪ್ರೊಸೆಸರ್‌ ಪವರ್‌ ಪಡೆದಿದ್ದು, ಜೊತೆಗೆ ಮಾಲಿ G57 MP1 GPU ಸಪೋರ್ಟ್‌ ಅನ್ನು ಪಡೆದಿದೆ. ಈ ಫೋನ್‌ ಆಂಡ್ರಾಯ್ಡ್‌ 13 ಸಪೋರ್ಟ್ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. 8GB ವರ್ಚುವಲ್ RAM ಅನ್ನು ಸಹ ಸಪೋರ್ಟ್‌ ಮಾಡಲಿದೆ. ಇದರ ಜೊತೆಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್‌ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಹಿಂಭಾಗದ ಕ್ಯಾಮರಾ ಅನ್ನು ಪಡೆದಿದ್ದು, ಇದರ ಜೊತೆಗೆ AI ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಕ್ವಾಡ್ LED ರಿಂಗ್ ಫ್ಲಾಶ್ ಹಾಗೂ ಡ್ಯುಯಲ್ LED ಫ್ಲ್ಯಾಶ್ ಅನ್ನು ಸಹ ಪಡೆದುಕೊಂಡಿದೆ.

ಇನ್ಫಿನಿಕ್ಸ್‌ ಹಾಟ್‌ 40i ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.0, GPS + GLONASS, USB ಟೈಪ್-C ಅನ್ನು ಪಡೆದಿದೆ.

ಇನ್ನು ಈ ಮೊಬೈಲ್‌ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ಗಳನ್ನು ಪಡೆದಿದೆ. ಅಲ್ಲದೆ ಮ್ಯಾಜಿಕ್ ರಿಂಗ್ ಫೇಸ್ ಅನ್‌ಲಾಕ್, ಬ್ಯಾಕ್‌ಗ್ರೌಂಡ್ ಕಾಲ್, ಚಾರ್ಜಿಂಗ್ ಅನಿಮೇಷನ್, ಚಾರ್ಜ್ ಕಂಪ್ಲೀಷನ್ ರಿಮೈಂಡರ್ ಮತ್ತು ಲೋ ಬ್ಯಾಟರಿ ರಿಮೈಂಡರ್‌ನಂತಹ ಫೀಚರ್ಸ್‌ಗಳನ್ನು ಕೂಡಾ ಪಡೆದುಕೊಂಡಿದೆ.

Best Mobiles in India

English summary
Infinix hot 40i sale today in India via Flipkart website. check Price and Offers details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+