ನಾಳೆ ಲಾಂಚ್ ಆಗಲಿದೆ ಈ ಸ್ಲಿಮ್ 5G ಫೋನ್; ಕುತೂಹಲ ಮೂಡಿಸಿದ ಫೀಚರ್ಸ್!
ಮೊಬೈಲ್ ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವ ಇನ್ಫಿನಿಕ್ಸ್ (Infinix) ಸಂಸ್ಥೆಯು ಕೆಲವು ಭಿನ್ನ ಮಾದರಿಯ ಫೋನ್‌ಗಳ ಮೂಲಕ ಸದ್ದು ಮಾಡಿದೆ. ಈ ಸಂಸ್ಥೆಯ ಹಲವು ಸ್ಮಾರ್ಟ್‌ಫೊನ್‌ಗಳು ಬಜೆಟ್ ಬೆಲೆಯನ್ನು ಪಡೆದಿದ್ದು, ಹಾಗೆಯೇ ತಮ್ಮ ವರ್ಗದಲ್ಲೇ ಆಕರ್ಷಕ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಅದರ ಮುಂದುವರಿದ ಭಾಗವಾಗಿ ಈಗ ಸಂಸ್ಥೆಯು ಹೊಸದಾಗಿ ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಸ್ಮಾರ್ಟ್‌ಫೋನ್ ಅನ್ನು ನಾಳೆ (ಸೆಪ್ಟೆಂಬರ್ 5 ರಂದು) ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಹೌದು, ಇನ್ಫಿನಿಕ್ಸ್ ಸಂಸ್ಥೆಯು ನಾಳೆ (ಸೆಪ್ಟೆಂಬರ್ 5 ರಂದು) ನೂತನ ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಮೊಬೈಲ್ ಅನ್ನು ಭಾರತದಲ್ಲಿ ಲಾಂಚ್ ಮಾಡಲಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣವು ಮೈಕ್ರೋ ಪೇಜ್ ಕೂಡಾ ತೆರೆದಿದೆ. ಇನ್ನು ಈ ಫೋನ್ ಸ್ಲಿಮ್ ವಿನ್ಯಾಸ ಹೊಂದಿದ್ದು, ಜೊತೆಗೆ IP54 ಸ್ಪ್ಯಾಶ್ ಪ್ರೂಫ್ ರೇಟಿಂಗ್ ಆಯ್ಕೆಯನ್ನು ಒಳಗೊಂಡಿರುವುದು ಖಚಿತವಾಗಿದೆ.

ಲೀಕ್ ಮಾಹಿತಿಗಳ ಪ್ರಕಾರ ಈ ಮೊಬೈಲ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಸೌಲಭ್ಯ ಸಹ ಒಳಗೊಂಡಿರುವ ನಿರೀಕ್ಷೆಗಳು ಇವೆ. ಹಾಗಾದರೇ ಬರಲಿರುವ ನೂತನ ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಫೋನಿನ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ ಹಾಟ್ 50 5G ನಿರೀಕ್ಷಿತ ಫೀಚರ್ಸ್
ಇನ್ಫಿನಿಕ್ಸ್ ಹಾಟ್ 50 5G ಫೋನ್ 6.78 ಇಂಚಿನ ಫುಲ್ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದ್ದು, 2460× 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 500 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹಾಗೂ 85% NTSC ಬಣ್ಣದ ಹರವು, 90Hz ರಿಫ್ರೆಶ್ ರೇಟ್, 270Hz ಟಚ್ ಮಾದರಿ ರೇಟ್ ಪಡೆದಿರಲಿದೆ.
ಇನ್ಫಿನಿಕ್ಸ್ ಹಾಟ್ 50 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ರಲಿದೆ. ಹಾಗೆಯೇ ಇದು 4GB RAM + 128GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲ ನೀಡಲಾಗಿದ್ದು, 1TB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದಾದ ಆಯ್ಕೆ ಇರಲಿದೆ.
ಇನ್ಫಿನಿಕ್ಸ್ ಹಾಟ್ 50 5G ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿರಲಿದೆ. ಉಳಿದೆರಡು ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿರುವ ಸಾಧ್ಯತೆಗಳು ಇವೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ.
ಇನ್ಫಿನಿಕ್ಸ್ ಹಾಟ್ 50 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೋ ಜಾಕ್, ಎಫ್‌ಎಮ್ ರೇಡಿಯೋ, ಯುಎಸ್‌ಬಿ ಟೈಪ್- ಸಿ ಸೇರಿದಂತೆ ಇತರೆ ಫೀಚರ್ಸ್ ಅನ್ನು ಈ ಫೋನ್ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಬ್ಲೂ, ಗ್ರೀನ್ ಹಾಗೂ ಡಾರ್ಕ್ ಗ್ರೇ ಕಲರ್‌ನಲ್ಲಿ ಬರುವ ಸಾಧ್ಯತೆ ಇವೆ.


Click it and Unblock the Notifications








