Home
ಸುದ್ದಿಜಾಲ

ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Infinix Hot 50 5G!..ಇದು ಸ್ಲಿಮ್‌ 5G ಫೋನ್‌!

ಇನ್ಫಿನಿಕ್ಸ್‌ (Infinix) ಸಂಸ್ಥೆಯು ಈಗಾಗಲೇ ಕೆಲವು ಭಿನ್ನ ಮಾದರಿಯ ಮೊಬೈಲ್‌ಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಸ್ಥಾನ ಭದ್ರ ಮಾಡಿಕೊಂಡಿದೆ. ಇನ್ನು ಇನ್ಫಿನಿಕ್ಸ್‌ ಕಂಪನಿಯ ಬಹುತೇಕ ಮೊಬೈಲ್‌ಗಳು ಬಜೆಟ್‌ ಬೆಲೆಯನ್ನು ಹೊಂದಿದ್ದು, ಅವುಗಳ ಪೈಕಿ ಕೆಲವು ಆಕರ್ಷಕ ಫೀಚರ್ಸ್‌ಗಳಿಂದಲೂ ಗ್ರಾಹಕರನ್ನು ಆಕರ್ಷಿಸಿ ಸೈ ಎನಿಸಿಕೊಂಡಿವೆ. ಇದೀಗ ಸಂಸ್ಥೆಯು ಹೊಸದಾಗಿ ಇನ್ಫಿನಿಕ್ಸ್‌ ಹಾಟ್‌ 50 5G (Infinix Hot 50 5G) ಸ್ಮಾರ್ಟ್‌ಫೋನ್‌ ಅನ್ನು ಇಂದು (ಸೆಪ್ಟೆಂಬರ್ 5 ರಂದು) ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಹೌದು, ಇನ್ಫಿನಿಕ್ಸ್‌ ಮೊಬೈಲ್‌ ಕಂಪನಿಯು ಇಂದು (ಸೆಪ್ಟೆಂಬರ್ 5 ರಂದು) ನೂತನ ಇನ್ಫಿನಿಕ್ಸ್‌ ಹಾಟ್‌ 50 5G (Infinix Hot 50 5G) ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ ಮೈಕ್ರೋ ಪೇಜ್‌ ಕೂಡಾ ತೆರೆದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಸೌಲಭ್ಯ ಸಹ ಒಳಗೊಂಡಿರುವ ನಿರೀಕ್ಷೆಗಳು ಇವೆ.

ಲೀಕ್ ಮಾಹಿತಿಗಳ ಪ್ರಕಾರ ಈ ಮೊಬೈಲ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇನ್ನು ಈ ಮೊಬೈಲ್‌ ಸ್ಲಿಮ್‌ ವಿನ್ಯಾಸ ಹೊಂದಿದ್ದು, ಜೊತೆಗೆ IP54 ಸ್ಪ್ಯಾಶ್‌ ಪ್ರೂಫ್‌ ರೇಟಿಂಗ್ ಆಯ್ಕೆಯನ್ನು ಒಳಗೊಂಡಿರುವುದು ಖಚಿತವಾಗಿದೆ. ಹಾಗಾದರೇ ಬರಲಿರುವ ಹೊಸ ಇನ್ಫಿನಿಕ್ಸ್‌ ಹಾಟ್‌ 50 5G (Infinix Hot 50 5G) ಫೋನಿನ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Infinix Hot 50 5G!..ಇದು ಸ್ಲಿಮ್‌ 5G ಫೋನ

ಇನ್ಫಿನಿಕ್ಸ್‌ ಹಾಟ್‌ 50 5G ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದ್ದು, 2460× 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 500 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಹಾಗೂ 85% NTSC ಬಣ್ಣದ ಹರವು, 90Hz ರಿಫ್ರೆಶ್ ರೇಟ್‌, 270Hz ಟಚ್‌ ಮಾದರಿ ರೇಟ್‌ ಪಡೆದಿರಲಿದೆ.

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಕೆಲಸ ಮಾಡುವ ಸಾಧ್ಯತೆಗಳಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಇರಲಿದೆ. ಹಾಗೆಯೇ ಇದು 4GB RAM + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ಮೈಕ್ರೊ ಎಸ್‌ಡಿ ಕಾರ್ಡ್‌ ಬೆಂಬಲ ಪಡೆದಿರಲಿದ್ದು, 1TB ವರೆಗೆ ಸ್ಟೋರೇಜ್‌ ವಿಸ್ತರಣೆ ಮಾಡಿಕೊಳ್ಳಬಹುದಾದ ಆಯ್ಕೆ ಇರಲಿದೆ.

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದ್ದು, ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಪಡೆದಿರಲಿದೆ. ಉಳಿದೆರಡು ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್‌ ಸೆನ್ಸಾರ್ ಪಡೆದಿರುವ ಸಾಧ್ಯತೆಗಳು ಇವೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ.

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಪಡೆದಿರಲಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೋ ಜಾಕ್, ಎಫ್‌ಎಮ್‌ ರೇಡಿಯೋ, ಯುಎಸ್‌ಬಿ ಟೈಪ್- ಸಿ ಸೇರಿದಂತೆ ಇತರೆ ಫೀಚರ್ಸ್‌ ಅನ್ನು ಈ ಫೋನ್‌ ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೇ ಬ್ಲೂ, ಗ್ರೀನ್‌ ಹಾಗೂ ಡಾರ್ಕ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಎಂಟ್ರಿ ಕೊಡುವ ಸಾಧ್ಯತೆ ಇವೆ.

Best Mobiles in India

English summary
Infinix Hot 50 5G Launch Today in India. What to Expect, Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+