ಕೇವಲ 6,999ರೂ.ಗೆ 'ಇನ್‌ಫಿನಿಕ್ಸ್ ಹಾಟ್ 8' ಸ್ಮಾರ್ಟ್‌ಫೋನ್ ಲಭ್ಯ!
ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ದೊಡ್ಡದಿದೆ. ಆ ಪೈಕಿ ಗ್ರಾಹಕರಿಗೆ ಚಿರಪರಿಚಿತವಾಗಿರುವ ಕಂಪನಿಗಳಲ್ಲಿ ಒಂದಾದ 'ಇನ್‌ಫಿನಿಕ್ಸ್' ಇತ್ತೀಚಿಗೆ 'ಇನ್‌ಫಿನಿಕ್ಸ್ ಹಾಟ್ 8' ಹೆಸರಿನ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. 7,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿದ್ದ ಈ ಸ್ಮಾರ್ಟ್‌ಫೋನ್ ಆರಂಭಿಕ ಕೊಡುಗೆಯಾಗಿ 1,000ರೂ.ಗಳ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದ್ದು, ಈ ಕೊಡುಗೆಯು ಇದೇ ಡಿಸಂಬರ್ 31ರ ವರೆಗೂ ಮುಂದುವರೆಯಲಿದೆ.

ಹೌದು, ಇನ್‌ಫಿನಿಕ್ಸ್ ಕಂಪನಿಯ 'ಇನ್‌ಫಿನಿಕ್ಸ್ ಹಾಟ್ 8' ಸ್ಮಾರ್ಟ್‌ಫೋನ್ ಬೆಲೆಯು 7,999ರೂ.ಗಳು ಆಗಿದ್ದು, ಆದ್ರೆ ಆರಂಭಿಕ ಕೊಡುಗೆಯಾಗಿ ಮಾರುಕಟ್ಟೆಯಲ್ಲಿ ಕೇವಲ 6,999ರೂ.ಗಳಿಗೆ ಲಭ್ಯವಿದ್ದು, ಈ ರಿಯಾಯಿತಿ ಬೆಲೆ ಈ ವರ್ಷದ ಅಂತ್ಯದ(ಡಿ.31) ವರೆಗೂ ಇರಲಿದೆ. 4GB RAM ಮತ್ತು 64GB, 5,000mAh ಬ್ಯಾಟರಿ ಈ ಫೋನಿನ ಕೀ ಹೈಲೈಟ್ಸ್‌ಗಳಾಗಿವೆ. ಹಾಗಾದರೇ ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ
720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು ವಾಟರ್‌ಡ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಡಿಸ್‌ಪ್ಲೇ ಬ್ರೈಟ್ನೆಸ್ 500nits ಸಾಮರ್ಥ್ಯದಲ್ಲಿದೆ. ಹಾಗೆಯೇ ಬಾಹ್ಯ ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅಂತರವು ಶೇ.90.3% ಆಗಿದ್ದು, ಡಿಸ್‌ಪ್ಲೇಯು 2.5D ಗ್ಲಾಸ್ ರಕ್ಷಣೆ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ
ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ 2GHz ಗಿಗಾಹರ್ಜ್ಜ ವೇಗದಲ್ಲಿ ಹಿಲಿಯೊ ಆಕ್ಟಾಕೋರ್ P22 ಪ್ರೊಸೆಸರ್ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್ 9 ಪೈ ಸಪೋರ್ಟ್ ಇದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಮೂರು ಕ್ಯಾಮೆರಾ
ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ ಜೊತೆಗೆ 13ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು ಲೋ ಸೆನ್ಸಾರ್ ಹೊಂದಿದೆ. ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್ ಪಡೆದಿದ್ದು, ಎಂಟು ಸೀನ್ ಮೋಡ್, ಕ್ವಾಡ್ ಎಲ್ಇಡಿ ಫ್ಲಾಶ್ ಆಯ್ಕೆಗಳಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯ ಬಿಗ್ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 14ಗಂಟೆ ವಿಡಿಯೊ ಪ್ಲೇ ಬ್ಯಾಕ್ ಬೆಂಬಲ ನೀಡಲಿದೆ. ಹಾಗೆಯೇ 11.4ಗಂಟೆ ಗೇಮಿಂಗ್ ಬ್ಯಾಕ್‌ಅಪ್, 17.6ಗಂಟೆ ಮ್ಯೂಸಿಕ್ ಬ್ಯಾಕ್‌ಅಪ್ ಮತ್ತು 18.1ಗಂಟೆ 4G ಟಾಕ್‌ಟೈಮ್ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಯುಎಸ್‌ಬಿ, ಬ್ಲೂಟೂತ್ v5.0, ಓಟಿಜಿ, ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ 'ಇನ್‌ಫಿನಿಕ್ಸ್ ಹಾಟ್ 8' ಸ್ಮಾರ್ಟ್‌ಫೋನ್ 7,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಆದ್ರೆ ಆರಂಭಿಕ ಕೊಡುಗೆಯಾಗಿ ಇದೇ ಡಿಸೆಂಬರ್ 31ರ ವರೆಗೂ ಗ್ರಾಹಕರಿಗೆ 6,999ರೂ.ಗಳಿಗೆ ದೊರೆಯಲಿದೆ. ಜನಪ್ರಿಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.


Click it and Unblock the Notifications








