ಅತೀ ಕಡಿಮೆ ಬೆಲೆಗೆ 'ಇನ್‌ಫಿನಿಕ್ಸ್ ಹಾಟ್ 8' ಫೋನ್ ಬಿಡುಗಡೆ!
ಇನ್‌ಫಿನಿಕ್ಸ್ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಗೆ ಹಲವು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಈಗ ಕಂಪನಿಯು ಮತ್ತೆ ಅದೇ ಹಾದಿಯಲ್ಲಿ ನಡೆದಿದ್ದು, ದೇಶಿಯ ಮಾರುಕಟ್ಟೆಗೆ 'ಇನ್‌ಫಿನಿಕ್ಸ್ ಹಾಟ್ 8' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸಹ ಅಗ್ಗದ ಪ್ರೈಸ್‌ಟ್ಯಾಗ್ ಹೊಂದಿದ್ದು, ತ್ರಿವಳಿ ಕ್ಯಾಮೆರಾ ಮತ್ತು ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ.

ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಇದೇ ಸೆಪ್ಟಂಬರ್ 12ರಂದು ಫ್ಲಿಪ್‌ಕಾರ್ಟ್ ಜಾಲತಾಣದಲ್ಲಿ ಮೊದಲ ಸೇಲ್ ಆರಂಭಿಸಲಿದೆ. 4GB RAM ಮತ್ತು 64GB ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಬಿಡುಗಡೆ ಆಗಿರುವ ಈ ಸ್ಮಾರ್ಟ್‌ಫೋನ್ ಬೆಲೆಯು 7,999ರೂ.ಗಳು ಆಗಿದೆ. ಆರಂಭಿ ಕೊಡುಗೆಯಾಗಿ ಇದೇ ಅಕ್ಟೊಬರ್ 30ವರೆಗೂ 6,999ರೂ.ಗಳಿಗೆ ಲಭ್ಯವಾಗಲಿದೆ. ಹಾಗಾದರೇ ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು ವಾಟರ್‌ಡ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಡಿಸ್‌ಪ್ಲೇ ಬ್ರೈಟ್ನೆಸ್ 500nits ಸಾಮರ್ಥ್ಯದಲ್ಲಿದೆ. ಹಾಗೆಯೇ ಬಾಹ್ಯ ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅಂತರವು ಶೇ.90.3% ಆಗಿದ್ದು, ಡಿಸ್‌ಪ್ಲೇಯು 2.5D ಗ್ಲಾಸ್ ರಕ್ಷಣೆ ಪಡೆದಿದೆ.

ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ 2GHz ಗಿಗಾಹರ್ಜ್ಜ ವೇಗದಲ್ಲಿ ಹಿಲಿಯೊ ಆಕ್ಟಾಕೋರ್ P22 ಪ್ರೊಸೆಸರ್ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್ 9 ಪೈ ಸಪೋರ್ಟ್ ಇದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ ಜೊತೆಗೆ 13ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು ಲೋ ಸೆನ್ಸಾರ್ ಹೊಂದಿದೆ. ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್ ಪಡೆದಿದ್ದು, ಎಂಟು ಸೀನ್ ಮೋಡ್, ಕ್ವಾಡ್ ಎಲ್ಇಡಿ ಫ್ಲಾಶ್ ಆಯ್ಕೆಗಳಿವೆ.

ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯ ಬಿಗ್ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 14ಗಂಟೆ ವಿಡಿಯೊ ಪ್ಲೇ ಬ್ಯಾಕ್ ಬೆಂಬಲ ನೀಡಲಿದೆ. ಹಾಗೆಯೇ 11.4ಗಂಟೆ ಗೇಮಿಂಗ್ ಬ್ಯಾಕ್‌ಅಪ್, 17.6ಗಂಟೆ ಮ್ಯೂಸಿಕ್ ಬ್ಯಾಕ್‌ಅಪ್ ಮತ್ತು 18.1ಗಂಟೆ 4G ಟಾಕ್‌ಟೈಮ್ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಯುಎಸ್‌ಬಿ, ಬ್ಲೂಟೂತ್ v5.0, ಓಟಿಜಿ, ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ 7,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಜನಪ್ರಿಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್‌ನಲ್ಲಿ ಇದೇ ಸೆಪ್ಟಂಬರ್ 12ರಂದು ಫಸ್ಟ್ ಸೇಲ್ ನಡೆಯಲಿದೆ. ವಿಶೇಷವೆಂದರೇ ಆರಂಭಿಕ ಕೊಡುಗೆಯಾಗಿ ಇದೇ ಅಕ್ಟೊಬರ್ 30ರ ವರೆಗೂ ಗ್ರಾಹಕರಿಗೆ 6,999ರೂ.ಗಳಿಗೆ ದೊರೆಯಲಿದೆ.


Click it and Unblock the Notifications