ಇಂದು ಇನ್‌ಫಿನಿಕ್ಸ್‌ ಹಾಟ್ 9 ಪ್ರೊ ಸ್ಮಾರ್ಟ್‌ಫೋನ್ ಸೇಲ್!

|

ಹಾಂಗ್‌ ಕಾಂಗ್ ಮೂಲದ ಇನ್‌ಫಿನಿಕ್ಸ್‌ ಸಂಸ್ಥೆಯು ಇತ್ತೀಗಷ್ಟೆ ಹೊಸದಾಗಿ 'ಇನ್‌ಫಿನಿಕ್ಸ್‌ ಹಾಟ್ 9 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣದಲ್ಲಿ ನಡೆಯಲಿದೆ. ಇನ್ನು 48ಎಂಪಿ ಸೆನ್ಸಾರ್ ಮುಖ್ಯ ಕ್ಯಾಮೆರಾ, ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್ ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಇನ್‌ಫಿನಿಕ್ಸ್‌ ಹಾಟ್ 9 ಪ್ರೊ

ಹೌದು, ಇನ್‌ಫಿನಿಕ್ಸ್‌ ಸಂಸ್ಥೆಯ 'ಇನ್‌ಫಿನಿಕ್ಸ್‌ ಹಾಟ್ 9 ಪ್ರೊ' ಸ್ಮಾರ್ಟ್‌ಫೋನಿನ ಮಾರಾಟ ಇಂದು ನಡೆಯಲಿದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್, ಪಂಚ್‌ಹೋಲ್ ಡಿಸ್‌ಪ್ಲೇ ಡಿಸೈನ್ ಹೊಂದಿದೆ. ಹಿಂಬದಿ 48ಎಂಪಿ ಕ್ಯಾಮೆರಾ, ಆಂಡ್ರಾಯ್ಡ್ 10 ಓಎಸ್‌ ಮತ್ತು 5,000 mAh ಬ್ಯಾಟರಿಗಳಂತಹ ಇತ್ತೀಚಿನ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ. ಆರಂಭಿಕ ಬೆಲೆಯು 10,499ರೂ.ಗಳು. ಇನ್ನು ಈ 'ಇನ್‌ಫಿನಿಕ್ಸ್‌ ಹಾಟ್‌ 9' ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಇನ್ಫಿನಿಕ್ಸ್ ಹಾಟ್ 9 ಪ್ರೊ ಸ್ಮಾರ್ಟ್‌ಫೋನ್‌ 720x1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಎಚ್‌ಡಿ + ಆಗಿದ್ದು ಪಂಚ್‌ಹೋಲ್‌ ಮಾದರಿಯನ್ನ ಒಳಗೊಂಡಿದೆ. ಅಲ್ಲದೆ ಇದು ಎಲ್‌ಸಿಡಿ ಐಪಿಎಸ್ ಡಿಸ್‌ಪ್ಲೇ ವಿನ್ಯಾಸವನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ರಚನೆ ಅನುಪಾತ 20: 9 ಆಗಿದ್ದು, ಸ್ಕ್ರೀನ್‌ ಟು ಬಾಡಿ ಅನುಪಾತ 90.5% ಆಗಿದೆ. ಇದಲ್ಲದೆ ಈ ಡಿಸ್‌ಪ್ಲೇ 480 ನಿಟ್ಸ್ ಬ್ರೈಟ್‌ನೆಶ್ ಅನ್ನು ಹೊಂದಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್‌ ವೇಗವನ್ನ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ XOS 6.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.ಹಾಗೇಯೇ ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್‌ಫಿನಿಕ್ಸ್‌ ಹಾಟ್‌ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ ಹೆಚ್ಚುವರಿ ಕಡಿಮೆ ಬೆಳಕಿನ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್-ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಫ್ರಂಟ್ ಕ್ಯಾಮೆರಾ ಮೋಡ್‌ಗಳಲ್ಲಿ ಎಐ ಪೋರ್ಟ್ರೇಟ್, ಎಐ 3 ಡಿ ಫೇಸ್ ಬ್ಯೂಟಿ, ವೈಡ್-ಸೆಲ್ಫಿ ಮತ್ತು ಎಆರ್ ಅನಿಮೋಜಿ ಅನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಈ ಬ್ಯಾಟರಿಯು 30 ಗಂಟೆಗಳ 4G ಟಾಕ್‌ಟೈಮ್, 130 ಗಂಟೆಗಳ ಪ್ಲೇಬ್ಯಾಕ್ ಮ್ಯೂಸಿಕ್, 13 ಗಂಟೆಗಳ ಗೇಮಿಂಗ್ ಮತ್ತು 19 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ V5, 3.5mm ಆಡಿಯೊ ಜ್ಯಾಕ್, fm ರೇಡಿಯೋ, ಯುಎಸ್‌ಬಿ ಒಟಿಜಿ, ವೋವೈಫೈ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿ

Best Mobiles in India

English summary
Hot 9 Pro smartphone will once again go on sale today in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X