ಅಗ್ಗದ 'ಇನ್‌ಫಿನಿಕ್ಸ್‌ ಹಾಟ್‌ 9' ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಹಾಂಗ್‌ ಕಾಂಗ್ ಮೂಲದ ಇನ್‌ಫಿನಿಕ್ಸ್‌ ಸಂಸ್ಥೆಯು ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಲಾಂಚ್ ಮಾಡಿದೆ. ಇದೀಗ ಹೊಸದಾಗಿ 'ಇನ್‌ಫಿನಿಕ್ಸ್‌ ಹಾಟ್‌ 9' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 48ಎಂಪಿ ಸೆನ್ಸಾರ್ ಮುಖ್ಯ ಕ್ಯಾಮೆರಾ ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿರುವುದು ಮತ್ತೊಂದು ಪ್ಲಸ್‌ ಪಾಯಿಂಟ್‌ ಆಗಿದೆ.

'ಇನ್‌ಫಿನಿಕ್ಸ್‌ ಹಾಟ್‌ 9

ಹೌದು, ಇನ್‌ಫಿನಿಕ್ಸ್‌ ಸಂಸ್ಥೆಯು ಇದೀಗ 'ಇನ್‌ಫಿನಿಕ್ಸ್‌ ಹಾಟ್‌ 9' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್, ಪಂಚ್‌ಹೋಲ್ ಡಿಸ್‌ಪ್ಲೇ ಡಿಸೈನ್ ಹೊಂದಿದೆ. ಹಿಂಬದಿ 48ಎಂಪಿ ಕ್ಯಾಮೆರಾ, ಆಂಡ್ರಾಯ್ಡ್ 10 ಓಎಸ್‌ ಮತ್ತು 5,000 mAh ಬ್ಯಾಟರಿಗಳಂತಹ ಇತ್ತೀಚಿನ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ. ಇನ್ನು ಈ ಫೋನ್ ಇದೇ ಮಾರ್ಚ್ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭಿಸಲಿದೆ. ಆರಂಭಿಕ ಬೆಲೆಯು 9,999ರೂ.ಗಳು. ಇನ್ನು ಈ 'ಇನ್‌ಫಿನಿಕ್ಸ್‌ ಹಾಟ್‌ 9' ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಇನ್‌ಫಿನಿಕ್ಸ್‌ ಹಾಟ್‌ 9 ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು ಪಂಚ್‌ಹೋಲ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 270ppi ಆಗಿದೆ. ಹಾಗೆಯೇ ಡಿಸ್‌ಪ್ಲೇ ಪಿಕ್ಸಲ್ ರೆಸಲ್ಯೂಶನ್‌ 720x1600 ಆಗಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಇನ್‌ಫಿನಿಕ್ಸ್‌ ಹಾಟ್‌ 9 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ GE8320 GPU ಸಾಮರ್ಥ್ಯ ಇದ್ದು, ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಇದೆ. ಹಾಗೆಯೇ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶದ ವೇರಿಯಂಟ್ ಆಯ್ಕೆ ಇದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ನಾಲ್ಕು ಕ್ಯಾಮೆರಾ

ನಾಲ್ಕು ಕ್ಯಾಮೆರಾ

ಇನ್‌ಫಿನಿಕ್ಸ್‌ ಹಾಟ್‌ 9 ಸ್ಮಾರ್ಟ್‌ಫೋನ್ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು ಸಹ 16ಎಂಪಿ ಸೆನ್ಸಾರ್ ಪಡೆದಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಆಕರ್ಷಕ ಎಡಿಟಿಂಗ್ ಆಯ್ಕೆಗಳಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಇನ್‌ಫಿನಿಕ್ಸ್‌ ಹಾಟ್‌ 9 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯ ಬಿಗ್ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 10W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದೆ. ಇದರೊಂದಿಗೆ ಯುಎಸ್‌ಬಿ, ಬ್ಲೂಟೂತ್ v5.0, ಓಟಿಜಿ, ಮೈಕ್ರೋ ಯುಎಸ್‌ಬಿ ಪೋರ್ಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಇಂಡೋನೇಷ್ಯಾ ಮಾರುಕಟ್ಟೆಗೆ ಬಿಡುಗಡೆ ಆಗಿರುವ ಇನ್‌ಫಿನಿಕ್ಸ್‌ ಹಾಟ್‌ 9 ಸ್ಮಾರ್ಟ್‌ಫೋನ್ ಬೆಲೆಯು (1,699,000-indonesia rupees) ಆಗಿದೆ. ಇದೇ ಮಾರ್ಚ್ 27ರಂದು ಸೇಲ್ ಶುರುಮಾಡಲಿದೆ. ಭಾರತೀಯ ಮಾರುಕಟ್ಟೆಗೆ 7,851ರೂ.ಗಳ ಪ್ರೈಸ್‌ಟ್ಯಾಗ್ ನಲ್ಲಿ ಎಂಟ್ರಿ ಆಗುವ ಸಾಧ್ಯತೆಗಳಿವೆ.

Best Mobiles in India

English summary
Hong Kong-based smartphone maker Infinix Mobile has just launched its latest smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X