ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್‌ ಲಾಂಚ್; ಇದರ ತೂಕ ಎಷ್ಟು ಗೊತ್ತಾ?

|

ಟೆಕ್‌ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್‌ ಕಂಪೆನಿ ಗ್ರಾಹಕಸ್ನೇಹಿ ಬೆಲೆಯ ಶ್ರೇಣಿಯಲ್ಲಿ ಮೊಬೈಲ್‌ ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಇನ್ಫಿನಿಕ್ಸ್‌ ಸಂಸ್ಥೆಯು ಲ್ಯಾಪ್‌ಟಾಪ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ ಪರಿಚಯಿಸಿತ್ತು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಇನ್ಫಿನಿಕ್ಸ್ ಕಂಪೆನಿ ಹೊಸ ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ (Infinix INBook X1 Neo Laptop) ಅನ್ನು ಲಾಂಚ್‌ ಮಾಡಿದೆ.

ಹಗುರಾದ

ಹೌದು, ಇನ್ಫಿನಿಕ್ಸ್‌ ಭಾರತದಲ್ಲಿ ತನ್ನ ಹೊಸ ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 300 nits ಬ್ರೈಟ್ನೆಸ್‌ ಅನ್ನು ಒಳಗೊಂಡಿದೆ. ಇದು ಅಲ್ಯೂಮಿನಿಯಂ ಮಿಶ್ರಲೋಹದ ವಿನ್ಯಾಸ ಪಡೆದಿದ್ದು, ತೆಳುವಾದ ಹಾಗೂ ಹಗುರಾದ ರಚನೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನ ತೂಕ 1.24 ಕೆಜಿ ಆಗಿದೆ.

ಫಾಸ್ಟ್‌

ಹಾಗೆಯೇ ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್‌ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದ್ದು, ಜೊತೆಗೆ 45 W ಸಾಮರ್ಥ್ಯದ ಟೈಪ್‌-ಸಿ ಮಾದರಿಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಅಲ್ಲದೇ ಇದು ವಿಂಡೋಸ್ 11 ಓಎಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್‌ ಬ್ಲೂ ಮತ್ತು ಸಿಲ್ವರ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್‌ ಫೀಚರ್ಸ್‌ಗಳೆನು? ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್ 14 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 100% sRGB ಮತ್ತು 300 nits ಗರಿಷ್ಠ ಹೊಳಪನ್ನು ಹೊಂದಿದೆ. ಹಾಗೆಯೇ ಈ ಡಿವೈಸ್ 8GB RAM ಮತ್ತು 256GB NVMe PCle 3.0 SSD ಶೇಖರಣಾ ಆಯ್ಕೆಯೊಂದಿಗೆ Intel Celeron N5100 ಕ್ವಾಡ್-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರೊಂದಿಗೆ ವಿಂಡೋಸ್ 11 ಓಎಸ್‌ ಸಪೋರ್ಟ್‌ ಪಡೆದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್‌, 50Whr ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲಿತವಾಗಿದೆ. ಇದನ್ನು ಒಂದು ಪೂರ್ಣ ದಿನದ ಬಳಕೆಗೆ ರೇಟ್ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಇದು 45W ಟೈಪ್-ಸಿ ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್‌ HDMI ಪೋರ್ಟ್, ಎರಡು ಯುಎಸ್‌ಬಿ ಟೈಪ್-ಎ, ಎರಡು ಯುಎಸ್‌ಬಿ ಟೈಪ್‌-ಸಿ, ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ. ಇದಲ್ಲದೇ, ಈ ಡಿವೈಸ್‌ DTS ಸೌಂಡ್ ಸಿಸ್ಟಮ್, ಬ್ಯಾಕ್‌ಲೈಟ್ ಕೀಬೋರ್ಡ್ ಪಡೆದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ಇನ್ಫಿನಿಕ್ಸ್‌ ಇನ್‌ಬುಕ್‌ X1 ನಿಯೋ ಲ್ಯಾಪ್‌ಟಾಪ್‌ (INBook X1 Neo) 8 GB RAM ಮತ್ತು 256 GB SSD ಸ್ಟೋರೇಜ್ ರೂಪಾಂತರಕ್ಕಾಗಿ 24,999 ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಜುಲೈ 21 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಇದು ನೀಲಿ ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ ಫೀಚರ್ಸ್‌

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ ಫೀಚರ್ಸ್‌

ಇತ್ತೀಚಿಗೆ ಇನ್ಫಿನಿಕ್ಸ್‌ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಿರುವ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ ಸರಣಿಯು 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1920 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೋರ್‌ i3, ಕೋರ್‌ i5 ಮತ್ತು ಕೋರ್‌ i7 10 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್‌ಗಳ ಆಯ್ಕೆಯಲ್ಲಿ ಬರಲಿದೆ. ಇದು ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಇದರಿಂದ ನಿಮಗೆ ಯಾವ ಪ್ರೊಸೆಸರ್‌ನ ಆಯ್ಕೆಯ ಲ್ಯಾಪ್‌ಟಾಪ್‌ ಬೇಕೋ ಅದನ್ನು ಆಯ್ಕೆ ಮಾಡಬಹುದು.

ಡ್ಯುಯಲ್

ಇನ್ನು ಈ ಡಿವೈಸ್‌ 16GB RAM ಮತ್ತು 512GB SSD ಸ್ಟೋರೇಜ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ HD ವೆಬ್‌ಕ್ಯಾಮ್ ಮತ್ತು ಡ್ಯುಯಲ್ ಸ್ಟಾರ್ ಲೈಟ್‌ ಅನ್ನು ಕೂಡ ಒಳಗೊಂಡಿದೆ. ಈ ಡ್ಯುಯಲ್ ಸ್ಟಾರ್ ಲೈಟ್ ಕ್ಯಾಮೆರಾ ಫೀಚರ್ಸ್‌ ವೀಡಿಯೊ ಕರೆಗಳನ್ನು ಮಾಡುವಾಗ ಅಥವಾ ಲೋ ಲೈಟ್‌ ಸಂದರ್ಭಗಳಲ್ಲಿ ಗೋಚರತೆಯನ್ನು ಹೆಚ್ಚಿಸಲಿದೆ. ಇದರಿಂದ ನೀವು ಲೋ ಲೈಟ್‌ ಇದ್ದಾಗಲೂ ವೀಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಭಾಗವಹಿಸಬಹುದು. ಇದಲ್ಲದೆ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ 50Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್, USB-C, USB 3.0, HDMI ಪೋರ್ಟ್‌ಗಳು ಮತ್ತು SD ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ ಹಲವು ಆಯ್ಕೆ ಹೊಂದಿದ್ದು, ಇದರ ಬೆಲೆ ವಿವರ ಹೀಗಿದೆ. ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಕೋರ್ i3 (8GB + 256GB): 29,990ರೂ, ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಕೋರ್ i3 (8GB + 512GB): 32,990ರೂ, ಆಗಿದೆ. ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಕೋರ್ i5 (8GB + 512GB): 39,990ರೂ, ಆಗಿದ್ದು, ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಕೋರ್ i5 (16GB + 512GB): 44,990 ರೂ. ಆಗಿದೆ. ಇನ್ನು ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಕೋರ್ i7 (16GB + 512GB): 49,990ರೂ. ಬೆಲೆ ಇದೆ.

Best Mobiles in India

English summary
Infinix INBook X1 Neo Laptop with 14-inch Display Launched in India: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X