Home
ಸುದ್ದಿಜಾಲ

ಇನ್ಫಿನಿಕ್ಸ್‌ನಿಂದ ಬಜೆಟ್ ಬೆಲೆಗೆ 14 ಇಂಚಿನ ಹಗುರವಾದ ಲ್ಯಾಪ್‌ಟಾಪ್ ಲಾಂಚ್‌, ಫೀಚರ್ಸ್‌ ಏನು?, ಬೆಲೆ ಎಷ್ಟು?

ಲ್ಯಾಪ್‌ಟಾಪ್‌ಗಳು ಸುಧಾರಿತ ಫೀಚರ್ಸ್‌ ಆಯ್ಕೆ ಹೊಂದುವ ಮೂಲಕ ಬಳಕೆದಾರರಿಗೆ ವಿವಿಧ ಸೌಲಭ್ಯ ನೀಡುತ್ತಿವೆ. ಅದರಲ್ಲೂ ಭಾರತದಲ್ಲಿ ಅಗ್ಗದ ದರದಿಂದ ದುಬಾರಿ ಬೆಲೆ ಹೊಂದಿರುವ ಲ್ಯಾಪ್‌ಟಾಪ್‌ಗಳು ಲಭ್ಯ ಇದ್ದು, ಈ ನಡುವೆ ಈ ಎಲ್ಲಾ ಲ್ಯಾಪ್‌ಟಾಪ್‌ ಕಂಪೆನಿಗಳು ಬೆಚ್ಚಿ ಬೀಳುವಂತೆ ಇನ್ಫಿನಿಕ್ಸ್ ಕಂಪೆನಿ ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮವಾದ ಹೊಸ ಲ್ಯಾಪ್‌ಟಾಪ್‌ ಅನ್ನು ಲಾಂಚ್ ಮಾಡಿದೆ.

ಹೌದು, ಭಾರತದಲ್ಲಿ ಜಿಯೋ ಹಾಗೂ ಲೆನೊವೊ ಸೇರಿದಂತೆ ಅನೇಕ ಕಂಪೆನಿಗಳು ಈಗಾಗಲೇ ವಿವಿಧ ಸೌಲಭ್ಯ ಇರುವ ಲ್ಯಾಪ್‌ಟಾಪ್‌ ಅನ್ನು ಅಗ್ಗದ ದರದಲ್ಲಿ ಲಾಂಚ್‌ ಮಾಡಿವೆ. ಆದರೆ, ಇವು RAM ವಿಚಾರದಲ್ಲಿ ಅಷ್ಟೇನು ಹೇಳಿಕೊಳ್ಳುವ ಸೌಲಭ್ಯ ಪಡೆದಿಲ್ಲ. ಈ ಬೆಳವಣಿಗೆ ನಡುವೆ ಇನ್ಫಿನಿಕ್ಸ್ ಇನ್‌ಬುಕ್‌‌ X3 ಸ್ಲಿಮ್ (Infinix INBook X3 Slim) ಅನ್ನು ಅನಾವರಣ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡಿದೆ. ಹಾಗಿದ್ರೆ, ಈ ಹಗುರವಾದ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ನೋಡೋಣ ಬನ್ನಿ.

ಇನ್ಫಿನಿಕ್ಸ್‌ನಿಂದ ಬಜೆಟ್ ಬೆಲೆಗೆ 14 ಇಂಚಿನ ಹಗುರವಾದ ಲ್ಯಾಪ್‌ಟಾಪ್ ಲಾಂಚ್‌...

ಇನ್ಫಿನಿಕ್ಸ್ ಇನ್‌ಬುಕ್‌‌ X3 ಸ್ಲಿಮ್ ಡಿಸ್‌ಪ್ಲೇ ವಿವರ: ಈ ಇನ್ಫಿನಿಕ್ಸ್ ಇನ್‌ಬುಕ್‌‌ X3 ಸ್ಲಿಮ್ ಲ್ಯಾಪ್‌ಟಾಪ್ 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಟ್‌ ಆಯ್ಕೆಯ ಮೂಲಕ ವಿಶೇಷ ಎನಿಸಿದೆ. ಇದರೊಂದಿಗೆ 100% sRGB ಕವರೇಜ್ ಹಾಗೂ 72% NTSC ಹೊಂದಿದ್ದು, ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಇನ್ಫಿನಿಕ್ಸ್ ಇನ್‌ಬುಕ್‌‌ X3 ಸ್ಲಿಮ್ ಪ್ರೊಸೆಸರ್‌ ಮಾಹಿತಿ: ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ ಯುಹೆಚ್‌ಡಿ ಗ್ರಾಫಿಕ್ಸ್ ಬೆಂಬಲದೊಂದಿಗೆ 4.4GHz 12ನೇ ಜನ್ ಇಂಟೆಲ್‌ ಕೋರ್‌ i3-1215U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಮತ್ತೊಂದು ಪ್ರೊಸೆಸರ್‌ನಲ್ಲೂ ಇದು ಕಾಣಿಸಿಕೊಂಡಿದ್ದು, X3 4.4GHz 12th ಜನ್‌ ಇಂಟೆಲ್‌ ಕೋರ್ i5-1235U ಮತ್ತು ಐರಿಸ್‌ Xe ಗ್ರಾಫಿಕ್ಸ್‌ನೊಂದಿಗೆ 4.7GHz ಕೋರ್ i7-1255U ಪ್ರೊಸೆಸರ್‌ ಬಲ ಪಡೆದಿದೆ.

ಉಳಿದಂತೆ ಈ ಸ್ಲಿಮ್‌ ಲ್ಯಾಪ್‌ಟಾಪ್ 8GB/16GB RAM ಹಾಗೂ 256GB/512GB ಸ್ಟೋರೇಜ್ ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, ಇನ್‌ಬುಕ್‌ X3 ಸ್ಲಿಮ್ ಲ್ಯಾಪ್‌ಟಾಪ್ ಮಾದರಿಯು ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನೂ ಸಹ ಬೆಂಬಲಿಸಲಿದ್ದು, ಈ ಮೂಲಕ ಬಳಕೆದಾರರು ಇನ್ನೂ ಹೆಚ್ಚಿನ ಸ್ಟೋರೇಜ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಈ ಲ್ಯಾಪ್‌ಟಾಪ್ ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.

ಇನ್ಫಿನಿಕ್ಸ್ ಇನ್‌ಬುಕ್‌‌ X3 ಸ್ಲಿಮ್ ಬ್ಯಾಟರಿ ಹಾಗೂ ಇತರೆ: ಈ ಸ್ಲಿಮ್ ಲ್ಯಾಪ್‌ಟಾಪ್ 50Wh ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಬ್ಯಾಟರಿಯನ್ನು ಚಾರ್ಜ್ ಮಾಡಲು 65W ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಮೂಲಕ ಬಳಕೆದಾರರು ಇದನ್ನು 55 ನಿಮಿಷಗಳಲ್ಲಿ 60 ಪ್ರತಿಶತದಷ್ಟು ಚಾರ್ಜ್ ಮಾಡಿಕೊಳ್ಳಬಹುದು. ಅಲ್ಲದೆ, ಈ ಲ್ಯಾಪ್‌ಟಾಪ್ 10 ಗಂಟೆಗಳ ಕಾಲ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಲ್ಯಾಪ್‌ಟಾಪ್ 720 ಪಿಕ್ಸೆಲ್‌ ಹೆಚ್‌ಡಿ ವೆಬ್‌ಕ್ಯಾಮ್ ಬೆಂಬಲ ಹೊಂದಿದ್ದು, ಇದು ಡ್ಯುಯಲ್-ಸ್ಟಾರ್ ಎಲ್ಇಡಿ ಫ್ಲ್ಯಾಶ್‌ ಲೈಟ್ ಬೆಂಬಲದ ಜೊತೆಗೆ ವಿಡಿಯೋ ಕರೆಗೆ ಸೂಕ್ತವಾಗಿದೆ. ಹಾಗೆಯೇ ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ವೈ-ಫೈ 6 802.11ax, ಬ್ಲೂಟೂತ್‌ ಆವೃತ್ತಿ 5.1, ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, ಹೆಚ್‌ಡಿಎಮ್‌ಐ ಪೋರ್ಟ್ ಸೇರಿದಂತೆ ವಿವಿಧ ಸಂಪರ್ಕ ಆಯ್ಕೆಯನ್ನು ಪಡೆದಿದೆ.

ಹಾಗೆಯೇ ಈ ಹೊಸ ಇನ್ಫಿನಿಕ್ಸ್ ಲ್ಯಾಪ್‌ಟಾಪ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೌಲಭ್ಯದೊಂದಿಗೆ ಸುಧಾರಿತ ಮೈಕ್ರೊಫೋನ್ ಜ್ಯಾಕ್, ಸ್ಟಿರಿಯೊ ಸ್ಪೀಕರ್‌, ಟಿಡಿಎಸ್ ಆಡಿಯೊ ಫೀಚರ್ಸ್‌ ಸೇರಿದಂತೆ ಅನೇಕ ಫೀಚರ್ಸ್‌ಗಳ ಮೂಲಕ ಪ್ರೀಮಿಯಂ ಲ್ಯಾಪ್‌ಟಾಪ್‌ಗಳನ್ನೇ ಸೈಡ್‌ ಮಾಡುವಷ್ಟು ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಿದೆ.

ಇನ್ಫಿನಿಕ್ಸ್‌ನಿಂದ ಬಜೆಟ್ ಬೆಲೆಗೆ 14 ಇಂಚಿನ ಹಗುರವಾದ ಲ್ಯಾಪ್‌ಟಾಪ್ ಲಾಂಚ್‌...

ಇನ್ಫಿನಿಕ್ಸ್ ಇನ್‌ಬುಕ್‌‌ X3 ಸ್ಲಿಮ್ ಬೆಲೆ ಹಾಗೂ ಲಭ್ಯತೆ: ಈ ಲ್ಯಾಪ್‌ಟಾಪ್‌ನ 8GB + 512GB i3 ವೇರಿಯಂಟ್‌ನ ಬೆಲೆ 33,990 ರೂ. ಗಳಾಗಿದ್ದು, 16GB + 512GB i5 ವೇರಿಯಂಟ್‌ಗೆ 39,490 ರೂ.ಗಳಿದೆ. ಹಾಗೆಯೇ 16GB + 512GB i7 ವೇರಿಯಂಟ್‌ಗೆ 49,990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್‌ ಅನ್ನು ನೀವು ಆಗಸ್ಟ್ 25 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದು. ಜೊತೆಗೆ ಕೆಂಪು, ಹಸಿರು, ಬೂದು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ.

Best Mobiles in India

English summary
Infinix INBook X3 Slim has been unveiled and these laptops in the budget price segment are going to make a huge noise in the market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+