Home
ಸುದ್ದಿಜಾಲ

Infinix: ಭಾರತದ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಅನಾವರಣ! ಮೊಬೈಲ್‌ಗಿಂತಲೂ ಕಡಿಮೆ ದರ

ಇನ್ಫಿನಿಕ್ಸ್ (Infinix) ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಮಾತ್ರವಲ್ಲದೆ ಇದೀಗ ಲ್ಯಾಪ್‌ಟಾಪ್‌ (Laptop) ವಿಚಾರಕ್ಕೂ ಸಂತಸದ ಸುದ್ದಿ ನೀಡಿದೆ. ಅಂದರೆ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಪಡೆದುಕೊಂಡಿದೆ.

ಹೌದು, ಇನ್ಫಿನಿಕ್ಸ್ ಈವರೆಗೂ ಅಗ್ಗದ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು (Smartphones) ಅನಾವರಣ ಮಾಡಿ ಜನಪ್ರಿಯವಾಗಿತ್ತು. ಅದರಂತೆ ಈಗ ಅಗ್ಗದ ಬೆಲೆಯಲ್ಲಿ ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ (Infinix INBook Y2 Plus) ಅನ್ನು ಅನಾವರಣ ಮಾಡಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಅನಾವರಣ! ಮೊಬೈಲ್‌ಗಿಂತಲೂ ಕಡಿಮೆ ದರ..

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್: ಇನ್ಫಿನಿಕ್ಸ್ ಇದೀಗ ಭಾರತೀಯ ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್ ಇನ್‌ಬುಕ್ Y2 ಪ್ಲಸ್‌ ಎಂಬ ಹೊಸ ಲ್ಯಾಪ್‌ಟಾಪ್ ಅನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಇದು ಈ ವರ್ಷದ ಆರಂಭದಲ್ಲಿ ಕಂಪನಿಯು ಬಿಡುಗಡೆ ಮಾಡಿದ ಇನ್ಫಿನಿಕ್ಸ್ ಇನ್‌ಬುಕ್ Y1 ಪ್ಲಸ್‌ ಮಾದರಿಯ ಉತ್ತರಾಧಿಕಾರಿಯಾಗಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಆಂಟಿ-ಗ್ಲೇರ್ LCD ಡಿಸ್ಪ್ಲೇಯನ್ನು ಹೊಂದಿದೆ.

ಇದು ಪೂರ್ಣ ಎಚ್‌ಡಿ ರೆಸಲ್ಯೂಶನ್ ಬೆಂಬಲ ಮತ್ತು 260 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಈ ಸ್ಲಿಮ್ ಮತ್ತು ಹಗುರವಾಗಿದೆ. ಜೊತೆಗೆ ಇದು ಅಲ್ಯೂಮಿನಿಯಂ ಬಾಡಿಯೊಂದಿಗೆ ಪ್ರೀಮಿಯಂ ನೋಟವನ್ನು ನೀಡಲಿದ್ದು, ಇತ್ತೀಚಿನ ಯುವ ಪೀಳಿಗೆಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಈ ಮೂಲಕ ಯಾವುದೇ ಕಾರ್ಯಗಳನ್ನು ಸುಗಮವಾಗಿ ಮಾಡಬಹುದಾಗಿದೆ.

ಭಾರತದ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಅನಾವರಣ! ಮೊಬೈಲ್‌ಗಿಂತಲೂ ಕಡಿಮೆ ದರ..

ಇದರೊಂದಿಗೆ ಈ ಲ್ಯಾಪ್‌ಟಾಪ್‌ 11 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ (Intel processor) ನಿಂದ ಕಾರ್ಯನಿರ್ವಹಿಸಲಿದ್ದು, i3-1115G4 + 8GB RAM ಮತ್ತು i5-1155G7 + 16GB RAM ಎಂಬ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಎರಡೂ ವೇರಿಯಂಟ್‌ 512GB PCIe 3.0 SSD ಸ್ಟೋರೇಜ್‌ ಆಯ್ಕೆ ಪಡೆದಿವೆ. ಅದಾಗ್ಯೂ ಕಂಪನಿಯು 1TB SSD ಸ್ಟೋರೇಜ್ ವೇರಿಯಂಟ್‌ ಪರಿಚಯಿಸಲಿದೆ ಎನ್ನಲಾಗಿದೆ.

ಈ ವಿಶೇಷ ಲ್ಯಾಪ್‌ಟಾಪ್‌ 50Wh ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 10 ಗಂಟೆಗಳವರೆಗೆ ಬ್ಯಾಕಪ್ ಪಡೆಯಬಹುದಾಗಿದೆ. ಜೊತೆಗೆ ಯುಎಸ್‌ಬಿ ಟೈಪ್‌ ಸಿ ಮೂಲಕ 65W ಚಾರ್ಜಿಂಗ್‌ಗೆ ಬೆಂಬಲ ಪಡೆದಿದ್ದು, ಲ್ಯಾಪ್‌ಟಾಪ್ ಅನ್ನು 1 ಗಂಟೆಯಲ್ಲಿ 0-75% ನಿಂದ ಚಾರ್ಜ್ ಮಾಡಲಿದೆ. ಜೊತೆಗೆ ಯುಎಸ್‌ಬಿ 3.0 ಪೋರ್ಟ್, ಹೆಚ್‌ಡಿಎಮ್‌ಐ,ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಆಯ್ಕೆ ಪಡೆದುಕೊಂಡಿದೆ.

ಭಾರತದ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಅನಾವರಣ! ಮೊಬೈಲ್‌ಗಿಂತಲೂ ಕಡಿಮೆ ದರ..

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್: ಮೊದಲೇ ತಿಳಿಸಿದಂತೆ ಈ ಲ್ಯಾಪ್‌ಟಾಪ್‌ ಎರಡು ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಅದರಂತೆ ಇಂಟೆಲ್ ಕೋರ್ i3-1115G4 + 8GB RAM ಗೆ 27,490 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇಂಟೆಲ್ ಕೋರ್ i5-1155G7 + 16GB RAM ಗೆ 34,990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಡಿವೈಸ್‌ ಬೆಳ್ಳಿ, ನೀಲಿ ಮತ್ತು ಬೂದು ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದ್ದು, ಫ್ಲಿಪ್‌ಕಾರ್ಟ್‌ (Flipkart) ಮೂಲಕ ಇದನ್ನು ಖರೀದಿ ಮಾಡಬಹುದಾಗಿದೆ.

ಭಾರತದ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಅನಾವರಣ! ಮೊಬೈಲ್‌ಗಿಂತಲೂ ಕಡಿಮೆ ದರ..

ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್‌ಗೆ ಕೆಲವು ಬ್ಯಾಂಕ್‌ ಆಫರ್ ಅನ್ನೂ ಸಹ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ರೀತಿ ಏನಾದರೂ ಬ್ಯಾಂಕ್‌ ಆಫರ್ ನೀಡಿದ್ದೇ ಆದರೆ ಈ ಲ್ಯಾಪ್‌ಟಾಪ್‌ ಅನ್ನು ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೊದಲು ಇದೇ ಬೆಲೆ ವಿಭಾಗದಲ್ಲಿ ಜಿಯೋ ವಿಶೇಷ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡಿತ್ತು. ಆದರೆ ಅಷ್ಟೇನು ಹೇಳಿಕೊಳ್ಳುವಷ್ಟು ಜನಪ್ರಿಯತೆ ಪಡೆಯಲಿಲ್ಲ. ಆದರೆ ಈಗ ಶಿಯೋಮಿ ಕೊಂಚ ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಈ ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ ಅನ್ನು ಅನಾವರಣ ಮಾಡಿದ್ದು, ಇನ್ಫಿನಿಕ್ಸ್ ನ ನಿರ್ಧಾರ ನಿಮಗೆ ಇಷ್ಟ ಆಗಿದ್ದಲ್ಲಿ ಕಮೆಂಟ್‌ ಮಾಡಿ ಸಂತಸ ಹಂಚಿಕೊಳ್ಳಿ.

Best Mobiles in India

English summary
Infinix was popular till now for unveiling the best smartphones at affordable prices. Accordingly, Infinix INBook Y2 Plus Laptop has now been unveiled at an affordable price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+