Home
ಸುದ್ದಿಜಾಲ

Infinix smartphone: 256GB ಸ್ಟೋರೇಜ್‌.. 5000mAh ಬ್ಯಾಟರಿ.. ಇನ್ಫಿನಿಕ್ಸ್‌ನ ಈ ಫೋನ್‌ ಬೆಲೆ ಇಷ್ಟೇನಾ!?

ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ (Infinix smartphone) ಭಾರತದಲ್ಲಿ ಭಾರೀ ಬೇಡಿಕೆ ಇದೆ. ಈ ಫೋನ್‌ಗಳು ಮೊದಲೇ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಅನ್ನು ನೀಡುತ್ತವೆ. ಈ ನಡುವೆ ಪ್ರಮುಖ ಇ ಕಾಮರ್ಸ್‌ ಸೈಟ್‌ನಲ್ಲಿ ಇನ್ನೂ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ ಎಂದರೆ ಸಂತಸಪಡುವ ವಿಷಯವೂ ಹೌದು.

ಹೌದು, ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Big Billion Days Sale) ಭರ್ಜರಿ ರಿಯಾಯಿತಿ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಹೆಚ್ಚು ಸೇಲ್‌ ಆಗುತ್ತಿರುವ ಇನ್ಫಿನಿಕ್ಸ್ ನೋಟ್ 12 ಟರ್ಬೊ (Infinix Note 12 Turbo) ಸ್ಮಾರ್ಟ್‌ಫೋನ್ ಗೆ ದೊಡ್ಡ ಡಿಸ್ಕೌಂಟ್‌ ನೀಡಲಾಗಿದೆ. ಈ ಫೋನ್ 50 ಕ್ಯಾಮೆರಾ, 33W ಚಾರ್ಜಿಂಗ್, ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್‌ ವಿವರಗಳನ್ನು ನೋಡೋಣ ಬನ್ನಿ.

256GB ಸ್ಟೋರೇಜ್‌.. 5000mAh ಬ್ಯಾಟರಿ.. ಇನ್ಫಿನಿಕ್ಸ್‌ನ ಈ ಫೋನ್‌ಬೆಲೆ ಇಷ್ಟೇನಾ!

ಇನ್ಫಿನಿಕ್ಸ್ ನೋಟ್ 12 ಟರ್ಬೊ ಫೀಚರ್ಸ್: ಈ ಸ್ಮಾರ್ಟ್‌ಫೋನ್‌ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳನ್ನು ನೋಡೋಣ. ಅದರಂತೆ ಈ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ (AMOLED display) ಹೊಂದಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್‌ ಮತ್ತು 180Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಹೊಂದುವ ಮೂಲಕ ಅತ್ಯುತ್ತಮ ಎನಿಸಿದೆ.

ಇನ್ಫಿನಿಕ್ಸ್ ನೋಟ್ 12 ಟರ್ಬೊ ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G96 12nm ಚಿಪ್‌ಸೆಟ್ (MediaTek Helio G96 12nm chipset) ಮತ್ತು ಮಾಲಿ G57 MC2 GPU ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಪ್ಯಾಕ್‌ ಆಗಿದ್ದು, ಈ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದಾಗಿದೆ. ಇದರೊಂದಿಗೆ 8 GB RAM + 5 GB ವರ್ಚುವಲ್ RAM ಬೆಂಬಲದ ಆಯ್ಕೆಯ ಫೋನ್‌ ಇದಾಗಿದೆ.

ಉಳಿದಂತೆ ಈ ಫೋನ್ 8GB RAM + 128GB ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, 512 GB ವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ಬಳಕೆ ಮಾಡಿಕೊಂಡು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್ ಆಯ್ಕೆ ನೀಡಲಾಗಿದೆ. ಜೊತೆಗೆ ಈ ಫೋನ್‌ ಆಂಡ್ರಾಯ್ಡ್‌ 12 ಓಎಸ್‌ (Android 12 OS) ಮತ್ತು XOS 10.6 ನೊಂದಿಗೆ ರನ್‌ ಆಗಲಿದೆ.

ಇನ್ಫಿನಿಕ್ಸ್ ನೋಟ್ 12 ಟರ್ಬೊ ಕ್ಯಾಮೆರಾ ರಚನೆ: ಈ ಫೋನ್‌ ಕ್ವಾಡ್ ಎಲ್‌ಇಡಿ ಫ್ಲ್ಯಾಶ್‌‌ನೊಂದಿಗೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಕ್ಯಾಮೆರಾ ಸೆನ್ಸರ್‌ನಲ್ಲಿ ಎಐ ಲೆನ್ಸ್ (AI Lens) ಬಳಕೆ ಮಾಡಲಾಗಿದೆ. ಉಳಿದಂತೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಇನ್ಫಿನಿಕ್ಸ್ ನೋಟ್ 12 ಟರ್ಬೊ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಸ್ಟೀರಿಯೋ ಸ್ಪೀಕರ್‌ ಆಯ್ಕೆ, 3.5 ಎಂಎಂ ಆಡಿಯೊ ಜಾಕ್‌ ಸೌಲಭ್ಯ ನೀಡಲಾಗಿದೆ. ಈ ಫೋನ್ ಡ್ಯುಯಲ್ 4G VoLTE, ವೈ ಫೈ 802, ಬ್ಲೂಟೂತ್ ಆವೃತ್ತಿ 5 ಮತ್ತು ಜಿಪಿಎಸ್‌ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.

256GB ಸ್ಟೋರೇಜ್‌.. 5000mAh ಬ್ಯಾಟರಿ.. ಇನ್ಫಿನಿಕ್ಸ್‌ನ ಈ ಫೋನ್‌ಬೆಲೆ ಇಷ್ಟೇನಾ!

ಇನ್ಫಿನಿಕ್ಸ್ ನೋಟ್ 12 ಟರ್ಬೊ ಬೆಲೆ ಹಾಗೂ ಅಫರ್‌ ವಿವರ: ಈ ಫೋನ್‌ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಆಫರ್‌ನಲ್ಲಿ ಕಾಣಿಸಿಕೊಂಡಿದೆ. ಅಂದ್ರೆ ಈ ಫೋನ್‌ನ ಸಾಮಾನ್ಯ ದರ 19,999 ರೂ.ಗಳಾಗಿದ್ದು, ನೀವು ಇದನ್ನು 12,999 ರೂ.ಗಳಿಗೆ ಖರೀದಿ ಮಾಡಬಹುದು. ಈ ವೇಳೆ ನೀವು ಕೆಲವು ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡುವ ಮೂಲಕ 2000 ರೂ.ಗಳಿಗೂ ಅಧಿಕ ರಿಯಾಯಿತಿ ಪಡೆದುಕೊಳ್ಳಹುದಾಗಿದ್ದು, ಇದರಿಂದ ಹತ್ತು ಸಾವಿರದ ಆಸುಪಾಸಿನಲ್ಲಿ ಈ ಫೋನ್‌ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Best Mobiles in India

English summary
Infinix smartphones are given huge discounts in the Flipkart Big Billion Days Sale. Especially Infinix Note 12 Turbo smartphone has been given a big discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+