Home
ಸುದ್ದಿಜಾಲ

Infinix: ಇನ್ಫಿನಿಕ್ಸ್‌ನ ಈ ಫೋನ್‌ ಮೇಲೆ 34% ರಿಯಾಯಿತಿ: 50 MP ಕ್ಯಾಮೆರಾ, 512 GB ವರೆಗೂ ಸ್ಟೋರೇಜ್‌ ಆಯ್ಕೆ

ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix smartphone) ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್‌ ಆಯ್ಕೆ ನೀಡುತ್ತವೆ. ಈ ಕಾರಣಕ್ಕೆ ಭಾರತದಲ್ಲಿ ಈ ಫೋನ್‌ಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದ್ದು, ಈ ನಡುವೆ ಹೊಸ ಹೊಸ ಫೋನ್‌ಗಳು ಸಹ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್‌ ಮಾಡುತ್ತಿವೆ.

ಹೌದು, ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಗ್ರಾಹಕರಿಗೆ ಅಚ್ಚು ಮೆಚ್ಚು. ಅದರಂತೆ ಈಗ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಇನ್ಫಿನಿಕ್ಸ್ ನೋಟ್‌ 12i ಸ್ಮಾರ್ಟ್‌ಫೋನ್‌ಗೆ (Infinix Note 12i smartphone) ಆಫರ್ ಘೋಷಣೆ ಮಾಡಲಾಗಿದ್ದು, ಈ ಫೋನ್ 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 50 MP ಮುಖ್ಯ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದ್ದು, ಬಜೆಟ್‌ ಬೆಲೆಯಲ್ಲಿ ಫೋನ್‌ ಖರೀದಿ ಮಾಡುವವರಿಗೆ ಅತ್ಯುತ್ತಮ ಆಯ್ಕೆ ಆಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಏನು ಅಂತಾ ನೋಡೋಣ ಬನ್ನಿ.

ಇನ್ಫಿನಿಕ್ಸ್‌ನ ಈ ಫೋನ್‌ ಮೇಲೆ 34% ರಿಯಾಯಿತಿ: 50 MP ಕ್ಯಾಮೆರಾ..

ಇನ್ಫಿನಿಕ್ಸ್ ನೋಟ್‌ 12i ಆಫರ್ ವಿವರ: ಈ ಫೋನ್ 12,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 8,499ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 34% ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಆಯ್ಕೆ ಸಹ ನೀಡಲಾಗಿದ್ದು, ಈ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಇನ್ಫಿನಿಕ್ಸ್ ನೋಟ್‌ 12i ಗೆ ಬ್ಯಾಂಕ್‌ ಅಫರ್ ನೋಡುವುದಾದ್ರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೇಲೆ 500ರೂ.ಗಳ ಹೆಚ್ಚುವರಿ ರಿಯಾಯಿತಿ. ಬ್ಯಾಂಕ್ ಆಫರ್ 9 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೇಲೆ 750 ರೂ.ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ ಮೇಲೂ ಆಫರ್ ನೀಡಲಾಗಿದೆ.

ಇನ್ಫಿನಿಕ್ಸ್‌ನ ಈ ಫೋನ್‌ ಮೇಲೆ 34% ರಿಯಾಯಿತಿ: 50 MP ಕ್ಯಾಮೆರಾ..

ಇನ್ಫಿನಿಕ್ಸ್ ನೋಟ್‌ 12i ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಫೀಚರ್ಸ್‌ ಕಡೆ ಗಮನಹರಿಸಿ. ಅದರಂತೆ ಈ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 2400 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ. ಜೊತೆಗೆ 180 Hz ರಿಫ್ರೆಶ್‌ ರೇಟ್, 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ 92% ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ.

ಇನ್ಫಿನಿಕ್ಸ್ ನೋಟ್‌ 12i ಪ್ರೊಸೆಸರ್ ಮಾಹಿತಿ: ಇನ್ನು ಈ ಫೋನ್ ಮೀಡಿಯಾಟೆಕ್ ಹಿಲಿಯೊ G85 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಓಎಸ್‌ ಅನ್ನು ರನ್‌ ಮಾಡಲಿದೆ. ಇದರೊಂದಿಗೆ 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 4 GB RAM ಈ ಫೋನ್‌ ಉತ್ತಮವಾಗಿ ಕೆಲಸ ಮಾಡಲು ಸಹಕಾರ ನೀಡಲಿದೆ. ಹಾಗೆಯೇ 512 GB ವರೆಗೆ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಲು ಸಹ ಅನುಕೂಲ ಮಾಡಿಕೊಡಲಿದೆ.

ಇನ್ಫಿನಿಕ್ಸ್ ನೋಟ್‌ 12i ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು AI ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾದೊಂದಿಗೆ + QVGA ಸೆನ್ಸರ್‌ ಆಯ್ಕೆ ಪಡೆದಿದೆ. ಜೊತೆಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾದ ಆಯ್ಕೆ ನೀಡಲಾಗಿದ್ದು, ಈ ಸೆನ್ಸರ್‌ಗಳು AI ಕ್ಯಾಮ್, ಬ್ಯೂಟಿ, ಪೋರ್ಟ್ರೇಟ್, ಸೂಪರ್ ನೈಟ್, AR ಶಾಟ್, ಪ್ರೊ, ಪನೋರೋಮಾ, ಡಾಕ್ಯುಮೆಂಟ್‌ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಪಡೆದುಕೊಂಡಿವೆ.

ಇನ್ಫಿನಿಕ್ಸ್‌ನ ಈ ಫೋನ್‌ ಮೇಲೆ 34% ರಿಯಾಯಿತಿ: 50 MP ಕ್ಯಾಮೆರಾ..

ಇನ್ಫಿನಿಕ್ಸ್ ನೋಟ್‌ 12i ಬ್ಯಾಟರಿ ಹಾಗೂ ಇತರೆ: ಈ ವಿಶೇಷ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, 4G,3G,2G ನೆಟ್‌ವರ್ಕ್‌, ಬ್ಲೂಟೂತ್ ಆವೃತ್ತಿ v5.0, ವೈ-ಫೈ ಆವೃತ್ತಿ IEEE 802.11 a/b/g/n/ac, 2.4 GHz ಮತ್ತು 5 GHz, ವೈ-ಫೈ ಹಾಟ್‌ಸ್ಪಾಟ್, ಯುಎಸ್‌ಬಿ ಸಂಪರ್ಕ, ಜಿಪಿಎಸ್ ಬೆಂಬಲ, ಫಿಂಗರ್‌ಪ್ರಿಂಟ್ ಸೆನ್ಸರ್‌, ಆಂಬಿಯೆಂಟ್ ಲೈಟ್ ಸೆನ್ಸರ್, ಜಿ-ಸೆನ್ಸರ್, ಸಾಮೀಪ್ಯ ಸಂವೇದಕ, ಗೈರೊಸ್ಕೋಪ್, ಇ-ದಿಕ್ಸೂಚಿ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಪಡೆದಿದೆ.

Best Mobiles in India

English summary
Infinix smartphones are a hit with consumers in India. Accordingly, an offer for Infinix Note 12i smartphone has been announced on a leading e-commerce site, and this phone has appeared with a 64 GB internal storage option and a 50 MP main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+