Home
ಸುದ್ದಿಜಾಲ

Infinix: ಇನ್ಫಿನಿಕ್ಸ್ ನೋಟ್‌ 30 5G ಫೋನ್‌ಗೆ ಡಿಸ್ಕೌಂಟ್‌...256 GB ಸ್ಟೋರೇಜ್‌, 108 MP ಕ್ಯಾಮೆರಾ!

ಇನ್ಫಿನಿಕ್ಸ್ ಫೋನ್‌ಗಳು (Infinix Phones) ಭಾರತದಲ್ಲಿ ಬಹಳ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿವೆ. ಯಾಕೆಂದರೆ ಇವು ವಿಶೇಷ ಶೈಲಿ ಹಾಗೂ ಹೆಚ್ಚಿನ ಸ್ಟೋರೇಜ್‌ ಬಲ ಮತ್ತು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಪಡೆಯುವ ಮೂಲಕ ಜನರನ್ನು ಸೆಳೆಯುತ್ತಿವೆ. ಅದೂ ಸಹ ಅಗ್ಗದ ದರದಲ್ಲಿ.

ಹೌದು, ಇನ್ಫಿನಿಕ್ಸ್ ಫೋನ್‌ಗಳ ವಿಭಾಗದಲ್ಲಿ ಇತ್ತೀಚಿಗಷ್ಟೇ ಲಾಂಚ್‌ ಆದ ಇನ್ಫಿನಿಕ್ಸ್ ನೋಟ್‌ 30 5G (Infinix Note 30 5G) ಸ್ಮಾರ್ಟ್‌ಫೋನ್‌ಗೆ ಫ್ಲಿಕ್‌ಕಾರ್ಟ್‌ನಲ್ಲಿ ಭಾರೀ ಡಿಸ್ಕೌಂಟ್‌ ನೀಡಲಾಗಿದೆ. ಇದೇ ಫೀಚರ್ಸ್‌ ಆಯ್ಕೆಯ ಇತರೆ ಬ್ರ್ಯಾಂಡ್‌ನ ಫೋನ್‌ಗಳು ದುಬಾರಿ ಬೆಲೆ ಹೊಂದಿವೆ. ಆದರೆ ಈ ಫೋನ್ ಮಾತ್ರ ಬಜೆಟ್‌ ಬೆಲೆಗೆ ಕೈ ನಿಮ್ಮ ಕೈ ಸೇರಲಿದೆ. ಅಷ್ಟೇ ಅಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ಗಳಿಗೆ ಇನ್ನೂ ಹೆಚ್ಚಿನ ಆಫರ್‌ ನೀಡಲಾಗಿದ್ದು, ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದು. ಹಾಗಿದ್ರೆ, ಇದರ ಆಫರ್‌ ಬೆಲೆ ಎಷ್ಟು?, ಫೀಚರ್ಸ್‌ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

Infinix: ಇನ್ಫಿನಿಕ್ಸ್ ನೋಟ್‌ 30 5G ಫೋನ್‌ಗೆ ವಾವ್‌ ಎನಿಸುವ ಡಿಸ್ಕೌಂಟ್‌...

ಇನ್ಫಿನಿಕ್ಸ್ ನೋಟ್‌ 30 5G ಆಫರ್‌ ಬೆಲೆ ವಿವರ: 8 GB RAM ಹಾಗೂ 256 GB ಇಂಟರ್‌ ಸ್ಟೋರೇಜ್‌ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ ಬೆಲೆಗೆ ಲಭ್ಯ ಇದೆ. ಅಂದರೆ ಇದರ ಸಾಮಾನ್ಯ ಬೆಲೆ 19,999ರೂ.ಗಳಾಗಿದ್ದು, ಆದರೆ ನೀವು ಈಗ ಇದನ್ನು 14,499ರೂ.ಗಳಿಗೆ ಖರೀದಿ ಮಾಡಬಹುದು. ಅಂದರೆ 27% ನೇರ ಡಿಸ್ಕೌಂಟ್‌ ಅನ್ನು ಈ ಫೋನ್‌ಗೆ ನೀಡಲಾಗಿದೆ.

ಇದಿಷ್ಟೇ ಅಲ್ಲದೆ ಇಪ್ಪತ್ತಕ್ಕೂ ಹೆಚ್ಚು ಬ್ಯಾಂಕ್‌ ಆಫರ್‌ ನೀಡಲಾಗಿದ್ದು, ಅದರಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಬ್ಯಾಂಕ್ 10% ರಿಯಾಯಿತಿ ಸಿಗಲಿದೆ ಹಾಗೂ ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಬ್ಯಾಂಕ್ ಆಫರ್ 10% ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ನಲ್ಲಿ 5% ರಿಯಾಯಿತಿ, ಯಾವುದೇ ವೆಚ್ಚದ ಇಎಮ್‌ಐ ತಿಂಗಳಿಗೆ 2,417ರೂ.ಗಳು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.

ಇದರೊಂದಿಗೆ ಕೋಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಬ್ಯಾಂಕ್ 10% ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಹಾಗೂ
ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಇದರಿಂದಾಗಿ ನೀವು ಬಹಳ ಹಣ ಉಳಿತಾಯ ಮಾಡಬಹುದಾಗಿದೆ. ಜೊತೆಗೆ ವಿನಿಮಯ ಆಫರ್‌ ಅನ್ನು ಸಹ ನೀಡಲಾಗಿದ್ದು, ಇದರಲ್ಲಿ ನೀವು 9 ಸಾವಿರಕ್ಕೂ ಅಧಿಕ ಹಣ ಉಳಿತಾಯ ಮಾಡಬಹುದು. ಹಾಗಿದ್ರೆ, ಬನ್ನಿ ಈ ಫೋನ್‌ ಕೆಲವು ಫೀಚರ್ಸ್‌ ಕಡೆ ಕಣ್ಣಾಯಿಸೋಣ.

ಇನ್ಫಿನಿಕ್ಸ್ ನೋಟ್‌ 30 5G ಡಿಸ್‌ಪ್ಲೇ ವಿವರ: ಈ ಫೋನ್ 6.78 ಇಂಚಿನ 2460 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಫುಲ್‌ HD+ LTPS IPS ಡಿಪ್ಲೇ ಯನ್ನು ಹೊಂದಿದೆ. ಇದರೊಂದಿಗೆ ಈ ಫೋನ್ 120 Hz ರಿಫ್ರೆಶ್ ರೇಟ್‌, 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌, 580 ನಿಟ್ಸ್ ಬ್ರೈಟ್‌ನೆಸ್‌ ಆಯ್ಕೆ, 1500:1 ಬಣ್ಣ ಕಾಂಟ್ರಾಸ್ಟ್ ಅನುಪಾತ, NEG ಗ್ಲಾಸ್ ಪ್ರೊಟೆಕ್ಷನ್, ಐ ಕೇರ್ ಮೋಡ್, TUV ರೈನ್‌ಲ್ಯಾಂಡ್ ಸೇರಿದಂತೆ ಅನೇಕ ವಿಶೇಷ ಡಿಸ್‌ಪ್ಲೇ ಫೀಚರ್ಸ್‌ ಪಡೆದುಕೊಂಡಿದೆ.

ಇನ್ಫಿನಿಕ್ಸ್ ನೋಟ್‌ 30 5G ಪ್ರೊಸೆಸರ್‌: ಈ ಗೇಮಿಂಗ್ ಸ್ಮಾರ್ಟ್‌ಫೋನ್ ಶಕ್ತಿಯುತ 6080 6nm 5G ಪ್ರೊಸೆಸರ್ ಅನ್ನು ಹೊಂದಿದ್ದು, 2.4 GHz ವರೆಗೆ ಕಾರ್ಯನಿರ್ವಹಿಸುವ ಆರ್ಮ್ ಕಾರ್ಟೆಕ್ಸ್-A76 ಆವರ್ತನಗಳ ಲಭ್ಯತೆಯೊಂದಿಗೆ 20% ತ್ವರಿತ ಇನ್-ಗೇಮ್ ಕಾರ್ಯಕ್ಷಮತೆಯನ್ನು ನೀಡಲಿದೆ. ಇದರೊಂದಿಗೆ ಸಂಪರ್ಕಿತ ನೆಟ್‌ವರ್ಕ್‌ಗಳ ಜೊತೆಗೆ ಗೇಮ್‌ಗಳಲ್ಲಿ ತ್ವರಿತ ಆಪ್‌ ಪ್ರತಿಕ್ರಿಯೆ ಮತ್ತು ಹೆಚ್ಚಿನ FPS ಅನ್ನು ಒದಗಿಸುತ್ತದೆ.

ಇನ್ಫಿನಿಕ್ಸ್ ನೋಟ್‌ 30 5G ಕ್ಯಾಮೆರಾ ರಚನೆ: ಇದು 108MP (f/1.75 ಅಪರ್ಚರ್, 6P ಲೆನ್ಸ್, PDAF) + 2MP + AI ಲೆನ್ಸ್, ಕ್ಯಾಮೆರಾ ಸೆನ್ಸರ್‌ ಹಾಗೂ ಟ್ರಿಪಲ್ ಎಲ್‌ಇಡಿ ಫ್ಲ್ಯಾಶ್, ಫಿಲ್ಮ್ ಮೋಡ್, ವಿಡಿಯೋ, ಎಐ ಕ್ಯಾಮ್, ಬ್ಯೂಟಿ, ಪೋರ್ಟ್ರೇಟ್, ಸೂಪರ್ ನೈಟ್, AR ಶಾಟ್, ಶಾರ್ಟ್ ವಿಡಿಯೋ, ಪ್ರೊ, ಸ್ಲೋ ಮೋಷನ್, ಡ್ಯುಯಲ್ ವಿಡಿಯೋ, ಪನೋರಮಾ, ಡಾಕ್ಯುಮೆಂಟ್‌ಗಳು, ಟೈಮ್‌ಲ್ಯಾಪ್ಸ್, ಸ್ಕೈ ಶಾಪ್, ವೈಡ್ ಸೆಲ್ಫಿ ಆಯ್ಕೆಯ ಫೀಚರ್ಸ್‌ ಅನ್ನು ಈ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 16MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಇನ್ಫಿನಿಕ್ಸ್ ನೋಟ್‌ 30 5G ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯ್ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಉಳಿದಂತೆ ಬ್ಲೂಟೂತ್ ಆವೃತ್ತಿ v5.1, Wi-Fi ಆವೃತ್ತಿ 802.11 (a/b/g/n/ac), USB ಸಂಪರ್ಕ, 3.5ಮಿ.ಮೀ ಆಡಿಯೋ ಜ್ಯಾಕ್, ಜಿಪಿಎಸ್ ಬೆಂಬಲ, ಜಿ-ಸೆನ್ಸರ್, ಇ-ಕಾಂಪಸ್, ಗೈರೊಸ್ಕೋಪ್, ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್, Z-ಆಕ್ಸಿಸ್ ಮೋಟಾರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಫೋನ್‌ ಹೊಂದಿದೆ.

Best Mobiles in India

English summary
Infinix Note 30 5G smartphone has been given a huge discount on Flipkart in the Infinix phones category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+