Home
ಸುದ್ದಿಜಾಲ

ಇನ್ಫಿನಿಕ್ಸ್‌ ಸಂಸ್ಥೆಯಿಂದ ರೇಸಿಂಗ್ ಎಡಿಷನ್‌ ಫೋನ್‌ ಬಿಡುಗಡೆ..ಬೆಲೆ ಎಷ್ಟು?

ಮೊಬೈಲ್‌ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್‌ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ ಶ್ರೇಣಿಯ ಮೂಲಕ ಗುರುತಿಸಿಕೊಂಡಿದೆ. ಇದೀಗ ಸಂಸ್ಥೆಯು ಹೊಸದಾಗಿ ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ (Infinix Note 30 VIP Racing Edition) ಫೋನ್‌ ಅನ್ನು ಬಿಡುಗಡೆ ಮಾಡಿ, ಗ್ರಾಹಕರ ಗಮನ ಸೆಳೆದಿದೆ.

ಹೌದು, ಇನ್ಫಿನಿಕ್ಸ್‌ ಕಂಪನಿಯು ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ (Infinix Note 30 VIP Racing Edition) ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಸಂಸ್ಥೆಯು ಇನ್ಫಿನಿಕ್ಸ್‌ ನೋಟ್‌ 30 5G ಫೋನ್‌ ಅನ್ನು ಪರಿಚಯಿಸಿದ್ದು, ಆದರೆ ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ವಿಶೇಷ ಆವೃತ್ತಿಯಾಗಿದೆ. ಇದು ಭಿನ್ನ ವಿನ್ಯಾಸ ಪಡೆದಿದೆ.

ಇನ್ಫಿನಿಕ್ಸ್‌ ಸಂಸ್ಥೆಯಿಂದ ರೇಸಿಂಗ್ ಎಡಿಷನ್‌ ಫೋನ್‌ ಬಿಡುಗಡೆ..ಬೆಲೆ ಎಷ್ಟು?

ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್‌ ಪವರ್‌ ಅನ್ನು ಹೊಂದಿದೆ. ಹಾಗೆಯೇ 5,000mAh ಬ್ಯಾಟರಿ ಜೊತೆಗೆ 68W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಅನ್ನು ಸಪೋರ್ಟ್‌ ಮಾಡುತ್ತದೆ. ಇನ್ನುಳಿದಂತೆ ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ನೋಟ್‌ 30 5G ಡಿಸ್‌ಪ್ಲೇ ರಚನೆ ಹೀಗಿದೆ :
ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ಮೊಬೈಲ್‌ 6.67ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಜೊತೆಗೆ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 580 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.

ಇನ್ಫಿನಿಕ್ಸ್‌ ನೋಟ್‌ 30 5G ಪ್ರೊಸೆಸರ್‌ ಮಾಹಿತಿ ಇಲ್ಲಿದೆ :
ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್‌ ಪವರ್‌ ಪ್ರೊಸೆಸರ್‌ ಪವರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ XOS 13 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB/12GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ ನೋಟ್‌ 30 5G ಕ್ಯಾಮೆರಾ ರಚನೆ ಹೀಗಿದೆ :
ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನುಳಿದ ಎರಡು ಕ್ಯಾಮೆರಾ 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇವೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಇನ್ಫಿನಿಕ್ಸ್‌ ನೋಟ್‌ 30 5G ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು :
ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 68W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi, ಬ್ಲೂಟೂತ್, GPS, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತದೆ.

ಇನ್ಫಿನಿಕ್ಸ್‌ ನೋಟ್‌ 30 5G ಬೆಲೆ ಮತ್ತು ಮೆಮೊರಿ :
ಇನ್ಫಿನಿಕ್ಸ್‌ ನೋಟ್‌ 30 5G VIP ರೇಸಿಂಗ್ ಎಡಿಷನ್‌ ಮೊಬೈಲ್‌ 8GB/12GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಗೆ USD 315 (ಭಾರತದಲ್ಲಿ ಅಂದಾಜು 26,162ರೂ) ಎನ್ನಲಾಗಿದೆ.

Best Mobiles in India

English summary
Infinix Note 30 VIP Racing Edition launched globally. price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+