ಇನ್ಫಿನಿಕ್ಸ್ ನೋಟ್ 30 VIP ಫೋನ್ ಅನಾವರಣ: ಬೊಂಬಾಟ್ ಫೀಚರ್ಸ್, ಬೆಲೆ ಎಷ್ಟು?
ಇನ್ಫಿನಿಕ್ಸ್ ಕಂಪೆನಿಯ ಸ್ಮಾರ್ಟ್‌ಡಿವೈಸ್‌ಗಳು ವಿಭಿನ್ನ ಫೀಚರ್ಸ್ ಹಾಗೂ ಕಾರ್ಯಕ್ಷಮತೆ ಹೊಂದಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಭದ್ರ ಸ್ಥಾನ ಪಡೆದುಕೊಂಡಿವೆ. ಈ ನಡುವೆ ಇನ್ಫಿನಿಕ್ಸ್ ಹೊಸ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಇದು 6.67 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿರುವುದರ ಜೊತೆಗೆ ಆಕರ್ಷಕ ಶೈಲಿ ಪಡೆದುಕೊಂಡಿದೆ.
ಹೌದು, ಕಳೆದ ತಿಂಗಳು ಇನ್ಫಿನಿಕ್ಸ್ (Infinix) ನೋಟ್ 30 ಪ್ರೊ, ನೋಟ್ 30, ನೋಟ್ 30i ಮತ್ತು ನೋಟ್ 30 5G ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿತ್ತು. ಇದೀಗ ಇನ್ಫಿನಿಕ್ಸ್ ಅಧಿಕೃತವಾಗಿ ನೋಟ್ 30 VIP 5G ಸ್ಮಾರ್ಟ್‌ಫೋನ್ (Infinix Note 30 VIP) ಅನ್ನು ನೋಟ್ 30 ಸರಣಿಯಲ್ಲಿ ಪರಿಚಯಿಸಿದೆ. ಈ ಫೋನ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್, ಬೆಲೆ ವಿವರ ತಿಳಿಯಲು ಈ ಲೇಖನ ಓದಿರಿ.

ಇನ್ಫಿನಿಕ್ಸ್ ನೋಟ್ 30 VIP 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.67 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ 1920 Hz PWM ಡಿಮ್ಮಿಂಗ್ ಸೌಲಭ್ಯದೊಂದಿಗೆ 900 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಉತ್ತಮವಾಗಿದೆ.
ಇನ್ಫಿನಿಕ್ಸ್ ನೋಟ್ 30 VIP 5G ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಆಕ್ಟಾ ಕೋರ್ 1 x ಕಾರ್ಟೆಕ್ಸ್-A78 3GHz +3x ಕಾರ್ಟೆಕ್ಸ್-A78 2.6GHz + 4x ಕಾರ್ಟೆಕ್ಸ್-A55 2GHz ನಿಂದ ಪ್ಯಾಕ್ ಆಗಿದೆ. ಜೊತೆಗೆ ಎಆರ್‌ಎಮ್ G77 MC9 ಜಿಪಿಯು ಬಲ ಪಡೆದುಕೊಂಡಿದ್ದು, ಉಳಿದಂತೆ 8GB / 12GB RAM ಹಾಗೂ 256GB ಇಂಟರ್ ಸ್ಟೋರೇಜ್ ಆಯ್ಕೆ ಇದರಲ್ಲಿದೆ.
ಇನ್ಫಿನಿಕ್ಸ್ ನೋಟ್ 30 VIP 5G ಕ್ಯಾಮೆರಾ ರಚನೆ:ಇದರ ಕ್ಯಾಮೆರಾ ರಚನೆ ವಿಚಾರಕ್ಕೆ ಬಂದರೆ ಟ್ರಿಪಲ್ ರಿಯರ್ ಕ್ಯಾಮೆರಾ ಮೂಲಕ ಉತ್ತಮ ಸೆನ್ಸರ್‌ಗಳನ್ನು ಹೊಂದಿದೆ. ಅದರಲ್ಲಿ 108MP ಹಿಂಬದಿಯ ಕ್ಯಾಮರಾ ಜೊತೆಗೆ 1/1.67 ಸ್ಯಾಮ್‌ಸಂಗ್ HM6 ಸೆನ್ಸರ್, 2MP ಮ್ಯಾಕ್ರೋ ಮತ್ತು 2MP ಕ್ಯಾಮೆರಾ ಪೋರ್ಟ್ರೇಟ್ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಮೂಲಕ ಆಕರ್ಷಕವಾಗಿದೆ.

ಇನ್ಫಿನಿಕ್ಸ್ ನೋಟ್ 30 VIP 5G ಬ್ಯಾಟರಿ ಸಾಮರ್ಥ್ಯ: 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರುವ ಈ ಫೋನ್ 68W ವೇಗದ ಚಾರ್ಜಿಂಗ್, 50W ವಾಯರ್‌ಲೆಸ್ ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಈ ಮೂಲಕ ಕೇವಲ 30 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಿಕೊಳ್ಳಬಹುದು. ಇದರೊಂದಿಗೆ ರಿವರ್ಸ್ ಚಾರ್ಜ್ (ವೈರ್ಡ್ ಮತ್ತು ವೈರ್‌ಲೆಸ್), ಬೈಪಾಸ್ ಚಾರ್ಜ್, ಎಐ ಸ್ಮಾರ್ಟ್ ಚಾರ್ಜ್ ಮತ್ತು ಪಿಡಿ 3.0 ಸೇರಿದಂತೆ ಬಹು ಚಾರ್ಜಿಂಗ್ ವಿಧಾನಗಳನ್ನು ಬೆಂಬಲಿಸುತ್ತದೆ.
ಇನ್ಫಿನಿಕ್ಸ್ ನೋಟ್ 30 VIP 5G ಕನೆಕ್ಟಿವಿಟಿ ಫೀಚರ್ಸ್: ಈ ಫೋನ್ 3.5mm ಆಡಿಯೋ ಜ್ಯಾಕ್, ಸ್ಟೀರಿಯೋ ಸ್ಪೀಕರ್‌ಗಳು, ಜಿಬಿಎಲ್ ಸೌಂಡ್, ಹೈ-ರೆಸ್5G SA/NSA, ವೈ-ಫೈ 802.11 ac, ಬ್ಲೂಟೂತ್ ಆವೃತ್ತಿ 5.2,GPS/GLONASS , ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಕನೆಕ್ಟಿವಿಟಿ ಹೊಂದಿದೆ. ಹಾಗಿದ್ರೆ, ಇದರ ಬೆಲೆ ವಿವರ ತಿಳಿಯೋಣ ಬನ್ನಿ.

ಇನ್ಫಿನಿಕ್ಸ್ ನೋಟ್ 30 VIP 5G ಬೆಲೆ ಹಾಗೂ ಲಭ್ಯತೆ: ಈ ಫೋನ್ USD 299 ಬೆಲೆ ಹೊಂದಿದೆ. ಅಂದರೆ ಭಾರತದಲ್ಲಿ ಈ ಫೋನ್ 24,645ರೂ.ಗಳ ಬೆಲೆಯಿಂದ ಪ್ರಾರಂಭ ಆಗುತ್ತದೆ ಇದರೊಂದಿಗೆ ಈ ಫೋನ್ ಮ್ಯಾಜಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ವೈಟ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಶೀಘ್ರದಲ್ಲೇ ಖರೀದಿಗೆ ಲಭ್ಯ ಮಾಡಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.


Click it and Unblock the Notifications








