Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
ಇನ್ಫಿನಿಕ್ಸ್ (Infinix) ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್ ಆಯ್ಕೆಯ ಜೊತೆಗೆ ವಿಶೇಷ ಅನುಭವ ನೀಡುತ್ತವೆ. ಈ ನಡುವೆ ಇನ್ಫಿನಿಕ್ಸ್ ನೋಟ್ 40 5G (Infinix Note 40 5G) ಸ್ಮಾರ್ಟ್‌ಫೋನ್ ಸರಣಿ ಇಂದು ಸೇಲ್ ಆಗುತ್ತಿದ್ದು, ಮಧ್ಯಮ ಶ್ರೇಣಿಯ ಫೋನ್ ಮಾರುಕಟ್ಟೆಯಲ್ಲಿ ಪ್ರಬಲ ಫೀಚರ್ಸ್ ಮತ್ತು ಅದ್ಭುತ ವಿನ್ಯಾಸದ ಆಯ್ಕೆ ನೀಡುತ್ತಿದೆ.
ಹೌದು, ಇನ್ಫಿನಿಕ್ಸ್ ನೋಟ್ 40 ಪ್ರೊ 5G ಇಂದು ಸೇಲ್ ಆಗಲಿದ್ದು, ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7020 5G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಇನ್ಫಿನಿಕ್ಸ್ ನೋಟ್ 40 ಪ್ರೊ 5G ಸ್ಮಾರ್ಟ್‌ಫೋನ್ ಬೆಲೆ ಹಾಗೂ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಅನ್ನು ಇಂದು ಸೇಲ್ ಆಗುತ್ತಿದ್ದು, ಮಿಡ್ ರೇಂಜರ್ ವಿಭಾಗದಲ್ಲಿ ದೊಡ್ಡ ಅಲೆಯನ್ನೇ ಉಂಟು ಮಾಡಲಿದೆ. ಈ ಫೋನ್ ವಿಂಟೇಜ್ ಗ್ರೀನ್ ಮತ್ತು ಟೈಟಾನ್ ಗೋಲ್ಡ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದ್ದು, 5,000 ಮೌಲ್ಯದ ಮುಂಗಡ-ಕೋರಿಕೆ ಪ್ರಯೋಜನಗಳನ್ನು ಬಳಕೆದಾರರು ಪಡೆಯಬಹುದು. ಈ ಫೋನ್ 8GB RAM + 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 21,999 ರೂಗಳ ಆರಂಭಿಕ ಬೆಲೆಯೊಂದಿಗೆ ಲಭ್ಯ ಇರಲಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಫೀಚರ್ಸ್: ಈ ಸ್ಮಾರ್ಟ್‌ಫೋನ್ 40 ಪ್ರೊ+ 5G ಮತ್ತು ನೋಟ್ 40 ಪ್ರೊ 5G ಒಂದೇ ರೀತಿಯ ಫೀಚರ್ಸ್ ಪಡೆದಿದೆ. ಆದರೆ ಇವುಗಳ ಪ್ರಾಥಮಿಕ ವ್ಯತ್ಯಾಸಗಳೆಂದರೆ ಅವುಗಳ ಬ್ಯಾಟರಿ ಸಾಮರ್ಥ್ಯಗಳು ಮತ್ತು ಚಾರ್ಜಿಂಗ್ ಸಾಮರ್ಥ್ಯಗಳು. ಪ್ರತಿ ಮಾದರಿಯು 6.78 ಇಂಚಿನ FHD+ ಕರ್ವ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್, 1300 ನಿಟ್ಸ್ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ.

ಇದರ ಜತೆಗೆ ಕಣ್ಣಿನ ಆರಾಮಕ್ಕಾಗಿ 2160Hz PWM ಮಬ್ಬಾಗಿಸುವಿಕೆಯನ್ನು ಈ ಫೋನ್ ಹೊಂದಿದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7020 6nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಈ ಫೋನ್ ಕ್ಯಾಮರಾ ವಿಚಾರಕ್ಕೆ ಬಂದರೆ ಇನ್ಫಿನಿಕ್ಸ್ ನೋಟ್ 40 ಪ್ರೊ ಲೈನ್ಅಪ್ ಹೆಚ್ಚಿನ ರೆಸಲ್ಯೂಶನ್ 108-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ.
ಇದರ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಒಳಗೊಂಡಿರಲಿದ್ದು, ಇದು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನಿಂದ ಪೂರಕವಾಗಿದೆ. ಸೆಲ್ಫಿ ಉತ್ಸಾಹಿಗಳು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಪ್ರಾರಂಭದಿಂದಲೇ ಇನ್ಫಿನಿಕ್ಸ್ನ XOS 14 ಇಂಟರ್ಫೇಸ್‌ನೊಂದಿಗೆ ಆಂಡ್ರಾಯ್ಡ್ 14 ಪ್ಲಾಟ್‌ಫಾರ್ಮ್‌ನಲ್ಲಿ ರನ್ ಆಗಲಿದೆ.

ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್ 4,600mAh ಬ್ಯಾಟರಿಯೊಂದಿಗೆ ಅಳವಡಿಸಲಾಗಿದ್ದು, 100W ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಮತ್ತೊಂದೆಡೆ, ಹೆಚ್ಚು ಬಜೆಟ್ ಸ್ನೇಹಿ ಇನ್ಫಿನಿಕ್ಸ್ ನೋಟ್ 40 ಪ್ರೊ ದೊಡ್ಡ ಅಂದರೆ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಆದರೆ, ಈ ಫೋನ್ 45W ವೇಗದ ಚಾರ್ಜಿಂಗ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ.
ಈ ಸ್ಮಾರ್ಟ್‌ಫೋನ್‌ನ ಎರಡೂ ಮಾದರಿಗಳು 20W ವೈರ್‌ಲೆಸ್ ಮ್ಯಾಗ್‌ಚಾರ್ಜ್ ಬೆಂಬಲದೊಂದಿಗೆ ಸಜ್ಜುಗೊಂಡಿದ್ದು, ಈ ಫೋನ್ 25,000 ರೂ.ಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಮೊದಲನೆಯದು. ಹೆಚ್ಚುವರಿ ಗುಣಲಕ್ಷಣಗಳಲ್ಲಿ ಡಿಸ್‌ಪ್ಲೇಯೊಂದಿಗೆ ಸಂಯೋಜಿಸಲಾದ ಫಿಂಗರ್‌ಫ್ರಿಂಟ್ ಸೆನ್ಸರ್ ಅನ್ನು ಈ ಫೋನ್ ಪಡೆದಿವೆ. ಹಾಗೆಯೇ ಐಆರ್ ಸೆನ್ಸರ್, ಜೆಬಿಎಲ್-ಟ್ಯೂನ್ ಸ್ಟಿರಿಯೊ ಸ್ಪೀಕರ್, IP53 ರೇಟಿಂಗ್ ಸೇರಿದಂತೆ ಇತರೆ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ.


Click it and Unblock the Notifications








