Home
ಸುದ್ದಿಜಾಲ

Infinix: ಇನ್ಫಿನಿಕ್ಸ್ ನೋಟ್‌ 40 ಪ್ರೊ 5G ಖರೀದಿ ಮೇಲೆ 4000 ರೂ. ಮೌಲ್ಯದ ಪವರ್ ಬ್ಯಾಂಕ್ ಫ್ರೀ....

ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix Smartphones) ಸುಧಾರಿತ ಫೀಚರ್ಸ್‌ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತವೆ. ಈ ನಡುವೆ ಶಿಯೋಮಿ ಹೊಸ ಹೊಸ ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಿದ್ದು, ಅದರಂತೆ ಈಗ ಇನ್ಫಿನಿಕ್ಸ್ ನೋಟ್‌ 40 ಪ್ರೊ 5G ಫೋನ್ (Infinix Note 40 Pro 5G) ಖರೀದಿದಾರರಿಗೆ ಬಂಫರ್ ಆಫರ್ ಘೋಷಣೆ ಮಾಡಿದೆ.

ಹೌದು, ಇನ್ಫಿನಿಕ್ಸ್ ಭಾರತದಲ್ಲಿನ ಖರೀದಿದಾರರಿಗೆ ಪ್ರಿ-ಬೆನಿಫಿಟ್ ಆಫರ್‌ ಅನ್ನು ಇನ್ಫಿನಿಕ್ಸ್ ನೋಟ್‌ 40 ಪ್ರೊ 5G ಮೇಲೆ ಘೋಷಣೆ ಮಾಡಿದೆ. ಅಂದರೆ ಗ್ರಾಹಕರು 4000 ರೂ.ಗಳ ಮೌಲ್ಯದ ಉಚಿತ ಪವರ್ ಬ್ಯಾಂಕ್ (Power bank) ಅನ್ನು ಪಡೆಯಬಹುದಾಗಿದೆ. ಹಾಗಿದ್ರೆ ಈ ಆಫರ್ ಅನ್ನು ಹೇಗೆ ಪಡೆಯಬಹುದು?, ಈ ಸ್ಮಾರ್ಟ್‌ಫೋನ್‌ ಯಾವಾಗ ಲಾಂಚ್‌ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ಫಿನಿಕ್ಸ್ ನೋಟ್‌ 40 ಪ್ರೊ 5G ಖರೀದಿ ಮೇಲೆ ಪವರ್ ಬ್ಯಾಂಕ್ ಫ್ರೀ....

ಇನ್ಫಿನಿಕ್ಸ್ ನೋಟ್‌ 40 ಪ್ರೊ 5G: ಈ ಸ್ಮಾರ್ಟ್‌ಫೋನ್ ಏಪ್ರಿಲ್ 12 ರಂದು ಲಾಂಚ್‌ ಆಗಲಿದೆ. ಈ ಫೋನ್‌ ಅನ್ನು ಲಾಂಚ್‌ ಮಾಡುವ ಮುನ್ನವೇ ತನ್ನ ಖರೀದಿದಾರರಿಗೆ ಪೂರ್ವ-ಪ್ರಯೋಜನ ಅಥವಾ ಆರಂಭಿಕ ಕೊಡುಗೆಯನ್ನು ಘೋಷಣೆ ಮಾಡಿದೆ. ಖರೀದಿದಾರರು ಮ್ಯಾಗ್‌ಕಿಟ್ (Magkit) ಅನ್ನು ಪಡೆಯಲಿದ್ದು, ಫೋನ್‌ನೊಂದಿಗೆ ಸಂಪೂರ್ಣ ಉಚಿತವಾಗಿ 4000 ರೂ.ಗಳ ಮೌಲ್ಯದ ಪವರ್ ಬ್ಯಾಂಕ್ ಅನ್ನು ಹೊಂದಿರುತ್ತದೆ. ಈ ಕಿಟ್‌ನಲ್ಲಿ ಚಾರ್ಜಿಂಗ್ ಆಕ್ಸೆಸರಿ, ಮ್ಯಾಗ್‌ಕೇಸ್ ಕವರ್ ಇರಲಿದೆ.

ಇನ್ನು ಈ ನೋಟ್‌ 40 ಪ್ರೊ ಸರಣಿಯು X1 ಚೀತಾ ಚಾರ್ಜಿಂಗ್ ಚಿಪ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹೊಸ ಚಿಪ್‌ಸೆಟ್ ಬ್ಯಾಟರಿ ಬಾಳಿಕೆಗೆ ಧಕ್ಕೆಯಾಗದಂತೆ ವೇಗವಾಗಿ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತದೆ. ಈ ಫೋನ್ ಮ್ಯೂಟಿ ಮೋಡ್ ಫಾಸ್ಟ್‌ಚಾರ್ಜ್ ಸೇರಿದಂತೆ ಕೆಲವು ಹೊಸ ಫೀಚರ್ಸ್‌ ಅನ್ನು ಪಡೆದಿದೆ. ಕಡಿಮೆ ತಾಪ, ಹೈಪರ್ ಮತ್ತು ಸ್ಮಾರ್ಟ್ ಚಾರ್ಜಿಂಗ್ ಮೋಡ್‌ ಆಯ್ಕೆಯನ್ನು ನೀಡಲಿದ್ದು, ಪ್ರೊ ಪ್ಲಸ್‌ ಫೋನ್ ಬಳಕೆದಾರರು ಹೈಪರ್ ಚಾರ್ಜ್‌ನೊಂದಿಗೆ ಕೇವಲ 8 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್‌ ಮಾಡಬಹುದಾಗಿದೆ.

ಇನ್ಫಿನಿಕ್ಸ್ ನೋಟ್‌ 40 ಪ್ರೊ 5G ಖರೀದಿ ಮೇಲೆ ಪವರ್ ಬ್ಯಾಂಕ್ ಫ್ರೀ....

ಇನ್ನು ನೋಟ್‌ 40 ಪ್ರೊ ಸ್ಮಾರ್ಟ್‌ಫೋನ್ 45W ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದ್ದು, ನೋಟ್‌ 40 ಪ್ರೊ+ 100W ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಎರಡೂ ವೇರಿಯಂಟ್‌ಗಳು 20W ವೈರ್‌ಲೆಸ್ ಮ್ಯಾಗ್‌ಚಾರ್ಜ್ ಅನ್ನು ಬೆಂಬಲಿಸುತ್ತವೆ.

ಇನ್ನು ಈ ಫೋನ್‌ನ ಇತರೆ ಫೀಚರ್ಸ್‌ ಬಗ್ಗೆ ಹೇಳುವುದಾದರೆ ಈ ಫೋನ್ 6.78 ಇಂಚಿನ ಕರ್ವ್ಡ್ 3D ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120 Hz ರಿಫ್ರೆಶ್ ರೇಟ್‌ ಮತ್ತು 1500 Hz ತ್ವರಿತ ಟಚ್‌ ಸ್ಯಾಂಪಲಿಂಗ್‌ ರೇಟ್‌ನೊಂದಿಗೆ ರೋಮಾಂಚಕ ಬಣ್ಣಗಳು ಮತ್ತು ತೀಕ್ಷ್ಣವಾದ ವಿವರಗಳೊಂದಿಗೆ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಹಾಗೆಯೇ ಕಾರ್ನಿಂಗ್ ಗ್ಲಾಸ್ ರಕ್ಷಣೆ ಪಡೆದಿದೆ.

ಇನ್ಫಿನಿಕ್ಸ್ ನೋಟ್‌ 40 ಪ್ರೊ 5G ಖರೀದಿ ಮೇಲೆ ಪವರ್ ಬ್ಯಾಂಕ್ ಫ್ರೀ....

ಲೆದರ್ ಮತ್ತು ಗ್ಲಾಸ್ ಫಿನಿಶ್‌ನಿಂದ ಪೂರಕವಾದ ಹೊಳೆಯುವ ಮೆಟಲ್‌ ರಿಯರ್‌ ಪ್ಯಾನಲ್‌ ಅನ್ನು ಈ ಫೋನ್‌ ಹೊಂದಿದೆ. ಜೊತೆಗೆ ವಿಭಿನ್ನವಾದ 55 ಡಿಗ್ರಿ ಗೋಲ್ಡನ್ ಕರ್ವೇಚರ್ ಆಯ್ಕೆ ಪಡೆದಿದೆ. ಪ್ರಮುಖವಾಗಿ ಈ ಸರಣಿಯು ಶೈಲಿ ಮತ್ತು ಬಾಳಿಕೆ ಎರಡಕ್ಕೂ ಆದ್ಯತೆ ನೀಡಲಾಗಿದೆ. ಉಳಿದಂತೆ ಈ ಫೋನ್‌ ವಿಂಟೇಜ್ ಗ್ರೀನ್ ಮತ್ತು ಟೈಟಾನ್ ಗೋಲ್ಡ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.

ಈ ರೀತಿಯ ಫೀಚರ್ಸ್‌ ಆಯ್ಕೆ ಪಡೆಯುವ ಮೂಲಕ ಈ ಫೋನ್‌ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗೇಮ್-ಚೇಂಜರ್ ಆಗಿ ಹೊರಹೊಮ್ಮುತ್ತದೆ. ಈ ಸುಧಾರಿತ ಫೀಚರ್ಸ್‌ ಆಯ್ಕೆ ಇರುವ ಫೋನ್‌ ಅನ್ನು ನೀವು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದಾದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
Infinix has announced a pre-benefit offer for buyers in India on the Infinix Note 40 Pro 5G. customers can get a free power bank worth Rs. 4000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+