Infinix: ಇನ್ಫಿನಿಕ್ಸ್‌ನಿಂದ ಬರಲಿದೆ ಭರ್ಜರಿ ಫೋನ್! 100W ವೈರ್ಡ್ ಚಾರ್ಜಿಂಗ್
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix Smartphones) ವಿಶೇಷ ಸ್ಥಾನ ಮಾನ ಪಡೆದುಕೊಂಡಿವೆ. ಅಂದರೆ ಈ ಫೋನ್‌ಗಳಿಗೆ ಭಾರೀ ಜನಪ್ರಿಯತೆ ಇದ್ದು, ಕಡಿಮೆ ದರದಲ್ಲಿ ಉತ್ತಮ ಫೀಚರ್ಸ್ ಆಯ್ಕೆ ನೀಡುತ್ತಿವೆ. ಈ ಬೆಳವಣಿಗೆ ನಡುವೆ ಇನ್ಫಿನಿಕ್ಸ್ ಕೆಲವೇ ದಿನಗಳಲ್ಲಿ ಹೊಸ ಫೋನ್ ಅನ್ನು ಘೋಷಣೆ ಮಾಡಲಿದೆ ಎನ್ನಲಾಗಿದೆ. ಈ ಫೋನ್ 100W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ ಎಂದು ತಿಳಿದುಬಂದಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಕಂಪೆನಿಗಳು ಇಂದು ತೀವ್ರ ಪೈಪೋಟಿಗೆ ಬಿದ್ದು, ಹೊಸ ಹೊಸ ಆಕರ್ಷಕ ಫೀಚರ್ಸ್‌ಗಳು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುತ್ತಿವೆ. ಅದರ ಭಾಗವಾಗಿಯೇ ಈಗ ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್ (Infinix Note 40 Pro+ Smartphone) ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಕಾಣಿಸಿಕೊಳ್ಳಲಿದೆ. ಈ ಫೋನ್ ಮ್ಯಾಗ್‌ಚಾರ್ಜ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನೂ ಪಡೆದಿರಲಿದೆ ಎನ್ನಲಾಗಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಕೆಲವು ಲೀಕ್ ಮಾಹಿತಿಯನ್ನು ತಿಳಿಯೋಣ.

ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್: ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್‌ನ ಬಾಕ್ಸ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಲ್ಲಿ ಕಂಡುಬಂದಂತೆ ಈ ಫೋನ್ 100W ವೈರ್ಡ್ ಚಾರ್ಜಿಂಗ್‌ನೊಂದಿಗೆ ಬರಬಹುದು ಎಂದು ತಿಳಿದುಬಂದಿದೆ. ಹಾಗೆಯೇ ಈ ನೋಟ್ 40 ಸರಣಿಯಲ್ಲಿ ನೋಟ್ 40, ನೋಟ್ 40 ಪ್ರೊ, ನೋಟ್ 40 ಪ್ರೊ 5G ಮತ್ತು ನೋಟ್ 40 ಪ್ರೊ+ 5G (Note 40, Note 40 Pro, Note 40 Pro 5G and Note 40 Pro+ 5G) ನಂತಹ ವೇರಿಯಂಟ್‌ಗಳನ್ನು ಕಾಣಬಹುದಾಗಿದೆ. ಪ್ರಮುಖವಾಗಿ ನೋಟ್ 40 ಪ್ರೊ+ 5G ಹೆಚ್ಚು ಸೌಂಡ್ ಮಾಡಲಿದೆ.
ಗಿಜ್ಮೊಚೀನಾ ಇದೀಗ ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್‌ನ ಲೀಕ್ ಆದ ಫೋಟೋಗಳನ್ನ ಶೇರ್ ಮಾಡಿದೆ. ನೋಟ್ 40 ಸರಣಿಯು ಆಲ್-ರೌಂಡ್ ಫಾಸ್ಟ್ ಚಾರ್ಜ್ ತಂತ್ರಜ್ಞಾನ 2.0 ನೊಂದಿಗೆ ವರ್ಧಿತ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಈ ಸ್ಮಾರ್ಟ್‌ಫೋನ್ ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಎರಡರಲ್ಲೂ ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.

ಈ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಮ್ಯಾಗ್‌ಚಾರ್ಜ್ ತಂತ್ರಜ್ಞಾನದ ಚಾರ್ಜಿಂಗ್ ಬಳಕೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದುಬಂದಿದೆ. ಅಂದರೆ ಹೆಚ್ಚು ಪರಿಣಾಮಕಾರಿ ವಿದ್ಯುತ್ ವರ್ಗಾವಣೆಗಾಗಿ ಮಾಡುವ ಉದ್ದೇಶದಿಂದ ಉತ್ತಮ ಜೋಡಣೆಗಾಗಿ ಮ್ಯಾಗ್ನೆಟ್‌ಗಳನ್ನು ಬಳಕೆ ಮಾಡುವ ವೈರ್‌ಲೆಸ್ ಚಾರ್ಜಿಂಗ್ ಆಗಿದೆ. ಅದಾಗ್ಯೂ ನಿಖರ ವೈರ್‌ಲೆಸ್ ಚಾರ್ಜಿಂಗ್ ವಿವರಗಳು ತಿಳಿದುಬಂದಿಲ್ಲ.
ಉಳಿದಂತೆ ಈ ಸ್ಮಾರ್ಟ್‌ಫೋನ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹಾಗೂ ಎನ್‌ಎಫ್‌ಸಿ ಸಂಪರ್ಕವನ್ನು ಹೊಂದಿರಬಹುದು ಎಂದು ಲೀಕ್ ಆದ ಚಿತ್ರದ ಮಾಹಿತಿ ಮೂಲಕ ಊಹಿಸಬಹುದಾಗಿದೆ. ಇದರ ಜೊತೆಗೆ ಈ ಹಿಂದೆ ಇನ್ಫಿನಿಕ್ಸ್ ನೋಟ್ 40 ಮತ್ತು ಇನ್ಫಿನಿಕ್ಸ್ ನೋಟ್ 40 ಪ್ರೊ ಸ್ಮಾರ್ಟ್‌ಫೋನ್ ಬಗ್ಗೆಯೂ ಕೆಲವು ಮಾಹಿತಿ ಲೀಕ್ ಆಗಿವೆ.
ಈ ಎರಡೂ ಸ್ಮಾರ್ಟ್‌ಫೋನ್‌ಗಳು ಗೂಗಲ್ ಪ್ಲೇ ಕನ್ಸೋಲ್ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದ್ದು, ಮೀಡಿಯಾಟೆಕ್ ಹಿಲಿಯೋ G99 SoC, ARM ಮಾಲಿ G57 ಜಿಪಿಯು ಬಲದೊಂದಿಗೆ ಈ ಫೋನ್‌ಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಕನಿಷ್ಠ 8GB RAM ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ಗಳು 480 PPI ಪಿಕ್ಸೆಲ್ ಸಾಂದ್ರತೆಯೊಂದಿಗೆ 2436×1080p ನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದ್ದು. ಆಂಡ್ರಾಯ್ಡ್ 14 ಆಧಾರಿತ ಓಎಸ್ ಅನ್ನು ರನ್ ಮಾಡಲಿದೆ ಎಂದು ಕೆಲವು ವರದಿಗಳು ಉಲ್ಲೇಖ ಮಾಡಿವೆ. ಹಾಗೆಯೇ ಈ ಎರಡೂ ಸ್ಮಾರ್ಟ್‌ಫೋನ್‌ಗಳು 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರುತ್ತವೆ ಎನ್ನಲಾಗಿದ್ದು, ನೋಟ್ 40 45W ವೇಗದ ಚಾರ್ಜಿಂಗ್ ಮತ್ತು ನೋಟ್ 40 ಪ್ರೊ 70W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








