Home
ಸುದ್ದಿಜಾಲ

ಆಗಸ್ಟ್ 26 ರಂದು ಇನ್ಫಿನಿಕ್ಸ್‌ ನೋಟ್‌ 40 5G ರೇಸಿಂಗ್ ಎಡಿಷನ್‌ ಖರೀದಿಗೆ ಲಭ್ಯ!

ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್‌ (Infinix) ಕಂಪೆನಿ ಬಜೆಟ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿಗೆ ಸಂಸ್ಥೆಯು ಇನ್ಫಿನಿಕ್ಸ್‌ ನೋಟ್‌ 40 5G ಸರಣಿಯ ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಅದರ ಮುಂದುವರಿದ ಭಾಗವಾಗಿ ಇದೀಗ ಇನ್ಫಿನಿಕ್ಸ್‌ ನೋಟ್‌ 40 5G ಸೀರಿಸ ರೇಸಿಂಗ್ ಎಡಿಷನ್‌ (Infinix Note 40 5G Series Racing Edition) ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಐಕಾನಿಕ್ F1 ರೇಸಿಂಗ್ ಲೋಗೋವನ್ನು ಪ್ರತಿಧ್ವನಿಸುವ ವಿನ್ಯಾಸವನ್ನು ಹೊಂದಿದ್ದು, ಡಿಸೈನ್ ವರ್ಕ್ಸ್ BMW M ಪವರ್‌ನಿಂದ ಪ್ರೇರಿತವಾಗಿದೆ.

ಹೌದು, ಇನ್ಫಿನಿಕ್ಸ್‌ ನೋಟ್‌ 40 5G ರೇಸಿಂಗ್ ಎಡಿಷನ್‌ ಸರಣಿಯು ಇನ್ಫಿನಿಕ್ಸ್‌ ನೋಟ್‌ 40 ಪ್ರೊ (Infinix Note 40 Pro Racing Edition) ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ (Infinix Note 40 Pro+ Racing Edition) ಮೊಬೈಲ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಸರಣಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಹಾಗಾದರೇ ಈ ಎರಡು ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಗಸ್ಟ್ 26 ರಂದು ಇನ್ಫಿನಿಕ್ಸ್‌ ನೋಟ್‌ 40 5G ರೇಸಿಂಗ್ ಎಡಿಷನ್‌ ಖರೀದಿಗೆ ಲಭ್ಯ!

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ರೇಸಿಂಗ್ ಎಡಿಷನ್‌ - ಫೀಚರ್ಸ್‌ ಹೀಗಿವೆ

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ರೇಸಿಂಗ್ ಎಡಿಷನ್‌ ಎರಡೂ ಆವೃತ್ತಿ ಫೋನ್‌ಗಳು 6.78 ಇಂಚಿನ ಪೂರ್ಣ ಹೆಚ್‌ಡಿ+ (1,080 x 2,436 ಪಿಕ್ಸೆಲ್‌ಗಳು) ಕರ್ವ್ಡ್‌ LTPS AMOLED ಸ್ಕ್ರೀನ್‌ ಅನ್ನು ಪಡೆದಿವೆ. ಹಾಗೆಯೇ ಇವು 120Hz ರಿಫ್ರೆಶ್ ರೇಟ್‌ ಸೌಲಭ್ಯ ಹಾಗೂ 1,300 nits ಗರಿಷ್ಠ ಬ್ರೈಟ್ನೆಸ್‌ ಸಹ ಪಡೆದಿವೆ.

ಇನ್ನು ರೇಸಿಂಗ್ ಎಡಿಷನ್‌ ಈ ಎರಡು ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ಇದರ ಜೊತೆಗೆ 12GB RAM ಮತ್ತು 256GB ಸ್ಟೋರೇಜ್‌ ಸೌಲಭ್ಯ ಪಡೆದಿದೆ ಸಂಗ್ರಹಣೆಯೊಂದಿಗೆ ಸಜ್ಜುಗೊಳಿಸಿದೆ. ಈ ಮಾದರಿಗಳು ಅದೇ VC ಕೂಲಿಂಗ್ ಟೆಕ್ನಾಲಜಿ 2.0 ಅನ್ನು 11 ಪದರಗಳ ಶಾಖದ ಪ್ರಸರಣ ವಸ್ತುಗಳೊಂದಿಗೆ ಹೊಂದಿವೆ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ರೇಸಿಂಗ್ ಎಡಿಷನ್‌ ಸರಣಿಯ ಈ ಎರಡು ಫೋನ್‌ಗಳ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇದರ ಜೊತೆಗೆ ಎರಡು ಅನಿರ್ದಿಷ್ಟ -ಮೆಗಾಪಿಕ್ಸೆಲ್ ಸೆನ್ಸಾರ್‌ ಇವೆ. ಹಾಗೆಯೇ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಕ್ಯಾಮೆರಾ ಒದಗಿಸಲಾಗಿದೆ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ ರೇಸಿಂಗ್ ಎಡಿಷನ್‌ - ಬೆಲೆ ಮಾಹಿತಿ
ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 40 ಪ್ರೊ ರೇಸಿಂಗ್ ಆವೃತ್ತಿಯ ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಫೋನ್‌ 8GB + 256GB RAM ಒಂದೇ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರ ಬೆಲೆಯು 15,999 ರೂ. ಗಳು ಆಗಿದೆ. ಇನ್ಫಿನಿಕ್ಸ್‌ ನೋಟ್‌ 40 ಪ್ರೊ ಫೋನಿನ 12GB + 256 GB ವೇರಿಯಂಟ್‌ ಬೆಲೆಯು 18,999ರೂ. ಗಳ ದರದಲ್ಲಿ ಲಭ್ಯ ಇದೆ.

ಅಂದಹಾಗೆ ಇನ್ಫಿನಿಕ್ಸ್‌ ನೋಟ್‌ 40 ಪ್ರೊ ವೇರಿಯಂಟ್‌ ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ ವೇರಿಯಂಟ್‌ ಇದೇ ಆಗಸ್ಟ್ 26 ರಂದು ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯ ಆಗಲಿವೆ. ಬ್ಯಾಂಕ್‌ ಆಫರ್‌ ಬಗ್ಗೆ ಮಾಹಿತಿ ಅಲಭ್ಯ.

Best Mobiles in India

English summary
Infinix Note 40 Series Racing Edition sale set for August 26. check price, offer and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+