Home
ಸುದ್ದಿಜಾಲ

ಇಂದು Infinix Note 40X 5G ಫಸ್ಟ್‌ ಸೇಲ್‌!..ಖುಷಿ ಎನಿಸುವ ಆಫರ್‌ ಲಭ್ಯ!

ಬಜೆಟ್‌ ಪ್ರೈಸ್‌ಟ್ಯಾಗ್‌ ರೇಂಜ್‌ನಲ್ಲಿ ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒಂದಾದ ಇನ್ಫಿನಿಕ್ಸ್‌ (Infinix) ಸಂಸ್ಥೆಯ ಹೊಸ ಇನ್ಫಿನಿಕ್ಸ್‌ ನೋಟ್‌ 40X 5G (Infinix Note 40X 5G) ಮೊಬೈಲ್‌ ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರಿಗೆ ಮೋಡಿ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಇಂದು (ಆಗಷ್ಟ್‌ 9 ರಂದು) ಜನಪ್ರಿಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ ಮೂಲಕ ಮಧ್ಯಾಹ್ನ 12 ಗಂಟೆಗೆ ಫಸ್ಟ್‌ ಸೇಲ್‌ ಶುರುವಾಗಲಿದೆ. ಈ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ರಚನೆ ಅನ್ನು ಹೊಂದಿದೆ.

ಹೌದು, ಇನ್ಫಿನಿಕ್ಸ್‌ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ ಇನ್ಫಿನಿಕ್ಸ್‌ ನೋಟ್‌ 40X 5G ಫೋನಿನ ಸೇಲ್‌ ಇಂದು (ಆಗಷ್ಟ್‌ 9 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಶುರು ಆಗಲಿದೆ. ಈ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಒಳಗೊಂಡಿದೆ. ಇದಲ್ಲದೇ 8 GB RAM ಮತ್ತು 256 GB ವೇರಿಯಂಟ್‌ ಆಯ್ಕೆ ಪಡೆದಿದ್ದು, 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಪಡೆದಿದೆ.

ಇಂದು Infinix Note 40X 5G ಫಸ್ಟ್‌ ಸೇಲ್‌!..ಖುಷಿ ಎನಿಸುವ ಆಫರ್‌ ಲಭ್ಯ!

ಅಂದಹಾಗೆ ಈ ಫೋನಿನ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಇನ್ನು ಇದರ ಆರಂಭಿಕ ವೇರಿಯಂಟ್‌ ಬೆಲೆಯು 14,999ರೂ. ಗಳು ಆಗಿದೆ. ಇನ್ನುಳಿದಂತೆ ಇನ್ಫಿನಿಕ್ಸ್‌ ನೋಟ್‌ 40X 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ನೋಟ್‌ 40X 5G - ಫೀಚರ್ಸ್‌

ಇನ್ಫಿನಿಕ್ಸ್‌ ನೋಟ್‌ 40X 5G ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2436×1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಒಳಗೊಂಡಿದೆ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದಿದೆ. ಹಾಗೆಯೇ ಇದು 1300nits ಗರಿಷ್ಠ ಬ್ರೈಟ್‌ನೆಸ್ ಸೌಲಭ್ಯ ಸಹ ಪಡೆದಿದೆ.

ಇನ್ಫಿನಿಕ್ಸ್‌ ನೋಟ್‌ 40X 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ XOS 14 ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಹಾಗೆಯೇ 8 GB/12 GB RAM + 256 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ ನೋಟ್‌ 40X 5G ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸಲ್‌ ಮೈಕ್ರೋ ಹಾಗೂ 2 ಮೆಗಾ ಪಿಕ್ಸಲ್‌ ಡೆಪ್ತ್ ಕ್ಯಾಮೆರಾ ಸೆನ್ಸಾರ್ ಹೊಂದಿವೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಇನ್ಫಿನಿಕ್ಸ್‌ ನೋಟ್‌ 40X 5G ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಹೊಂದಿದ್ದು, ಇದಕ್ಕೆ ಪೂರಕವಾಗಿ 18 W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್, ಜೆಬಿಎಲ್‌ ಸ್ಟಿರಿಯೊ ಸ್ಪೀಕರ್ ಸೆಟ್‌ಅಪ್‌ ಸೌಲಭ್ಯಗಳನ್ನು ಕಾಣಬಹುದಾಗಿದೆ. ಅಲ್ಲದೇ ಇದು 5G, 4G, Wi-Fi, ಬ್ಲೂಟೂತ್, GPS, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್ C ಪೋರ್ಟ್ ಇವೆ. ಈ ಫೋನ್‌ IP53 ಧೂಳು ಹಾಗೂ ನೀರು ನಿರೋಧಕವಾಗಿದೆ.

Best Mobiles in India

English summary
Infinix Note 40X 5G First Sale Today via Flipkart. Check Offer, Price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+