ನಾಳೆ 108ಎಂಪಿ ಕ್ಯಾಮೆರಾ ಇರುವ ಈ ಫೋನ್ ಖರೀದಿಗೆ ಲಭ್ಯ; ಬೆಲೆಯೂ ಅಗ್ಗ!
ಅಗ್ಗದ ಬೆಲೆಯ ವಿಭಾಗದಲ್ಲಿ ಮೊಬೈಲ್ ಪ್ರಿಯರ ಗಮನ ಸೆಳೆದ ಬ್ರ್ಯಾಂಡ್‌ಗಳಲ್ಲಿ ಒಂದಾದ ಇನ್ಫಿನಿಕ್ಸ್ (Infinix) ಸಂಸ್ಥೆಯ ಇತ್ತೀಚಿನ ಇನ್ಫಿನಿಕ್ಸ್ ನೋಟ್ 40X 5G (Infinix Note 40X 5G) ಸ್ಮಾರ್ಟ್‌ಫೋನ್ ಈಗಾಗಲೇ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್ ಇಂದು (ಆಗಷ್ಟ್ 9 ರಂದು) ಅಧಿಕೃತ ಫ್ಲಿಪ್‌ಕಾರ್ಟ್ ಆನ್‌ಲೈನ್ ವೆಬ್‌ಸೈಟ್ ಮೂಲಕ ಮಧ್ಯಾಹ್ನ 12 ಗಂಟೆಗೆ ಫಸ್ಟ್ ಸೇಲ್ ಪ್ರಾರಂಭಿಸಲಿದೆ. ಅಂದಹಾಗೆ ಇದು ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.
ಹೌದು, ಇನ್ಫಿನಿಕ್ಸ್ ಸಂಸ್ಥೆಯ ಇತ್ತೀಚಿನ ಇನ್ಫಿನಿಕ್ಸ್ ನೋಟ್ 40X 5G ಫೋನಿನ ಮಾರಾಟ ನಾಳೆ (ಆ. 9 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭ ಆಗಲಿದೆ. ಈ ಫೋನ್ 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದ್ದು, ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದುಕೊಂಡಿದೆ.

ಇನ್ಫಿನಿಕ್ಸ್ ನೋಟ್ 40X 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದು ಬ್ಲೂ, ಗ್ರೀನ್ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಇನ್ಫಿನಿಕ್ಸ್ ನೋಟ್ 40X 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ ನೋಟ್ 40X 5G - ಫೀಚರ್ಸ್
ಇನ್ಫಿನಿಕ್ಸ್ ನೋಟ್ 40X 5G ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 2436×1080 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಒಳಗೊಂಡಿದೆ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದಿದೆ. 1300nits ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿದೆ.
ಇನ್ಫಿನಿಕ್ಸ್ ನೋಟ್ 40X 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ XOS 14 ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಹಾಗೆಯೇ 8 GB/12 GB RAM + 256 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.
ಇನ್ಫಿನಿಕ್ಸ್ ನೋಟ್ 40X 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸಲ್ ಮೈಕ್ರೋ ಹಾಗೂ 2 ಮೆಗಾ ಪಿಕ್ಸಲ್ ಡೆಪ್ತ್ ಕ್ಯಾಮೆರಾ ಸೆನ್ಸಾರ್ ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ಇನ್ಫಿನಿಕ್ಸ್ ನೋಟ್ 40X 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದೊಂದಿಗೆ 18 W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್, ಜೆಬಿಎಲ್ ಸ್ಟಿರಿಯೊ ಸ್ಪೀಕರ್ ಸೆಟ್‌ಅಪ್ ಸೌಲಭ್ಯಗಳನ್ನು ಕಾಣಬಹುದಾಗಿದೆ. ಅಲ್ಲದೇ ಇದು 5G, 4G, Wi-Fi, ಬ್ಲೂಟೂತ್, GPS, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್ C ಪೋರ್ಟ್ ಇವೆ. ಈ ಫೋನ್ IP53 ಧೂಳು ಹಾಗೂ ನೀರು ನಿರೋಧಕವಾಗಿದೆ.


Click it and Unblock the Notifications