ಫ್ಲಿಪ್‌ಕಾರ್ಟ್‌ನಲ್ಲಿಂದು 'ಇನ್‌ಫಿನಿಕ್ಸ್ s5 ಪ್ರೊ' ಫೋನ್ ಫ್ಲ್ಯಾಶ್ ಸೇಲ್!.ಬೆಲೆ 9,999ರೂ!
ಇನ್‌ಫಿನಿಕ್ಸ್ ಸಂಸ್ಥೆಯು ದೇಶದಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಅಗ್ಗದ ಬೆಲೆಯ ಇನ್‌ಫಿನಿಕ್ಸ್ s5 ಪ್ರೊ ಸ್ಮಾರ್ಟ್‌ಫೋನ್ ಇಂದು ಎರಡನೇ ಸೇಲ್ ಆರಂಭಿಸಲಿದೆ. ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಮಾರಾಟ ಶುರುವಾಗಲಿದ್ದು, ಆರಂಭಿಕ ಬೆಲೆಯು 9,999ರೂ.ಗಳಾಗಿದೆ. ಆಂಡ್ರಾಯ್ಡ್ 10 ಓಎಸ್ ಹಾಗೂ 48ಎಂಪಿ ಕ್ಯಾಮೆರಾ ಮೇನ್ ಹೈಲೈಟ್ಸ್‌ಗಳಾಗಿವೆ.

ಇನ್‌ಫಿನಿಕ್ಸ್ s5 ಪ್ರೊ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ, ಮತ್ತು 4,000 mAh ಬ್ಯಾಟರಿಗಳಂತಹ ಇತ್ತೀಚಿನ ಫೀಚರ್ಸ್‌ಗಳಿಂದ ಗಮನ ಸೆಳೆದಿದ್ದು, ವೈಲೇಟ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. 4GB RAM ಮತ್ತು 64GB ವೇರಿಯಂಟ್ ಬೆಲೆ 9,999ರೂ.ಆಗಿದೆ. ಆರಂಭಿಕ ಕೊಡುಗೆಯಾಗಿ ಫ್ಲಿಪ್‌ಕಾರ್ಟ್ ನೋ ಕಾಸ್ಟ್ ಇಎಮ್‌ಐ ಸೌಲಭ್ಯವು ಲಭ್ಯ ನೀಡಿದೆ. ಇನ್‌ಫಿನಿಕ್ಸ್ s5 ಪ್ರೊ ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ಇನ್‌ಫಿನಿಕ್ಸ್ s5 ಪ್ರೊ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 19.5:9 ರಷ್ಟಾಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 395ppi ಆಗಿದೆ.

ಪ್ರೊಸೆಸರ್ ಕಾರ್ಯ
ಇನ್‌ಫಿನಿಕ್ಸ್ s5 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಇನ್ನು ಈ ಫೋನ್ 4GB RAM + 64GB ಆಂತರಿಕ ಸ್ಟೋರೋಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಶೇಷ
ಇನ್‌ಫಿನಿಕ್ಸ್ s5ಪ್ರೊ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್ ನಲ್ಲಿದೆ. ಹಾಗೂ ತೃತೀಯ ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್ ಪಡೆದಿದೆ. ಜೊತೆಗೆ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್ ಸೌಲಭ್ಯಗಳು ಇವೆ.

ಬ್ಯಾಟರಿ ಲೈಫ್
ಇನ್‌ಫಿನಿಕ್ಸ್ 5s ಪ್ರೊ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಇದರೊಂದಿಗೆ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಹಾಗೂ ವೈಫೈ, ಬ್ಲೂಟೂತ್, ಜಿಪಿಎಸ್, ನಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಇನ್‌ಫಿನಿಕ್ಸ್ s5 ಪ್ರೊ ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಬೆಲೆಯು 9,999ರೂ. ಆಗಿದೆ. ಈ ಫೋನ್ ಇಂದು ಮಧ್ಯಾಹ್ನ 12ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭಿಸಲಿದೆ. ವೈಲೇಟ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ.


Click it and Unblock the Notifications








