Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಅಗ್ಗದ ಬೆಲೆಗೆ ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಫೋನ್‌ ಲಭ್ಯ!

ಹಾಂಗ್‌ ಕಾಂಗ್ ಮೂಲದ ಇನ್‌ಫಿನಿಕ್ಸ್‌ ಸಂಸ್ಥೆಯು ಇತ್ತೀಗಷ್ಟೆ ಹೊಸದಾಗಿ 'ಇನ್‌ಫಿನಿಕ್ಸ್‌ ಸ್ಮಾರ್ಟ್ 4' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಅಗ್ಗದ ಬೆಲೆಗೆ ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಫೋನ ಲಭ್ಯವಾಗಲಿದೆ. ಇನ್ನು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಈ ಫೋನ್ ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್‌ಫಿನಿಕ್ಸ್‌ ಸ್ಮಾರ್ಟ್ 4

ಹೌದು, ಇನ್‌ಫಿನಿಕ್ಸ್‌ ಸಂಸ್ಥೆಯ 'ಇನ್‌ಫಿನಿಕ್ಸ್‌ ಸ್ಮಾರ್ಟ್ 4' ಸ್ಮಾರ್ಟ್‌ಫೋನ್‌ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಸೇಲ್‌ ಆಗ್ತಿದೆ. ಇದರ ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸಲ್ ಸೆನ್ಸಾರ್‌ ಪಡೆದಿದ್ದು, 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 6,999 ರೂ.ಗಳಾಗಿದ್ದು, ಬ್ಲ್ಯಾಕ್, ಓಶಿಯನ್ ವೇವ್ ಹಾಗೂ ವೈಲೆಟ್‌ ಬಣ್ಣಗಳ ಆಯ್ಕೆ ಪಡೆದಿದೆ. ಹಾಗಾದರೇ ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಸ್ಮಾರ್ಟ್‌ಫೋನ್‌ 1,640x720 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.82 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:5:9 ಆಗಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅನುಪಾತವು ಶೇ.90.5ರಷ್ಟು ಆಗಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ A22 SoC, ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಪಡೆದಿದೆ. ಹಾಗೆಯೇ 2GB RAM + 32GB ಆಂತರಿಕ ಸ್ಥಳಾವಕಾಶ ವೇರಿಯಂಟ್ ಆಯ್ಕೆ ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 256GB ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸಲ್ ಸೆನ್ಸಾರ್‌ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿಗಾಗಿ 8ಎಂಪಿ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದ್ದು, AI 3D ಬ್ಯೂಟಿ, ಪನೋರಮಾ, ವೈಲ್ಡ್‌ ಸೆಲ್ಫಿ, ಎಲ್‌ಇಡಿ ಸೇರಿದಂತೆ ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ.

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. 10W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರೊಂದಿಗೆ ರಿಯರ್‌ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಆಂಬಿಯಂಟ್ ಲೈಟ್‌ ಸೆನ್ಸಾರ್‌, ಇ-ಕಾಂಪಾಸ್‌ ನಂತಹ ಸೌಲಭ್ಯಗಳನ್ನು ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್‌ಫಿನಿಕ್ಸ್‌ ಸ್ಮಾರ್ಟ್ 4 ಸ್ಮಾರ್ಟ್‌ಫೋನ್‌ 2GB RAM + 32GB ವೇರಿಯಂಟ್ ಆಯ್ಕೆ ಪಡೆದಿದೆ. ಈ ಫೋನ್ ಬೆಲೆಯು 6,999ರೂ.ಗಳು ಆಗಿದೆ. ಇನ್ನು ಈ ಫೋನ್ ಬ್ಲ್ಯಾಕ್, ಓಶಿಯನ್ ವೇವ್ ಹಾಗೂ ವೈಲೆಟ್‌ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Infinix Smart 4 is on sale priced in India at Rs. 6,999 for the sole 2GB + 32GB storage model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+