ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮತ್ತೆ ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸೇಲ್!
ಇನ್‌ಫಿನಿಕ್ಸ್ ಮೊಬೈಲ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆ.8) ಮಧ್ಯಾಹ್ನ 12ರಂದು ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ತಾಣದಲ್ಲಿ ಸೇಲ್ ನಡೆಯಲಿದೆ. ಮೀಡಿಯಾ ಟೆಕ್ ಹಿಲಿಯೊ A25 SoC, ಪ್ರೊಸೆಸರ್ ಮತ್ತು 6,000mAh ಬ್ಯಾಟರಿ ಬ್ಯಾಕ್‌ಅಪ್ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಹೌದು, ಇನ್‌ಫಿನಿಕ್ಸ್ ಸಂಸ್ಥೆಯ ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸ್ಮಾರ್ಟ್‌ಫೋನಿನ ಮಾರಾಟ ಫ್ಲಿಪ್‌ಕಾರ್ಟ್ ಇಂದು ನಡೆಯಲಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನಿನ 3GB RAM + 32GB ವೇರಿಯಂಟ್ ಬೆಲೆಯು 7,500ರೂ.ಗಳು ಆಗಿದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸ್ಮಾರ್ಟ್‌ಫೋನ್ 720x1,640 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.82 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:5:9 ಆಗಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅನುಪಾತವು ಶೇ.90.5ರಷ್ಟು ಆಗಿದೆ.

ಪ್ರೊಸೆಸರ್ ಬಲ
ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ A25 SoC, ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಪಡೆದಿದೆ. ಹಾಗೆಯೇ 3GB RAM + 32GB ಆಂತರಿಕ ಸ್ಥಳಾವಕಾಶ ವೇರಿಯಂಟ್ ಆಯ್ಕೆ ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯವಾಗಿ 256GB ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಡ್ಯುಯಲ್ ಕ್ಯಾಮೆರಾ
ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾವು 13 ಮೆಗಾಪಿಕ್ಸಲ್ ಸೆನ್ಸಾರ್ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿಗಾಗಿ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, AI 3D ಬ್ಯೂಟಿ, ಪನೋರಮಾ, ಎಚ್‌ಆರ್‌ಡಿ ಸೇರಿದಂತೆ ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ.

ಬ್ಯಾಟರಿ ಬಾಳಿಕೆ
ಇನ್‌ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಗೇಮಿಂಗ್‌ಗೆ ಸುಮಾರು 15 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ನೀಡಲಿದೆ. ಇದರೊಂದಿಗೆ ರಿಯರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಆಂಬಿಯಂಟ್ ಲೈಟ್ ಸೆನ್ಸಾರ್, ಇ-ಕಾಂಪಾಸ್ ನಂತಹ ಸೌಲಭ್ಯಗಳನ್ನು ಸಹ ಪಡೆದಿದೆ.


Click it and Unblock the Notifications








