ಇಂದು ಅಗ್ಗದ ಬೆಲೆಯ ಇನ್ಫಿನಿಕ್ಸ್ ಸ್ಮಾರ್ಟ್ 6 ಫೋನ್ ಫಸ್ಟ್ ಸೇಲ್!
ಇನ್ಫಿನಿಕ್ಸ್ ಮೊಬೈಲ್ ಕಂಪನಿಯ ಭಾರತದಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಮೇ 6) ಮಧ್ಯಾಹ್ನ 12 ರಿಂದ ಇ ಕಾಮರ್ಸ್ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಫಸ್ಟ್ ಸೇಲ್ ಪ್ರಾರಂಭವಾಗಲಿದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನಿನ ಬೆಲೆ 7,499ರೂ.ಗಳು ಆಗಿದ್ದು, ಕೆಲವು ಆಕರ್ಷಕ ಕೊಡುಗೆ ಲಭ್ಯವಾಗಲಿವೆ.

ಹೌದು, ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್ ಫಸ್ಟ್ ಸೇಲ್ ಇಂದು ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ. ಈ ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಪಡೆದಿದ್ದು, ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 2 GB RAM ಮತ್ತು 32 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇನ್ನುಳಿದಂತೆ ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ HD + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 266 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್ ಮತ್ತು 89% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.
ಪ್ರೊಸೆಸರ್ ಯಾವುದು?
ಇದು ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 (Go ಆವೃತ್ತಿ) ಆಧಾರಿತ XOS 7.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 2 GB RAM + 32 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 2GB ವರ್ಚುವಲ್ RAM ಅನ್ನು ಕೂಡ ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ
ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್ ಡ್ಯುಯಲ್ AI ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಡಬಲ್ LED ಫ್ಲ್ಯಾಷ್‌ನೊಂದಿಗೆ ಒಳಗೊಂಡಿದೆ. ಇನ್ನು ರಿಯರ್ ಕ್ಯಾಮೆರಾ AI HDR, ಬ್ಯೂಟಿ ಮತ್ತು ಪೋರ್ಟ್ರೇಟ್ ನಂತಹ ವಿಭಿನ್ನ ಮೋಡ್‌ಗಳನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ ಮತ್ತು ಇತರೆ
ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಟಾಕ್ ಟೈಮ್ ಜೊತೆಗೆ 31 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು 678 ಗಂಟೆಗಳ ಸ್ಟ್ಯಾಂಡ್‌ಬೈ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್ v5.0 ಅನ್ನು ಬೆಂಬಲಿಸುತ್ತದೆ. ಇದಲ್ಲದೆ DTS-HD ಸರೌಂಡ್ ಸೌಂಡ್ ಮತ್ತು ವರ್ಧಿತ ಆಡಿಯೊ ಅನುಭವಕ್ಕಾಗಿ ಬೀಜ್ 2.0 ಅನ್ನು ಸಹ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್ 7,499ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೇ 6 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಹಾರ್ಟ್ ಆಫ್ ಓಷನ್, ಲೈಟ್ ಸೀ ಗ್ರೀನ್, ಪೋಲಾರ್ ಬ್ಲಾಕ್ ಮತ್ತು ಸ್ಟಾರಿ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications