Home
ಸುದ್ದಿಜಾಲ

ಇಂದು ಇನ್ಫಿನಿಕ್ಸ್ ಸ್ಮಾರ್ಟ್ 6 HD ಫೋನ್‌ ಸೇಲ್‌!..ಬೆಲೆ 6,799ರೂ.!

ಇನ್ಫಿನಿಕ್ಸ್ ಮೊಬೈಲ್‌ ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್‌ ಸ್ಮಾರ್ಟ್‌ 6 ಪ್ಲಸ್ ಸ್ಮಾರ್ಟ್‌ಫೋನ್‌ ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್‌ ಇಂದು (ಆಗಷ್ಟ್‌ 12 ರಂದು) ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮೂಲಕ ಶುರು ಮಾಡಲಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು ಜಸ್ಟ್ ಜಸ್ಟ್‌ 6,799 ರೂ.ಗಳು ಆಗಿದೆ.

ಹೆಲಿಯೊ

ಹೌದು, ಇನ್ಫಿನಿಕ್ಸ್‌ ಸಂಸ್ಥೆಯ ನೂತನ ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನ್‌ ಮೊದಲ ಮಾರಾಟ ಇಂದು ಶುರುವಾಗಲಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹೆಲಿಯೊ A22 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 11 (Go ಆವೃತ್ತಿ) ಸಪೋರ್ಟ್‌ ಹೊಂದಿದೆ. ಹಾಗೆಯೇ ಈ ಫೋನ್ ಸಿಂಗಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇನ್ನುಳಿದಂತೆ ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್ ಮತ್ತು 60Hz ರಿಫ್ರೇಶ್ ರೇಟ್ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಪ್ರೊಸೆಸರ್‌ ಪವರ್ ಯಾವುದು?

ಪ್ರೊಸೆಸರ್‌ ಪವರ್ ಯಾವುದು?

ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 (Go ಆವೃತ್ತಿ) ಆಧಾರಿತ XOS 7.6 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 2 GB RAM + 32 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್ ರಚನೆ

ಕ್ಯಾಮೆರಾ ಸೆನ್ಸಾರ್ ರಚನೆ

ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನ್‌ ಚೌಕಾಕಾರದ ರಚನೆಯನ್ನು ಹೊಂದಿದ್ದು, ನೋಡಲು ತ್ರಿಪಲ್ ಕ್ಯಾಮೆರಾ ರಚನೆಯ ತರಹ ಕಾಣಿಸುತ್ತದೆ. ಆದರೆ ಈ ಫೋನ್ LED ಫ್ಲ್ಯಾಷ್‌ನೊಂದಿಗೆ ಸಿಂಗಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇದಲ್ಲದೆ ವಾಟರ್‌ಡ್ರಾಪ್‌ ನಾಚ್ ಮಾದರಿಯ 5 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 5W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌ v5.0 ಅನ್ನು ಬೆಂಬಲಿಸುತ್ತದೆ. ಇದಲ್ಲದೆ DTS HD ಸರೌಂಡ್ ಸೌಂಡ್ ಮತ್ತು ವರ್ಧಿತ ಆಡಿಯೊ ಅನುಭವಕ್ಕಾಗಿ ಬೀಜ್ 2.0 ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್ ಸ್ಮಾರ್ಟ್ 6 HD ಸ್ಮಾರ್ಟ್‌ಫೋನ್‌ ಒಂದೇ ಶೇಖರಣಾ ಆಯ್ಕೆಯೊಂದಿಗೆ ಭಾರತಕ್ಕೆ ಬರುತ್ತದೆ. ಈ ಫೋನ್ 2 GB RAM ಮತ್ತು 32 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದರ ಬೆಲೆ 6,799 ರೂ. ಆಗಿದೆ. ಈ ಫೋನ್ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ ಆಕ್ವಾ ಸ್ಕೈ, ಫೋರ್ಸ್ ಬ್ಲ್ಯಾಕ್ ಮತ್ತು ಒರಿಜಿನ್ ಬ್ಲೂ ಆಗಿವೆ.

Best Mobiles in India

English summary
Infinix Smart 6 HD First Sale Today Via Flipkart Price Starts at Rs 6,799.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+