Home
ಸುದ್ದಿಜಾಲ

ಸ್ಟೈಲಿಶ್‌ ಡಿಸೈನ್‌ ಇರುವ ಈ ಅಗ್ಗದ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಜನಪ್ರಿಯ ಇ ಕಾಮರ್ಸ್‌ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಎಲ್ಲ ಮಾದರಿಯ ಉತ್ಪನ್ನಗಳಿಗೂ ಆಫರ್‌ ಘೋಷಿಸಿರುತ್ತದೆ. ಅದರಲ್ಲಿಯೂ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೂ ಹೆಚ್ಚಿನ ರಿಯಾಯಿತಿ ಕೊಡುಗೆಗಳನ್ನು ನೀಡಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಇದೀಗ ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಫೋನ್‌ ಮೊಬೈಲ್ ಬೊಂಬಾಟ್‌ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಖರೀದಿದಾರರು ಅಚ್ಚರಿಯಿಂದ ಈ ಫೋನಿನತ್ತ ತಿರುಗಿ ನೋಡುವಂತಾಗಿದೆ. ಅಂದಹಾಗೆ ಈ ಮೊಬೈಲ್‌ ಯುನಿಸೊಕ್ T606 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಫೋನ್‌ ಶೇ. 22% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 4 GB RAM + 64 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 6,999 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಕೂಡಾ ಪಡೆಯಬಹುದಾಗಿದೆ.

ಸ್ಟೈಲಿಶ್‌ ಡಿಸೈನ್‌ ಇರುವ ಈ ಅಗ್ಗದ ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಅಂದಹಾಗೆ ಈ ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಮೊಬೈಲ್‌ 5,000 mAh ಬ್ಯಾಟರಿ ಸಾಮರ್ಥ್ಯದ ಸಪೋರ್ಟ್‌ ಪಡೆದಿದ್ದು, ಜೊತೆಗೆ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ. ಮುಂದೆ ಓದಿರಿ.

ಇನ್ಫಿನಿಕ್ಸ್‌ ಸ್ಮಾರ್ಟ್‌ 8HD - ಫೀಚರ್ಸ್‌

ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಮೊಬೈಲ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಪಡೆದಿದ್ದು, ಇದರ ಜೊತೆಗೆ ಡಿಸ್‌ಪ್ಲೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಸಪೋರ್ಟ್‌ ಮಾಡಲಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಮೊಬೈಲ್‌ ಯುನಿಸೊಕ್ T606 ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದು ಆಂಡ್ರಾಯ್ಡ್‌13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6 GB RAM ಮತ್ತು 64 GB ಆಂತರೀಕ ಸ್ಟೊರೇಜ್‌ ಸಾಮರ್ಥ್ಯದ ಆಯ್ಕೆ ಕೂಡಾ ಪಡೆದುಕೊಂಡಿದೆ. ಇದಲ್ಲದೆ 4 GB ವರ್ಚುವಲ್ RAM ಹಾಗೂ ಮೈಕ್ರೊ SD ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು 2TB ವರೆಗೂ ವಿಸ್ತರಿಸುವುದಕ್ಕೆ ಅವಕಾಶವನ್ನು ಪಡೆದಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೌಲಭ್ಯ ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 13  ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿದೆ. ಹಾಗೆಯೇ ಎರಡನೇ ಕ್ಯಾಮೆರಾ VGA ಕ್ಯಾಮೆರಾ ಸೆನ್ಸಾರ್ ಪಡೆದುಕೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಸ್ಮಾರ್ಟ್‌ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯದ ಸಪೋರ್ಟ್‌ ಅನ್ನು ಪಡೆದಿದುಕೊಂಡಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಅನ್ನು ಬೆಂಬಲ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್‌, ಹಾಟ್‌ಸ್ಪಾಟ್‌, UFS 2.2 ಸಂಗ್ರಹಣೆ ಮತ್ತು ಟೈಪ್ ಸಿ ಚಾರ್ಜಿಂಗ್ ಸ್ಲಾಟ್ ಅನ್ನು ಪಡೆದುಕೊಂಡಿದೆ.

ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸಹ ಇದೆ. ಇನ್ನು ಈ ಇನ್ಫಿನಿಕ್ಸ್‌ ಸ್ಮಾರ್ಟ್‌ 8HD ಮೊಬೈಲ್‌ ಸ್ಟಲ್ ಗ್ರೀನ್, ಶೈನಿ ಗೋಲ್ಡ್, ಟಿಂಬರ್ ಬ್ಲಾಕ್ ಮತ್ತು ಗ್ಯಾಲಕ್ಸಿ ವೈಟ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Infinix SMART 8 HD gets a Fantastic Price Drop in India. check offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+