Home
ಸುದ್ದಿಜಾಲ

ಇದೇ ಮಾರ್ಚ್‌ 9 ರಂದು ಈ ಅಗ್ಗದ ಬೆಲೆಯ ಫೋನಿನ ಫಸ್ಟ್‌ ಸೇಲ್‌ ಪ್ರಾರಂಭ!

ಇನ್ಫಿನಿಕ್ಸ್ ಕಂಪನಿಯು ನೂತನವಾಗಿ ಭಾರತದಲ್ಲಿ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ಇದೇ ಮಾರ್ಚ್ 9 ರಂದು ಸಂಜೆ 5 ಗಂಟೆಗೆ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಸೇಲ್‌ ಪ್ರಾರಂಭ ಮಾಡಲಿದೆ.

ಹೌದು, ಇನ್ಫಿನಿಕ್ಸ್ ಸಂಸ್ಥೆಯ ಇತ್ತೀಚಿನ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನಿನ ಫಸ್ಟ್‌ ಸೇಲ್‌ ಮಾರ್ಚ್ 9 ರಂದು ಶುರುವಾಗಿಲಿದೆ. ಖರೀದಿದಾರರಿಗೆ ಫ್ಲಿಪ್‌ಕಾರ್ಟ್‌ ತಾಣದಲ್ಲಿ ರಿಯಾಯಿತಿ ಸಹ ಲಭ್ಯ ಆಗಿಲಿದೆ. ಅಂದಹಾಗೆ ಈ ಫೋನ್‌ 4GB + 128GB 4GB + 128GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಇದೇ ಮಾರ್ಚ್‌ 9 ರಂದು ಈ ಅಗ್ಗದ ಬೆಲೆಯ ಫೋನಿನ ಫಸ್ಟ್‌ ಸೇಲ್‌ ಪ್ರಾರಂಭ!

ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಅದೇ ರೀತಿ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೀಚರ್ಸ್‌

ಇನ್ಫಿನಿಕ್ಸ್ ಸಂಸ್ಥೆಯ ಈ ಹೊಸ ಫೋನ್‌ 6.6 ಇಂಚಿನ ಐಪಿಎಸ್ LCD ಪ್ಯಾನಲ್ ಅನ್ನು ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು, ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಮತ್ತು 500 ನಿಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ.

ಇನ್ಫಿನಿಕ್ಸ್ ಕಂಪನಿಯ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು XOS 13 ಆಧಾರಿತ ಆಂಡ್ರಾಯ್ಡ್ 13 ಗೋ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ ಈ ಫೋನ್‌ 4GB + 128GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯ. ಇದಲ್ಲದೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಆಯ್ಕೆ ಇದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಸ್ಮಾರ್ಟ್‌ಫೋನ್‌ ಹಿಂಬದಿತಲ್ಲಿ ಎರಡು ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ಎಐ ಲೆನ್ಸ್ ಮತ್ತು ಕ್ವಾಡ್ ನೇತೃತ್ವದ ಫ್ಲ್ಯಾಷ್ ಅನ್ನು ಪಡೆದಿದೆ. ಇದಲ್ಲದೆ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನಿನ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನ್‌ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಒಳಗೊಂಡಿದ್ದು, 18W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಸಪೋರ್ಟ್‌ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G VoLTE, ವೈ-ಫೈ 802.11 ಎಸಿ, ಬ್ಲೂಟೂತ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್‌ ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಪೋನ್‌ ಸೈಡ್‌ ಫೇಸಿಂಗ್‌ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ನಂತಹ ಆಯ್ಕೆಗಳನ್ನು ಇದು ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಫೋನ್‌ 4GB + 128GB ವೇರಿಯಂಟ್‌ ಬೆಲೆ 7,799ರೂ. ಆಗಿದೆ. ಆದರೆ ಆರಂಭಿಕ ಕೊಡುಗೆಯಾಗಿ 800ರೂ. ರಿಯಾಯಿತಿ ಇದ್ದು, ಗ್ರಾಹಕರು 6,999ರೂ. ಗಳಿಗೆ ಪಡೆಯಬಹುದಾಗಿದೆ. ಇನ್ನು ಈ ಫೋನ್‌ ವೈಟ್‌, ಗೋಲ್ಡ್‌ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದಿದ್ದು, ಇದೇ ಮಾರ್ಚ್‌ 9 ರಂದು ಸೇಲ್ ಪ್ರಾರಂಭಿಸಲಿದೆ.

Best Mobiles in India

English summary
Infinix Smart 8 Plus first sale goes on March 9 via flipkart: offers, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+