Home
ಸುದ್ದಿಜಾಲ

Infinix: 8 GB RAM ಆಯ್ಕೆಯ ಈ ಬಜೆಟ್‌ ಬೆಲೆಯ ಫೋನ್‌ಗೆ ದೊಡ್ಡ ಆಫರ್..

ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix Smartphones) ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತಿದ್ದು, ಈ ನಡುವೆ 8 GB RAM ಆಯ್ಕೆ ಇರುವ ಹಾಗೂ ಈ ವರ್ಷದ ಆರಂಭದಲ್ಲಿ ಲಾಂಚ್‌ ಆಗಿರುವ ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್‌ಗೆ (Infinix Smart 8 smartphone) ಬೊಂಬಾಟ್‌ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್ ಇದೀಗ ಭಾರೀ ಅಗ್ಗದ ದರದಲ್ಲಿ ದೊರಕುತ್ತಿದೆ. ಈ ಫೋನ್ ಹಿಲಿಯೊ G36 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಇತರೆ ಆಕರ್ಷಕ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ಬೆಲೆ ಎಷ್ಟು?, ಫೀಚರ್ಸ್‌ ಏನಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

8 GB RAM ಆಯ್ಕೆಯ ಈ ಬಜೆಟ್‌ ಬೆಲೆಯ ಫೋನ್‌ಗೆ ದೊಡ್ಡ ಆಫರ್..

ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಇನ್ನು ಈ ಫೋನ್ 10,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಈಗ ಇದನ್ನು ಕೇವಲ 7,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್ ಯುಪಿಐ ವ್ಯವಹಾರದಲ್ಲಿ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್ ನಲ್ಲಿ 5% ಕ್ಯಾಶ್‌ಬ್ಯಾಕ್, ಕಾಂಬೊ ಮೊಬೈಲ್ ಮತ್ತು ಕೇಸ್‌ಕವರ್‌ನಲ್ಲಿ ಹೆಚ್ಚುವರಿ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌ಗೆ ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ನಂತರ ಪೇ ಮಾಡಿದ್ರೆ 20,000 ರೂ.ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

8 GB RAM ಆಯ್ಕೆಯ ಈ ಬಜೆಟ್‌ ಬೆಲೆಯ ಫೋನ್‌ಗೆ ದೊಡ್ಡ ಆಫರ್..

ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್‌ ರೇಟ್‌ ಆಯ್ಕೆ ಹಾಗೂ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ 84.6% ಸ್ಕ್ರೀನ್-ಟು-ಬಾಡಿ ಅನುಪಾತ, 267 ppi ಸಾಂದ್ರತೆಯನ್ನು ಈ ಡಿಸ್‌ಪ್ಲೇ ಬೆಂಬಲಿಸಲಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್ ಪ್ರೊಸೆಸರ್‌ ವಿವರ: ಈ ಫೋನ್‌ ಆಂಡ್ರಾಯ್ಡ್‌13 ಗೋ ಅನ್ನು ರನ್‌ ಮಾಡಲಿದ್ದು, ಮೀಡಿಯಾಟೆಕ್‌ ಹಿಲಿಯೊ G36 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 128 GB ಇಂಟರ್‌ ಸ್ಟೋರೇಜ್‌ ಹಾಗೂ 8 GB RAM ಬಲ ಪಡೆದಿದ್ದು, ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಹಾಗೆಯೇ 2 TB ವರೆಗೆ ವಿಸ್ತರಣೆ ಮಾಡಿಕೊಳ್ಳಲು ಸಹ ಅವಕಾಶ ನೀಡಲಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್‌ + ಎಐ ಲೆನ್ಸ್ ಅನ್ನು ಹೊಂದಿದೆ. ಇವು ವಿಡಿಯೋ, ಎಐ ಕ್ಯಾಮ್, ಬ್ಯೂಟಿ, ಪೋರ್ಟ್ರೇಟ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಎಆರ್ ಶಾಟ್, ಹೆಚ್‌ಡಿಆರ್‌, ಫುಲ್‌ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್, ಫಿಲ್ಟರ್‌ಗಳು ಸೇರಿದಂತೆ ಅನೇಕ ಫೀಚರ್ಸ್‌ ಅನ್ನು ಬೆಂಬಲಿಸಲಿವೆ. ಇದರೊಂದಿಗೆ
8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

8 GB RAM ಆಯ್ಕೆಯ ಈ ಬಜೆಟ್‌ ಬೆಲೆಯ ಫೋನ್‌ಗೆ ದೊಡ್ಡ ಆಫರ್..

ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ ಹಾಗೂ 10W ಟೈಪ್-ಸಿ ಚಾರ್ಜರ್ ಬೆಂಬಲ ಪಡೆದಿದೆ. ಉಳಿದಂತೆ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಗೈರೊಸ್ಕೋಪ್, ಇ-ಕಾಂಪಸ್, ಜಿ-ಸೆನ್ಸರ್, ಡಿಟಿಎಸ್ ಪ್ರೊಸೆಸಿಂಗ್, ಪವರ್ ಮ್ಯಾರಥಾನ್ ಟೆಕ್, ಫೋಟೋ ಕಂಪ್ರೆಸರ್, 360 ಫ್ಲ್ಯಾಶ್‌ಲೈಟ್, ಐ ಕೇರ್, ಎಐ ಗ್ಯಾಲರಿ, ಮೆಮ್ ಫ್ಯೂಷನ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Infinix Smart 8 smartphone is now available at a very cheap price. This phone will run on Helio G36 processor and has got a 5000 mAh battery option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+