Home
ಸುದ್ದಿಜಾಲ

Infinix: ಭಾರತದಲ್ಲಿ ಹೊಸ ವೇರಿಯಂಟ್‌ನಲ್ಲಿ ಮತ್ತೇ ಕಾಣಿಸಿಕೊಂಡ ಇನ್ಫಿನಿಕ್ಸ್ ಸ್ಮಾರ್ಟ್‌ 8! ಬೆಲೆ ಅಷ್ಟೇನಿಲ್ಲ...

ಇನ್ಫಿನಿಕ್ಸ್ (Infinix) ಕಂಪೆನಿ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಅಗ್ಗದ ದರದಲ್ಲಿ ಉತ್ತಮ ಸ್ಟೋರೇಜ್‌ ಆಯ್ಕೆ ನೀಡುವ ಪ್ರಮುಖ ಸಂಸ್ಥೆಯಾಗಿದೆ. ಅದರಂತೆ ಕೆಲವು ದಿನಗಳ ಹಿಂದೆ ಉತ್ತಮ ಫೀಚರ್ಸ್‌ ಆಯ್ಕೆಯೊಂದಿಗೆ ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ (Infinix Smart 8 smartphone) ಅನ್ನು ಅನಾವರಣ ಮಾಡಿತ್ತು. ಆದರೆ, ಈಗ ಈ ಫೋನ್‌ ಹೊಸ ವೇರಿಯಂಟ್‌ನಲ್ಲಿ ಭಾರತದಲ್ಲಿ ಮತ್ತೇ ಲಾಂಚ್‌ ಆಗಿದೆ.

ಹೌದು, ಇನ್ಫಿನಿಕ್ಸ್ ನಿಂದ ಈಗಾಗಲೇ ಲಾಂಚ್‌ ಮಾಡಲಾಗಿರುವ ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಇದನ್ನು ಮನಗಂಡಿರುವ ಕಂಪೆನಿಯು ಈಗ ಮತ್ತೊಂದು ವೇರಿಯಂಟ್ ಆಯ್ಕೆಯೊಂದಿಗೆ ಈ ಫೋನ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಹಿಲಿಯೋ G36 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಹೊಸ ವೇರಿಯಂಟ್‌ನ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಹೊಸ ವೇರಿಯಂಟ್‌ನಲ್ಲಿ ಮತ್ತೇ ಕಾಣಿಸಿಕೊಂಡ ಇನ್ಫಿನಿಕ್ಸ್ ಸ್ಮಾರ್ಟ್‌ 8!

ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌: ಸ್ಮಾರ್ಟ್‌ಫೋನ್ ಬ್ರಾಂಡ್ ಇನ್ಫಿನಿಕ್ಸ್ ಇತ್ತೀಚೆಗೆ ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್ ಅನ್ನು 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಬಜೆಟ್ ಬೆಲೆ ವಿಭಾಗದಲ್ಲಿ ಅನಾವರಣ ಮಾಡಿತ್ತು. ಇದೀಗ ಈ ಫೋನ್‌ 16GB RAM ವೇರಿಯಂಟ್‌ನಲ್ಲೂ ಕಾಣಿಸಿಕೊಂಡಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಇತರೆ ಫೀಚರ್ಸ್ ಏನು ಅನ್ನೋದನ್ನು ನೋಡೋಣ.

ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಹೊಂದಿದ್ದು, 500ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಈ ಮೂಲಕ ಈ ಬೆಲೆ ವಿಭಾಗದಲ್ಲಿ ಅತ್ಯುತ್ತಮ ಫೋನ್‌ ಎನಿಸಿಕೊಂಡಿದೆ.

ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G36 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ XOS 13 ಓಎಸ್‌ನಲ್ಲಿ ರನ್ ಆಗಲಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 4GB RAM +64GB ಮತ್ತು 8GB RAM + 8GB ವರ್ಚುವಲ್ RAM ಆಯ್ಕೆಯೊಂದಿಗೆ 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಈ ಫೋನ್‌ ಇದೀಗ ಲಭ್ಯ ಇದೆ.

ಭಾರತದಲ್ಲಿ ಹೊಸ ವೇರಿಯಂಟ್‌ನಲ್ಲಿ ಮತ್ತೇ ಕಾಣಿಸಿಕೊಂಡ ಇನ್ಫಿನಿಕ್ಸ್ ಸ್ಮಾರ್ಟ್‌ 8!

ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆಯೊಂದಿಗೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದು ಎಐ ಫೀಚರ್ಸ್‌ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ ನಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 10W ಚಾರ್ಜಿಂಗ್ ಬೆಂಬಲ ಪಡೆದಿದೆ. ಇದಕ್ಕಾಗಿ ಈ ಫೋನ್‌ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಹೊಂದಿದೆ. ಉಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಜಿಪಿಎಸ್‌, ಬ್ಲೂಟೂತ್ ಆವೃತ್ತಿ 5 ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದುಕೊಂಡಿದೆ.

ಇನ್ಫಿನಿಕ್ಸ್ ಸ್ಮಾರ್ಟ್‌ 8 ಸ್ಮಾರ್ಟ್‌ಫೋನ್‌ ಹೊಸ ಸ್ಟೋರೇಜ್ ವೇರಿಯಂಟ್‌ ಬೆಲೆ: ಈ ಫೋನ್‌ನ ಹೊಸ ವೇರಿಯಂಟ್‌ 16GB RAM ಅನ್ನು ಹೊಂದಿದೆ. ಅಂದರೆ 8GB ಭೌತಿಕ RAM ಮತ್ತು 8GB ವರ್ಚುವಲ್ RAM. ಇನ್ನೊಂದು 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಭಾರತದಲ್ಲಿ ಹೊಸ ವೇರಿಯಂಟ್‌ನಲ್ಲಿ ಮತ್ತೇ ಕಾಣಿಸಿಕೊಂಡ ಇನ್ಫಿನಿಕ್ಸ್ ಸ್ಮಾರ್ಟ್‌ 8!

ಇನ್ಫಿನಿಕ್ಸ್ ಪ್ರಕಾರ ಹೊಸ ವೇರಿಯಂಟ್‌ ಫೋನ್‌ ಬೆಲೆ 7,999ರೂ.ಗಳಾಗಿದೆ. ಆದರೆ, ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 8,999 ರೂ.ಗಳ ಬೆಲೆ ಉಲ್ಲೇಖ ಮಾಡಲಾಗಿದ್ದು, ಶೀಘ್ರದಲ್ಲೇ ಬರಲಿದೆ ಎಂದು ಪಟ್ಟಿಮಾಡಲಾಗಿದೆ. ಈ ಫೋನ್ ರೇನ್ಬೋ ಬ್ಲೂ, ಗ್ಯಾಲಕ್ಸಿ ವೈಟ್, ಟಿಂಬರ್ ಬ್ಲಾಕ್ ಮತ್ತು ಶೈನಿ ಗೋಲ್ಡ್ ಬಣ್ಣಗಳಲ್ಲಿ ಕಂಡುಬಂದಿದೆ.

Best Mobiles in India

English summary
Infinix Smart 8 smartphone which has already been launched by Infinix has a huge demand in India. Accordingly now this phone has been unveiled with a new variant option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+