Home
ಸುದ್ದಿಜಾಲ

Infinix: ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಲಾಂಚ್! 50MP ಕ್ಯಾಮೆರಾ.. 6,749 ರೂ.ಗಳಿಗೆ ಖರೀದಿಸಿ

ಇನ್ಫಿನಿಕ್ಸ್ (Infinix) ಇದೀಗ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆಯೊಂದಿಗೆ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಡಲಿದೆ.

ಹೌದು, ಭಾರತದಲ್ಲಿ ಇದೀಗ ಪ್ರವೇಶ ಮಟ್ಟದ ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್‌ (Infinix Smart 8 smartphone) ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಹಿಲಿಯೋ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಮೂಲಕ ಬಜೆಟ್‌ ಬೆಲೆಯಲ್ಲಿ ದೊಡ್ಡ ಮಟ್ಟದ ಸೌಂಡ್‌ ಮಾಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಲಾಂಚ್! 50MP ಕ್ಯಾಮೆರಾ..

ಇನ್ಫಿನಿಕ್ಸ್ ಸ್ಮಾರ್ಟ್ 8 ಸ್ಮಾರ್ಟ್‌ಫೋನ್‌: ಕೆಲವು ವಾರಗಳ ಹಿಂದಷ್ಟೇ ಸ್ಮಾರ್ಟ್‌ 8 ಹೆಚ್‌ಡಿ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡುವ ಮೂಲಕ ಇನ್ಫಿನಿಕ್ಸ್ ಬಹಳ ಸದ್ದು ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಈಗ ಈ ಹೊಸ ಫೋನ್‌ ಅನ್ನು ಅನಾವರಣ ಮಾಡಿದೆ. ಆದರೆ, ಈ ಫೋನ್‌ ಸ್ಮಾರ್ಟ್‌ 8 ಹೆಚ್‌ಡಿ ಗಿಂತ ಅಷ್ಟೇನು ಭಿನ್ನವಾಗಿಲ್ಲ ಎನ್ನಲಾಗಿದೆ. ಪ್ರೊಸೆಸರ್‌ ಹಾಗೂ ರಿಯರ್‌ ಕ್ಯಾಮೆರಾ ಹೊತರುಪಡಿಸಿ ಇನ್ನೆಲ್ಲವೂ ಒಂದೇ ರೀತಿಯಲ್ಲಿ ಇವೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 1612 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ನ HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿರುವ 6.6 ಇಂಚಿನ IPS LCD ಡಿಸ್‌ಪ್ಲೆ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಉದ್ದೇಶಕ್ಕೆ ಪಂಚ್ ಹೋಲ್ ಆಯ್ಕೆ ನೀಡಲಾಗಿದೆ. ಅಲ್ಲದೆ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ನೀಡಲಾಗಿದ್ದು, ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ರೊಸೆಸರ್‌ ವಿವರ: ಈ ಫೋನ್ ಮೀಡಿಯಾಟೆಕ್ ಹಿಲಿಯೋ G36 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4GB LPDDR4x RAM ಮತ್ತು 64GB ಇಂಟರ್‌ ಸ್ಟೋರೇಜ್‌ನೊಂದಿಗೆ ಲಭ್ಯ ಇದೆ. ಪ್ರಮುಖ ವಿಷಯ ಏನೆಂದರೆ ಈ ಫೋನ್‌ ನಲ್ಲಿ ನೀವು 2TB ವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಲಾಂಚ್! 50MP ಕ್ಯಾಮೆರಾ..

ಇನ್ಫಿನಿಕ್ಸ್ ಸ್ಮಾರ್ಟ್ 8 ಕ್ಯಾಮೆರಾ ಮಾಹಿತಿ: ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಎಫ್/1.8 ಅಪರ್ಚರ್ ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಮತ್ತು ಎಫ್/2.0 ಅಪರ್ಚರ್ ಹೊಂದಿರುವ ಎಐ ಲೆನ್ಸ್ ಹೊಂದಿದೆ. ಜೊತೆಗೆ ಎಲ್ಇಡಿ ಫ್ಲ್ಯಾಶ್ ಮಾಡ್ಯೂಲ್ ಕೂಡ ಇದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ f/2.0 ಅಪರ್ಚರ್ ಕ್ಯಾಮೆರಾ ಹೊಂದಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 10W ಚಾರ್ಜಿಂಗ್‌ ಬೆಂಬಲ ಪಡೆದಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಎಐ ಫೇಸ್ ಅನ್‌ಲಾಕ್‌ಗೆ ಬೆಂಬಲವನ್ನು ನೀಡಲಿದ್ದು, ವೈ-ಫೈ 5, ಜಿಪಿಎಸ್‌, ಬ್ಲೂಟೂತ್ ಆವೃತ್ತಿ v5.0, ಯುಎಸ್‌ಬಿ ಟೈಪ್‌ - ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಲಾಂಚ್! 50MP ಕ್ಯಾಮೆರಾ..

ಇನ್ಫಿನಿಕ್ಸ್ ಸ್ಮಾರ್ಟ್ 8 ಬೆಲೆ ಹಾಗೂ ಲಭ್ಯತೆ: ಈ ಫೋನ್‌ ಟಿಂಬರ್ ಬ್ಲಾಕ್, ಶೈನಿ ಗೋಲ್ಡ್, ರೇನ್‌ಬೋ ಬ್ಲೂ ಮತ್ತು ಗ್ಯಾಲಕ್ಸಿ ವೈಟ್ ಬಣ್ಣಗಳಲ್ಲಿ ಕಂಡುಬಂದಿದ್ದು, 4GB + 64GB ಸ್ಟೋರೇಜ್‌ನ ಒಂದೇ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದೆ. ಇದಕ್ಕೆ 7,499ರೂ. ಗಳ ಸಾಮಾನ್ಯ ಬೆಲೆ ಇದ್ದು, ಐಸಿಐಸಿಐ ಬ್ಯಾಂಕ್ ಕಾರ್ಡ್ ಆಫರ್ ಜೊತೆಗೆ 6,749 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Infinix Smart 8 smartphone has been unveiled in India. The smartphone is powered by a MediaTek Helio processor and comes with 64GB internal storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+