Infinix SmartTV: ಇನ್ಫಿನಿಕ್ಸ್‌ನ ಈ ಸ್ಮಾರ್ಟ್‌ಟಿವಿ ದೀಪಾವಳಿ ಹಿನ್ನೆಲೆ ಅರ್ಧ ಬೆಲೆಗೆ ಲಭ್ಯ! 4 GB ಸ್ಟೋರೇಜ್
ದೀಪಾವಳಿ (Diwali) ಹಿನ್ನೆಲೆ ಮನೆಯಲ್ಲಿ ಇಡಲು ಏನಾದರೂ ಹೊಸ ವಸ್ತು ಖರೀದಿ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಇನ್ನೂ ಕೆಲವರು ಸ್ಮಾರ್ಟ್ ಡಿವೈಸ್ ಖರೀದಿ ಮಾಡಲು ಅದರಲ್ಲೂ ಸ್ಮಾರ್ಟ್‌ಟಿವಿಗೆ (SmartTV) ಹೆಚ್ಚು ಕೇಂದ್ರೀಕರಿಸುತ್ತಾರೆ. ಈ ವೇಳೆ ಇನ್ಫಿನಿಕ್ಸ್‌ನ ಸ್ಮಾರ್ಟ್‌ಟಿವಿ ಹಬ್ಬದ ಭಾಗವಾಗಿ ಅರ್ಧ ಬೆಲೆಗೆ ಸಿಕ್ಕರೆ ಹೇಗೆ?.
ಹೌದು, ದೀಪಾವಳಿ ಹಿನ್ನೆಲೆ ಫ್ಲಿಪ್‌ಕಾರ್ಟ್ ಹಲವಾರು ಸ್ಮಾರ್ಟ್‌ಡಿವೈಸ್‌ಗಳಿಗೆ ಭರ್ಜರಿ ಆಫರ್ ನೀಡಿದೆ. ಇದರ ಭಾಗವಾಗಿಯೇ ಇನ್ಫಿನಿಕ್ಸ್ Y1 80 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿಗೆ (Infinix Y1 80 cm HD Ready LED Smart Linux TV 2022) ಅರ್ಧ ಬೆಲೆಯಲ್ಲಿ ಲಭ್ಯ ಇದೆ. ಈ ಸ್ಮಾರ್ಟ್‌ಟಿವಿ ಪೂರ್ವ ಲೋಡ್ ಮಾಡಲಾದ ಆಪ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಮಿರಾಕಾಸ್ಟ್, ವೆಬ್ ಬ್ರೌಸರ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗಿದ್ರೆ, ಈ ಟಿವಿಯ ಆಫರ್ ಬೆಲೆ ಎಷ್ಟು?, ಇದರ ಪ್ರಮುಖ ಫೀಚರ್ಸ್ ಏನು ಎಂಬ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ಇನ್ಫಿನಿಕ್ಸ್ Y1 80 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ ಆಫರ್ ವಿವರ: ದೀಪಾವಳಿ ಸಂಭ್ರಮದಲ್ಲಿ ಈ ಸ್ಮಾರ್ಟ್‌ಟಿವಿ ನಿಮಗೆ ಇನ್ನಷ್ಟು ಖುಷಿ ನೀಡಲಿದೆ. ಯಾಕೆಂದರೆ 16,999ರೂ.ಗಳ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದೆಯಾದರೂ ನೀವು ಇದನ್ನು ಇದರ ಅರ್ಧ ಬೆಲೆಗೆ ಅಂದರೆ 8,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಇದಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ 50% ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ಹೆಚ್ಚುವರಿ 200 ರೂ.ಗಳ ರಿಯಾಯಿತಿ ಸಹ ಸಿಗಲಿದೆ.
ಇದರೊಂದಿಗೆ ಇನ್ನೂ ಆಫರ್ ಬೇಕು ಎಂದರೆ ಯುಪಿಐ ವಹಿವಾಟುಗಳ ಮೇಲೆ ಹೆಚ್ಚುವರಿ 500 ರಿಯಾಯಿತಿ, ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೇಲೆ 250 ರಿಯಾಯಿತಿ, ಫ್ಲಿಪ್‌ಕಾರ್ಡ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5% ಕ್ಯಾಶ್‌ಬ್ಯಾಕ್ ಸೇರಿದಂತೆ ಅನೇಕ ಆಫರ್‌ಗಳು ನಿಮಗೆ ಲಭ್ಯ ಇವೆ. ಈ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಟಿವಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಇನ್ಫಿನಿಕ್ಸ್ Y1 80 cm ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ ಡಿಸ್ಪ್ಲೇ ವಿವರ: ಈ ಟಿವಿ 250 ನಿಟ್ಸ್ ಬ್ರೈಟ್‌ನೆಸ್ ಆಯ್ಕೆಯೊಂದಿಗೆ 32 ಇಂಚಿನ ಎಲ್ಇಡಿ ಡಿಸ್‌ಪ್ಲೇ ಪಡೆದಿದೆ. ಜೊತೆಗೆ ಇದು 1200:1 ಕಾಂಟ್ರಾಸ್ಟ್ ಅನುಪಾತ,178 ಡಿಗ್ರಿ ವೀಕ್ಷಣಾ ಕೋನ, 16:9, 4:3 ಆಕಾರ ಅನುಪಾತ ಹಾಗೂ 60 Hz ರಿಫ್ರೆಶ್ ರೇಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

ಹಾಗೆಯೇ ಬೆಜೆಲ್-ಲೆಸ್ ವಿನ್ಯಾಸದ ಆಯ್ಕೆಯಲ್ಲಿ ಈ ಟಿವಿಯನ್ನು ಪರಿಚಯಿಸಲಾಗಿದ್ದು, ನಿಮ್ಮ ಮೆಚ್ಚಿನ ಕಂಟೆಂಟ್‌ನ ವಿಸ್ತಾರವಾದ ನೋಟವನ್ನು ನೀಡುತ್ತದೆ. ಕನಿಷ್ಠ ಕೀಗಳು ಮತ್ತು ಮೀಸಲಾದ ಹಾಟ್‌ಕೀಗಳೊಂದಿಗೆ ಸ್ಲಿಮ್ ಮತ್ತು ಹಗುರವಾದ ರಿಮೋಟ್ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಈ ಮೂಲಕ ನಿಮ್ಮ ನೆಚ್ಚಿನ ಸ್ಟ್ರೀಮಿಂಗ್ ಆಪ್‌ಗಳನ್ನು ಅನ್ನು ಸಲೀಸಾಗಿ ಓಪನ್ ಮಾಡಬಹುದು.
ಇದರೊಂದಿಗೆ ಮಿರಾಕಾಸ್ಟ್ ಸೌಲಭ್ಯ ಸಹ ಇದು, ಈ ಮೂಲಕ ದೊಡ್ಡ ಡಿಸ್‌ಪ್ಲೇನಲ್ಲಿ ವಿಸ್ತಾರವಾದ ವೀಕ್ಷಣೆಯ ಅನುಭವಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಟಿವಿಗೆ ಯಾವುದೇ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಇದರ ಜೊತೆಗೆ 3 ಹೆಚ್‌ಡಿಎಮ್‌ಐ, 2 ಯುಎಸ್‌ಬಿ, ಸಿಂಗಲ್ ಬ್ಯಾಂಡ್ ವೈ-ಫೈ , 3.5 mm ಹೆಡ್‌ಫೋನ್ ಜ್ಯಾಕ್, RJ45 ಪೋರ್ಟ್, ಲ್ಯಾನ್, ಎವಿನಂತಹ ಬಹು ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.

ಅಷ್ಟೇ ಅಲ್ಲದೆ ಉನ್ನತ ಮಟ್ಟದ ಪ್ರೊಸೆಸರ್ ಬಲವನ್ನು ಅಂದರೆ ಕ್ವಾಡ್ ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಯಾವುದೇ ಅಡೆತಡೆ ಅಥವಾ ವಿಳಂಬವಿಲ್ಲದೆ ಅತ್ಯುತ್ತಮ ವೀಕ್ಷಣೆಯನ್ನು ನೀಡುತ್ತದೆ. ಜೊತೆಗೆ 512 MB RAM ಮತ್ತು 4 GB ಇಂಟರ್ ಸ್ಟೋರೇಜ್ ಆಯ್ಕೆ ಸುಗಮ ಕಾರ್ಯಾಚರಣೆಯನ್ನು ಖಾತ್ರಿಗೊಳಿಸಿದೆ. ಈ ಮೂಲಕ ನಿಮ್ಮ ಅಗತ್ಯ ಡೇಟಾವನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಡಲಿದೆ.


Click it and Unblock the Notifications








