Home
ಸುದ್ದಿಜಾಲ

Infinix ನಿಂದ ವೆಬ್‌ಓಎಸ್‌ ಆಧಾರಿತ ಸ್ಮಾರ್ಟ್‌ಟಿವಿ ಲಾಂಚ್: ವಿಶೇ‍ಷತೆ ಏನು?, ಬೆಲೆ ಎಷ್ಟು?

ಇನ್ಫಿನಿಕ್ಸ್(Infinix) ನ ಯಾವುದೆ ಸ್ಮಾರ್ಟ್‌ಡಿವೈಸ್‌ಗಳು ಭಾರತೀಯರಿಗೆ ಅಚ್ಚು ಮೆಚ್ಚು. ಅದರಲ್ಲೂ ಹೊಸದಾಗಿ ಲಾಂಚ್ ಆಗುವ ಸ್ಮಾರ್ಟ್‌ಡಿವೈಸ್‌ ಖರೀದಿ ಮಾಡಲು ಸದಾ ಹಾತೊರೆಯುತ್ತಿರುತ್ತಾರೆ. ಅದರಂತೆ ಇನ್ಫಿನಿಕ್ಸ್ ಈಗ ಎರಡು ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ.

ಹೌದು, ಇನ್ಫಿನಿಕ್ಸ್ ಭಾರತದ ಮೊದಲ ಬಜೆಟ್ ಬೆಲೆಯ 32 ಇಂಚಿನ ಹೆಚ್‌ ಟಿವಿ ಮತ್ತು 43 ಇಂಚಿನ 4K ಟಿವಿಯನ್ನು ಲಾಂಚ್‌ ಮಾಡಿದೆ. ಈ ಎರಡು ಟಿವಿಗಳು QLED ಡಿಸ್‌ಪ್ಲೇಯೊಂದಿಗೆ ಪ್ಯಾಕ್‌ ಆಗಿರುವುದು ವಿಶೇಷ. ಜೊತೆಗೆ ಇಷ್ಟು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಅಗ್ಗದ ದರದಲ್ಲಿ ಟಿವಿಗಳು ಕಾಣಿಸಿಕೊಂಡಿರುವುದು ಸಹ ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಹಾಗಿದ್ರೆ, ಈ ಟಿವಿಗಳ ಫೀಚರ್ಸ್‌ ಏನು, ಇವುಗಳ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Infinix ನಿಂದ ವೆಬ್‌ಓಎಸ್‌ ಆಧಾರಿತ ಸ್ಮಾರ್ಟ್‌ಟಿವಿ ಲಾಂಚ್: ವಿಶೇ‍ಷತೆ ಏನು?...

ಇನ್ಫಿನಿಕ್ಸ್ W1 QLED ಟಿವಿ ಫೀಚರ್ಸ್‌: ಮೊದಲೇ ತಿಳಿಸಿದಂತೆ ಈ ಟಿವಿಗಳು ಎರಡು ಡಿಸ್‌ಪ್ಲೇ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಒಂದು 32 ಇಂಚಿನ ಸ್ಮಾರ್ಟ್‌ಟಿವಿ ಮತ್ತೊಂದು 43 ಇಂಚಿನ ಸ್ಮಾರ್ಟ್‌ ಟಿವಿ. ಇನ್ನು 32 ಹೆಚ್‌ ಡಿ ಸ್ಮಾರ್ಟ್‌ಟಿವಿ 1366 x 768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, ಇದು 90% NTSC ವೈಡ್ ಕಲರ್ ಗ್ಯಾಮಟ್ ಮತ್ತು ಗೇಮ್ ಡ್ಯಾಶ್‌ಬೋರ್ಡ್ ಆಪ್ಟಿಮೈಸೇಶನ್‌ನೊಂದಿಗೆ ಬರುತ್ತದೆ. ಜೊತೆಗೆ ಇದು ರಿಯಲ್‌ಟೆಕ್‌ ಕ್ವಾಡ್‌ನಿಂದ ಕಾರ್ಯನಿರ್ವಹಿಸಲಿದೆ.

ಹಾಗೆಯೇ 43 ಇಂಚಿನ 4K ವೇರಿಯಂಟ್‌ನ ಟಿವಿ 3840 x 2160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದ್ದು, ಇದು 94% NTSC ವೈಡ್ ಕಲರ್ ಗ್ಯಾಮಟ್ ಮತ್ತು ಗೇಮ್‌ಪೋರ್ಟ್ ಆಪ್ಟಿಮೈಸೇಶನ್‌ನೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ HDR10 ಬೆಂಬಲ ಇದ್ದು, ಈ ಟಿವಿ ರಿಯಲ್‌ಟೆಕ್‌ ಕ್ವಾಡ್ ಕೋರ್ ಬಲ ಪಡೆದಿದೆ.

ಈ ಸ್ಮಾರ್ಟ್ ಟಿವಿಗಳು 1GB RAM ಹಾಗೂ 8GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿವೆ. ಇದೆಲ್ಲದಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಟಿವಿಗಳನ್ನು ವೆಬ್‌ಓಎಸ್‌( WebOS) ಅನ್ನು ರನ್ ಮಾಡುತ್ತವೆ. ಉಳಿದಂತೆ ಈ ಟಿವಿಗಳು ನೆಟ್‌ಫ್ಲಿಕ್‌, ಪ್ರೈಮ್‌ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್, ಯೂಟ್ಯೂಬ್ ಮತ್ತು ಇನ್ನೂ ಹೆಚ್ಚಿನ ಇನ್‌ಬಿಲ್ಟ್‌ ಆಪ್‌ಗಳನ್ನು ಹೊಂದಿವೆ.

ಇನ್ನು ಈ ಟಿವಿಗಳು ಮ್ಯಾಜಿಕ್ ರಿಮೋಟ್‌ ಅನ್ನು ಬೆಂಬಲಿಸಲಿದ್ದು, ಇದು ಬಳಕೆದಾರರಿಗೆ ಧ್ವನಿ ಮತ್ತು ಗೆಸ್ಚರ್ ಬಳಕೆ ಮಾಡಿ ಸ್ಮಾರ್ಟ್ ಟಿವಿಗಳನ್ನು ಕಂಟ್ರೋಲ್‌ ಮಾಡಲು ಅನುವು ಮಾಡಿಕೊಡುತ್ತದೆ. ಉಳಿದಂತೆ ಡಾಲ್ಬಿ ಆಡಿಯೋ ನಿಂದ ಟ್ಯೂನ್ ಮಾಡಲಾದ 20W ಸ್ಪೀಕರ್‌ನೊಂದಿಗೆ ಈ ಟಿವಿಗಳು ಪ್ಯಾಕ್‌ ಆಗಿವೆ. ಈ ಮೂಲಕ ಡಿಸ್‌ಪ್ಲೇ ಹೊರತುಪಡಿಸಿ ಇನ್ನೆಲ್ಲಾ ಫೀಚರ್ಸ್‌ ಒಂದೇ ಆಗಿವೆ.

ಇನ್ನು ಇವುಗಳ ಕನೆಟ್ಟಿವಿಟಿ ವಿಚಾರಕ್ಕೆ ಬರುವುದಾದರೆ ಇವು ಡ್ಯುಯಲ್ ಬ್ಯಾಂಡ್ ವೈ-ಫೈ, ಮೂರು ಹೆಚ್‌ಡಿಎಮ್‌ಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ ಹಾಗೂ 1 ಆರ್‌ಎಫ್‌ ಇನ್‌ಪುಟ್, 1 ಎವಿ ಇನ್‌ಪುಟ್ ಮತ್ತು 1 ಹೆಡ್‌ಫೋನ್ ಜ್ಯಾಕ್ ಜೊತೆಗೆ ಕಾಣಿಸಿಕೊಂಡಿವೆ. ಈ ಮೂಲಕ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಈ ಟಿವಿಗಳನ್ನು ಬಳಕೆ ಮಾಡಿಕೊಳ್ಳಬಹುದು.

Infinix ನಿಂದ ವೆಬ್‌ಓಎಸ್‌ ಆಧಾರಿತ ಸ್ಮಾರ್ಟ್‌ಟಿವಿ ಲಾಂಚ್: ವಿಶೇ‍ಷತೆ ಏನು?...

ಇನ್ಫಿನಿಕ್ಸ್ W1 QLED ಟಿವಿ ಗಳ ಬೆಲೆ ಹಾಗೂ ಲಭ್ಯತೆ: 32 ಇಂಚಿನ ಹೆಚ್‌ಡಿ ಮಾದರಿಗೆ 10,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 43 ಇಂಚಿನ 4K ಮಾದರಿಯ ಸ್ಮಾರ್ಟ್‌ಟಿವಿಗೆ 20,999ರೂ.ಗಳನ್ನು ನಿಗದಿ ಮಾಡಲಾಗಿದೆ. ಆದರೆ, ಈ ಟಿವಿಗಳನ್ನು ಖರೀದಿ ಮಾಡಬೇಕು ಎಂದರೆ ಆಗಸ್ಟ್ 2 ರ ವರೆಗೆ ಕಾಯಬೇಕಿದೆ. ಆಗಸ್ಟ್ 2ರ ನಂತರ ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ಇವುಗಳನ್ನು ಆರ್ಡರ್ ಮಾಡಬಹುದು.

Best Mobiles in India

English summary
Infinix has launched India's first budget-priced 32-inch HDTV and 43-inch 4K TV. Both these TVs are packed with QLED display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+