Home
ಸುದ್ದಿಜಾಲ

ಡಿಸ್ಕೌಂಟ್‌ ಬೆಲೆಗೆ 5G ಮೊಬೈಲ್‌ ಬೇಕಿದ್ರೆ, ಈ ಆಫರ್‌ ಗಮನಿಸಿ!

ಇ ಕಾಮರ್ಸ್‌ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ ಮೊಬೈಲ್‌ಗಳಿಗೆ ಆಕರ್ಷಕ ಕೊಡುಗೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ 5G ಮಾದರಿಯ ಫೋನ್‌ಗಳೂ ರಿಯಾಯಿತಿ ಪಡೆದಿದ್ದು, ಅಂತಹ ಆಫರ್‌ ಫೋನ್‌ ಲಿಸ್ಟ್‌ ನೋಡುವುದಾದರೆ ಇನ್ಫಿನಿಕ್ಸ್‌ ಜಿರೋ 30 5G ಮೊಬೈಲ್‌ ಬಜೆಟ್‌ ದರದಲ್ಲಿ ಹೆಚ್ಚಿನ ಗಮನ ಸೆಳೆಯುವಂತಿದೆ.

ಹೌದು, ಅಮೆಜಾನ್‌ ವೆಬ್‌ಸೈಟ್‌ ನಲ್ಲಿ ಇನ್ಫಿನಿಕ್ಸ್‌ ಜಿರೋ 30 5G ಮೊಬೈಲ್‌ ಶೇ. 13% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ 25,999ರೂ. ಗಳಿಗೆ ಖರೀದಿ ಮಾಡಲು ಅವಕಾಶ ಇದೆ. ಅಂದಹಾಗೆ ಈ ಫೋನಿಗೆ ಲಭ್ಯ ಇತರೆ ಎಲ್ಲ ಆಫರ್‌ ಸೇರಿದರೆ ಈ ಫೋನ್‌ ಅನ್ನು ಇನ್ನಷ್ಟು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿ ಮಾಡುವ ಚಾನ್ಸ ಕೂಡಾ ಲಭ್ಯ ಇದೆ.

ಡಿಸ್ಕೌಂಟ್‌ ಬೆಲೆಗೆ 5G ಮೊಬೈಲ್‌ ಬೇಕಿದ್ರೆ, ಈ ಆಫರ್‌ ಗಮನಿಸಿ!

ಅಂದಹಾಗೆ ಇನ್ಫಿನಿಕ್ಸ್‌ ಜಿರೋ 30 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ವೇಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ. ಅಲ್ಲದೇ ಇದು Memfusion RAM ಫೀಚರ್ಸ್‌ ಮೂಲಕ ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸುವ ಅವಕಾಶ ಇದೆ. ಹಾಗಾದರೆ ಇನ್ಫಿನಿಕ್ಸ್‌ ಜಿರೋ 30 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಕರ್ಷಕ ಡಿಸ್‌ಪ್ಲೇ ರಚನೆ ಸೌಲಭ್ಯ

ಇನ್ಫಿನಿಕ್ಸ್‌ ಜಿರೋ 30 5G ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2,400x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಇದರ ಡಿಸ್‌ಪ್ಲೇ 60 ಡಿಗ್ರಿ ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 950 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇದು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಒಳಗೊಂಡಿದೆ.

ಡಿಸ್ಕೌಂಟ್‌ ಬೆಲೆಗೆ 5G ಮೊಬೈಲ್‌ ಬೇಕಿದ್ರೆ, ಈ ಆಫರ್‌ ಗಮನಿಸಿ!

ಯಾವ ಪ್ರೊಸೆಸರ್‌ ಪವರ್ ಇದೆ

ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಆಧಾರಿತ XOS 13 ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ Memfusion RAM ಫೀಚರ್ಸ್‌ ಮೂಲಕ ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸುವ ಅವಕಾಶ ಲಭ್ಯ.

ಡಿಸ್ಕೌಂಟ್‌ ಬೆಲೆಗೆ 5G ಮೊಬೈಲ್‌ ಬೇಕಿದ್ರೆ, ಈ ಆಫರ್‌ ಗಮನಿಸಿ!

ಮೂರು ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಇನ್ಫಿನಿಕ್ಸ್‌ ಸಂಸ್ಥೆಯ ಈ ಫೋನ್‌ ಮೂರು ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಫಸ್ಟ್‌ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದ್ದು, ಡ್ಯುಯಲ್ LED ಫ್ಲ್ಯಾಶ್ ಸೌಲಭ್ಯ ಇದೆ.

ಬಿಗ್ ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ಮಾಹಿತಿ

ಇನ್ಫಿನಿಕ್ಸ್‌ ಜಿರೋ 30 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 68W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್ ಮಾಡುತ್ತದೆ. ಇದರಿಂದ ಫೋನ್‌ ಅನ್ನು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 80% ವರೆಗೆ ಚಾರ್ಜಿಂಗ್‌ ಪಡೆದುಕೊಳ್ಳಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, NFC, GPS, USB ಟೈಪ್-C ಪೋರ್ಟ್, ಬ್ಲೂಟೂತ್ 5.3, ಮತ್ತು Wi-Fi 6 ಅನ್ನು ಪಡೆದಿದೆ.

Best Mobiles in India

English summary
Infinix Zero 30 5G available at awesome price cut on amazon. more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+