Home
ಸುದ್ದಿಜಾಲ

Infinix: ಇನ್ಫಿನಿಕ್ಸ್‌ನ ಈ ಉತ್ತಮ ಫೋನ್‌ಗೆ ಜಬರ್ದಸ್ತ್ ಡಿಸ್ಕೌಂಟ್! 108 MP ಕ್ಯಾಮೆರಾ.. 3D ಕರ್ವ್ಡ್ ಡಿಸ್‌ಪ್ಲೇ

ಇನ್ಫಿನಿಕ್ಸ್‌ (Infinix) ಫೋನ್‌ಗಳು ಅದರಲ್ಲೂ ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳು ಇತರೆ ಬ್ರ್ಯಾಂಡ್ಗನ ಪ್ರೀಮಿಯಂ ಫೋನ್‌ಗಳಲ್ಲಿ ಇರುವ ಫೀಚರ್ಸ್‌ ಅನ್ನು ಹೊಂದುವ ಮೂಲಕ ಕಡಿಮೆ ದರದಲ್ಲಿ ಪ್ರೀಮಿಯಂ ಅನುಭವವನ್ನು ಕಲ್ಪಿಸಿಕೊಡುತ್ತಿವೆ. ಅದರಂತೆ ಬರೋಬ್ಬರಿ 256 GB ಇಂಟರ್ ಸ್ಟೋರೇಜ್‌ ಅಯ್ಕೆಯ ಈ ಫೋನ್‌ಗೆ ದೊಡ್ಡ ಡಿಸ್ಕೌಂಟ್‌ ನೀಡಲಾಗಿದೆ.

ಹೌದು, ಇನ್ಫಿನಿಕ್ಸ್ ಜೀರೋ 30 5G ಸ್ಮಾರ್ಟ್‌ಫೋನ್‌ಗೆ (Infinix Zero 30 5G) ಬೊಂಬಾಟ್‌ ಆಫರ್ ನೀಡಲಾಗಿದೆ. ಈ ಫೋನ್‌ ಈಗಾಗಲೇ ತನ್ನ ವಿಶೇ‍ಷ ಫೀಚರ್ಸ್‌ಗಳ ಮೂಲಕ ಮಾರುಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿತ್ತು. ಈಗ ಮತ್ತೊಂದು ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಈ ಫೋನ್‌ ಆಫರ್ ಬೆಲೆಗೆ ಕಾಣಿಸಿಕೊಂಡಿದ್ದು, ಈ ಮೂಲಕ ಗ್ರಾಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಫೋನ್ 108 MP ಮುಖ್ಯ ಕ್ಯಾಮೆರಾ ಹಾಗೂ ಮೀಡಿಯಾಟೆಕ್‌ ಡೈಮೆನ್ಸಿಟಿ 8020 ಪ್ರೊಸೆಸರ್‌ ಬಲದೊಂದಿಗೆ ಪ್ಯಾಕ್‌ ಆಗಿದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ವಿವರ ಇಲ್ಲಿದೆ ನೋಡಿ.

ಇನ್ಫಿನಿಕ್ಸ್‌ನ ಈ ಉತ್ತಮ ಫೋನ್‌ಗೆ ಜಬರ್ದಸ್ತ್ ಡಿಸ್ಕೌಂಟ್! 108 MP ಕ್ಯಾಮೆರಾ..

ಇನ್ಫಿನಿಕ್ಸ್ ಜೀರೋ 30 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಹಾಗೂ ಇನ್ನಿತರೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಅದರಂತೆ ಈ ಫೋನ್ 6.78 ಇಂಚಿನ 3D ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ತೀಕ್ಷ್ಣವಾದ ಮತ್ತು ಅದ್ಭುತವಾದ ದೃಶ್ಯಗಳನ್ನು ನೀಡಲಿದೆ. ಜೊತೆಗೆ 144 ರಿಫ್ರೆಶ್ ರೇಟ್‌ ಆಯ್ಕೆ ಇದ್ದು, ಎಂತಹ ಬಿಸಿಲಿನಲ್ಲೂ ಅತ್ಯುತ್ತಮ ನೋಟ ನೀಡಲಿದೆ.

ಇನ್ಫಿನಿಕ್ಸ್ ಜೀರೋ 30 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಶಕ್ತಿಶಾಲಿ ಮೀಡಿಯಾಟೆಕ್‌ ಡೈಮೆನ್ಸಿಟಿ 8020 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಇದು ಆಕ್ಟಾ-ಕೋರ್ (4x2.6 GHz ಕಾರ್ಟೆಕ್ಸ್ A78 & 4x2.0 GHz ಕಾರ್ಟೆಕ್ಸ್-A55) ಮೂಲಕ ಪ್ಯಾಕ್‌ ಆಗಿದೆ. ಹಾಗೆಯೇ ಆಂಡ್ರಾಯ್ಡ್ 13 ಓಎಸ್‌ ಅನ್ನು ರನ್‌ ಮಾಡಲಿರುವ ಈ ಫೋನ್
ಮಾಲಿ-G77 MC9 ಜಿಪಿಯು ಸಾಮರ್ಥ್ಯದ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭ ವ ನೀಡಲಿದೆ. ಉಳಿದಂತೆ ಈ ಫೋನ್ 256GB + 8GB RAM, 256GB + 12GB RAM ಮೂಲಕ ಕಾಣಿಸಿಕೊಂಡಿದೆ.

ಇನ್ಫಿನಿಕ್ಸ್‌ನ ಈ ಉತ್ತಮ ಫೋನ್‌ಗೆ ಜಬರ್ದಸ್ತ್ ಡಿಸ್ಕೌಂಟ್! 108 MP ಕ್ಯಾಮೆರಾ..

ಇನ್ಫಿನಿಕ್ಸ್ ಜೀರೋ 30 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ 108 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾದೊಂದಿಗೆ ಇದು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದೆ. ಇದು ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ ಅತ್ಯುದ್ಭುತವಾದ 4K ವಿಡಿಯೋವನ್ನು ಸೆರೆಹಿಡಿಯಲಿದೆ.

ಇನ್ಫಿನಿಕ್ಸ್ ಜೀರೋ 30 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 68W ವೈರ್ಡ್ ಚಾರ್ಜಿಂಗ್‌ ಹೊಂದಿದ್ದು, ಇದು 30 ನಿಮಿಷಗಳಲ್ಲಿ 80% ಚಾರ್ಜಿಂಗ್‌ ಮಾಡಲಿದೆ. ಉಳಿದಂತೆ ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಎಫ್‌ಎಮ್‌ ರೇಡಿಯೋ, ಯುಎಸ್‌ಬಿ ಟೈಪ್-ಸಿ 2.0, ಓಟಿಜಿ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಇನ್ಫಿನಿಕ್ಸ್ ಜೀರೋ 30 5G ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಫೋನ್‌ನ ಸಾಮಾನ್ಯ ದರ 27,999 ರೂ.ಗಳಾಗಿದ್ದು, ಇದನ್ನು ನೀವು ಈಗ 23,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ 14% ರಿಯಾಯಿತಿಯಲ್ಲಿ ಲಭ್ಯ ಇದೆ. ಇಷ್ಟೇ ಅಲ್ಲದೆ ಇನ್ನೂ ವಿವಿಧ ಬ್ಯಾಂಕ್‌ ಆಫರ್ ಸಹ ಇದ್ದು, ಈ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ. ಅದರಲ್ಲೂ ವಿನಿಮಯ ಆಫರ್‌ನಲ್ಲಿ 22,000 ರೂ.ವರೆಗೆ ಉಳಿತಾಯ ಮಾಡಬಹುದಾಗಿದೆ.

ಇನ್ಫಿನಿಕ್ಸ್‌ನ ಈ ಉತ್ತಮ ಫೋನ್‌ಗೆ ಜಬರ್ದಸ್ತ್ ಡಿಸ್ಕೌಂಟ್! 108 MP ಕ್ಯಾಮೆರಾ..

ಇನ್ನು ಬ್ಯಾಂಕ್‌ ಆಫರ್ ವಿಚಾರಕ್ಕೆ ಬರುವುದಾದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ ಬ್ಯಾಂಕ್ ಆಫರ್ 10% ಸಿಗಲಿದ್ದು, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಪೇ ಲೇಟರ್‌ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು.

Best Mobiles in India

English summary
Infinix Zero 30 5G smartphone available at discount price in flipkart. This phone was already buzzing in the market with its special features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+