Infinix Zero 40 5G ಲಾಂಚ್‌ಗೆ ಕೆಲವೇ ದಿನ ಬಾಕಿ; ಕುತೂಹಲ ಮೂಡಿಸಿರುವ AI ಫೀಚರ್ಸ್!
ಇನ್ಫನಿಕ್ಸ್ ಮೊಬೈಲ್ ಸಂಸ್ಥೆಯು ಜಿರೋ ಸರಣಿಯಲ್ಲಿ ಕೆಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಸಿಇಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಸಂಸ್ಥೆಯು ಇನ್ಫಿನಿಕ್ಸ್ ಜಿರೋ 40 5G (Infinix Zero 40 5G) ಫೋನ್ ಅನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಅಂದಹಾಗೆ ಬರಲಿರುವ ಈ ನೂತನ ಫೋನ್ ಇನ್ಫಿನಿಕ್ಸ್ AI (Infinix AI) ಸೌಲಭ್ಯದ ಜೊತೆಗೆ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಬಹುತೇಕ ನಿಕ್ಕಿ ಆಗಿದೆ.
ಹೌದು, ಇನ್ಫನಿಕ್ಸ್ ಮೊಬೈಲ್ ಸಂಸ್ಥೆಯು ಹೊಸದಾಗಿ ಇನ್ಫಿನಿಕ್ಸ್ ಜಿರೋ 40 5G (Infinix Zero 40 5G) ಫೋನ್ ಅನ್ನು ಇದೇ ಸೆಪ್ಟೆಂಬರ್ 18 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಫೋನಿನ ಲಾಂಚ್ ಬಗ್ಗೆ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತಾಣವು ಮೈಕ್ರೋ ಪೇಜ್ ಕೂಡಾ ತೆರೆದಿದೆ. ಈ ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 108 ಮೆಗಾಪಿಕ್ಸಲ್ ಸೆನ್ಸಾರ್ ಒಳಗೊಂಡಿರುವುದು ಪಕ್ಕಾ ಎನ್ನಲಾಗಿದೆ.

ಇನ್ನು ಬರಲಿರುವ ಈ ಫೋನ್ ಸೆಲ್ಫಿ ಕ್ಯಾಮೆರಾವು ಸಹ 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿರುವ ನಿರೀಕ್ಷೆಗಳಯ ಇವೆ. ಅಲ್ಲದೇ ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗಾದರೇ ಇನ್ಫಿನಿಕ್ಸ್ ಜಿರೋ 40 5G ಫೋನಿನ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ ಜಿರೋ 40 5G ನಿರೀಕ್ಷಿತ ಫೀಚರ್ಸ್
ಇನ್ಫಿನಿಕ್ಸ್ ಜಿರೋ 40 5G ಮೊಬೈಲ್ 6.74 ಇಂಚಿನ FHD+ AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯು 1,300 nits ಗರಿಷ್ಠ ಬ್ರೈಟ್ನೆಸ್ ಸೌಲಭ್ಯ ಸಹ ಪಡೆದಿರಲಿದೆ.
ಇನ್ಫಿನಿಕ್ಸ್ ಜಿರೋ 40 5G ಮೊಬೈಲ್ ಮೀಡಿಯಾ ಟೆಕ್ G100 (MediaTek Helio G100) ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರಲಿದೆ. ಹಾಗೆಯೇ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ನಿರೀಕ್ಷಿಸಲಾಗಿದೆ. ಇದರೊಂದಿಗೆ 8GB RAM (16GB ವಿಸ್ತೃತ RAM) ಮತ್ತು 512GB ವರೆಗೆ ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಇರಲಿವೆ.
ಇನ್ಫಿನಿಕ್ಸ್ ಜಿರೋ 40 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿರುವ ಸೂಚನೆಗಳು ಇವೆ. ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಉಳಿದಂತೆ ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸಲ್ ಡೆಪ್ತ್ ಸೆನ್ಸಾರ್ ಸೌಲಭ್ಯ ಪಡೆದಿರಲಿವೆ. ಅಲ್ಲದೇ ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ.
ಇನ್ಫಿನಿಕ್ಸ್ ಜಿರೋ 40 5G ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 45W ವೇಗದ ಚಾರ್ಜಿಂಗ್ ಇರಲಿದೆ. ಹಾಗೆಯೇ 20W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಕೂಡಾ ನೀಡುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್ ಆಂಡ್ರಾಯ್ಡ್ 14 ಆಧಾರಿತ XOS 14.5, ಎರಡು ವರ್ಷಗಳ OS ಅಪ್‌ಗ್ರೇಡ್‌ಗಳು, ಮೂರು ವರ್ಷಗಳ ಭದ್ರತಾ ನವೀಕರಣಗಳ ಆಯ್ಕೆ ಪಡೆದಿರಲಿದೆ.
ಹಾಗೆಯೇ ಈ ಫೋನ್ ಇನ್ಫಿನಿಕ್ಸ್ AI (Infinix AI) ಸೌಲಭ್ಯದ ಪಡೆದಿರಲಿದ್ದು, ಫೋಟೋಗಳನ್ನು ರಚಿಸಲು AI ಇಮೇಜ್ ಜನರೇಟರ್, ಬಹುಭಾಷಾ ಅನುವಾದಗಳಿಗಾಗಿ AI ಟ್ರಾನ್ಸಲೇಟರ್ ಮತ್ತು ಕಂಟೆಂಟ್ ರಚನೆಯನ್ನು ಸುಗಮಗೊಳಿಸಲು AI ಟೆಕ್ಸ್ಟ್ ಜನರೇಟರ್ ಆಯ್ಕೆಗಳು ಇರಲಿವೆ ಎನ್ನಲಾಗಿದೆ.


Click it and Unblock the Notifications








