Home
ಸುದ್ದಿಜಾಲ

ಇಂದು ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ Infinix Zero 40 5G ಫೋನ್‌; ಬಿಗ್‌ ಬ್ಯಾಟರಿ!

ಬಹುನಿರೀಕ್ಷಿತ ಇನ್ಫಿನಿಕ್ಸ್‌ ಜಿರೋ 40 5G (Infinix Zero 40 5G) ಫೋನ್‌ ಅನ್ನು ಇಂದು (ಸೆಪ್ಟೆಂಬರ್ 18 ರಂದು) ಅಧಿಕೃತವಾಗಿ ದೇಶಿಯ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಇನ್ಫಿನಿಕ್ಸ್‌ ಸಂಸ್ಥೆಯ ಈ ಹೊಸ ಮೊಬೈಲ್‌ ಇನ್ಫಿನಿಕ್ಸ್‌ AI (Infinix AI) ಆಯ್ಕೆಗಳ ಜೊತೆಗೆ ಲಗ್ಗೆ ಇಡಲಿದ್ದು, ಇದರ ಜೊತೆಗೆ 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರಲಿದೆ.

ಹೌದು, ಇನ್ಫಿನಿಕ್ಸ್‌ ಮೊಬೈಲ್‌ ಕಂಪನಿಯು ನೂತನವಾಗಿ ಇನ್ಫಿನಿಕ್ಸ್‌ ಜಿರೋ 40 5G (Infinix Zero 40 5G) ಮೊಬೈಲ್‌ ಅನ್ನು ಇದೇ ಸೆಪ್ಟೆಂಬರ್ 18 ರಂದು ಲಾಂಚ್ ಬಿಡುಗಡೆ ಮಾಡಲಿದೆ. ಇನ್ನು ಲಾಂಚ್‌ ಕುರಿತಾಗಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಮೈಕ್ರೋ ಪೇಜ್‌ ಸಹ ತೆರೆದಿದೆ. ಅಂದಹಾಗೆ ಈ ಫೋನ್‌ 50 ಮೆಗಾಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ.

ಇಂದು ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ Infinix Zero 40 5G ಫೋನ್‌; ಬಿಗ್‌ ಬ್ಯಾಟರಿ

ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G100 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್ ಪಡೆದಿರುವ ನಿರೀಕ್ಷೆಗಳು ಇವೆ. ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗಾದರೇ ಇನ್ಫಿನಿಕ್ಸ್‌ ಜಿರೋ 40 5G ಫೋನಿನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ಜಿರೋ 40 5G ನಿರೀಕ್ಷತ ಫೀಚರ್ಸ್‌

ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್‌ 6.74 ಇಂಚಿನ FHD+ AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಇದರ ಜೊತೆಗೆ 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯು 1,300 nits ಗರಿಷ್ಠ ಬ್ರೈಟ್ನೆಸ್‌ ಸೌಲಭ್ಯ ಸಹ ಪಡೆದಿರಲಿದೆ.

ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G100 (MediaTek Helio G100) ಚಿಪ್‌ಸೆಟ್‌ ಪ್ರೊಸೆಸರ್ ಪವರ್‌ ಒಳಗೊಂಡಿರಲಿದೆ. ಹಾಗೆಯೇ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ನಿರೀಕ್ಷಿಸಲಾಗಿದೆ. ಇದರ ಜೊತೆಗೆ 8GB RAM (16GB ವಿಸ್ತೃತ RAM) ಮತ್ತು 512GB ವರೆಗೆ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳು ಇರಲಿವೆ.

ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಪಡೆದಿರುವ ಸೂಚನೆಗಳು ಇವೆ. ಇದರ ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಅದೇ ರೀತಿ ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸಲ್‌ ಡೆಪ್ತ್ ಸೆನ್ಸಾರ್ ಸೌಲಭ್ಯ ಪಡೆದಿರಲಿವೆ. ಅಲ್ಲದೇ ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ.

ಇನ್ಫಿನಿಕ್ಸ್‌ ಜಿರೋ 40 5G ಮೊಬೈಲ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆಯನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಇರಲಿದೆ. ಹಾಗೆಯೇ 20W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಕೂಡಾ ನೀಡುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್‌ ಆಂಡ್ರಾಯ್ಡ್ 14 ಆಧಾರಿತ XOS 14.5, ಎರಡು ವರ್ಷಗಳ OS ಅಪ್‌ಗ್ರೇಡ್‌ಗಳು, ಮೂರು ವರ್ಷಗಳ ಭದ್ರತಾ ನವೀಕರಣಗಳ ಆಯ್ಕೆ ಪಡೆದಿರಲಿದೆ.

ಇನ್ಫಿನಿಕ್ಸ್‌ ಜಿರೋ 40 5G ಫೋನ್‌ ಇನ್ಫಿನಿಕ್ಸ್‌ AI (Infinix AI) ಸೌಲಭ್ಯದ ಪಡೆದಿರಲಿದ್ದು, ಫೋಟೋಗಳನ್ನು ರಚಿಸಲು AI ಇಮೇಜ್ ಜನರೇಟರ್, ಬಹುಭಾಷಾ ಅನುವಾದಗಳಿಗಾಗಿ AI ಟ್ರಾನ್ಸಲೇಟರ್ ಮತ್ತು ಕಂಟೆಂಟ್‌ ರಚನೆಯನ್ನು ಸುಗಮಗೊಳಿಸಲು AI ಟೆಕ್ಸ್ಟ್‌ ಜನರೇಟರ್ ಆಯ್ಕೆಗಳು ಇರಲಿವೆ ಎನ್ನಲಾಗಿದೆ.

Best Mobiles in India

English summary
Infinix Zero 40 5G to Launch in India Today via flipkart website. Check Expected Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+