Home
ಸುದ್ದಿಜಾಲ

ಭಾರತದಲ್ಲಿ ಇನ್ಫಿನಿಕ್ಸ್‌ನ ಎರಡು ಸ್ಮಾರ್ಟ್‌ಫೋನ್‌ ಲಾಂಚ್‌; ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫಿನಿಕ್ಸ್ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಟಿವಿಗಳನ್ನು ಅನಾವರಣ ಮಾಡಿ ಜನಮನ್ನಣೆ ಗಳಿಸಿಕೊಂಡಿದೆ. ಅದರಂತೆ ಕಂಪೆನಿಯು ಕಳೆದ ವರ್ಷ ಭಾರತದಲ್ಲಿ ತನ್ನ ಮೊದಲ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿತ್ತು. ಇದೀಗ ಹೊಸದಾಗಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ಫೋನ್‌ಗಳು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ.

ಭಾರತದಲ್ಲಿ ಇನ್ಫಿನಿಕ್ಸ್‌ನ ಎರಡು ಸ್ಮಾರ್ಟ್‌ಫೋನ್‌ ಲಾಂಚ್‌; ಬೆಲೆ ಎಷ್ಟು?

ಹೌದು, ಇನ್ಫಿನಿಕ್ಸ್ ಕಂಪೆನಿಯು ಇನ್ಫಿನಿಕ್ಸ್ ಝೀರೋ 5G ಹಾಗೂ ಝೀರೋ 5ಜಿ 2023 ಟರ್ಬೊ (Infinix Zero 5G 2023, Zero 5G 2023 Turbo) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಫೀಚರ್ಸ್‌ ಒಂದೇ ರೀತಿಯಲ್ಲಿದ್ದು, ಸ್ಟೋರೇಜ್‌ ಸಾಮರ್ಥ್ಯ ಹಾಗೂ ಪ್ರೊಸೆಸರ್‌ನಲ್ಲಿ ಭಿನ್ನತೆ ಕಾಣಬಹುದು. ಅಂದರೆ ಇನ್ಫಿನಿಕ್ಸ್ ಝೀರೋ 5G5G ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಮೂಲಕ ಕಾರ್ಯನಿರ್ವಹಿಸಿದರೆ, ಝೀರೋ 5G ಟರ್ಬೊ ಫೋನ್ ಡೈಮೆನ್ಸಿಟಿ 1080 ಚಿಪ್‌ನಿಂದ ಕಾರ್ಯ ನಿರ್ವಹಿಸಲಿದೆ.

ಇನ್ಫಿನಿಕ್ಸ್ ಝೀರೋ ಸರಣಿ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ವಿವರ

ಇನ್ಫಿನಿಕ್ಸ್ ಝೀರೋ 5G 2023 ಸರಣಿಯ ಈ ಎರಡೂ ಸ್ಮಾರ್ಟ್‌ಫೋನ್‌ 6.79 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಪಂಚ್ ಹೋಲ್ ಕಟೌಟ್ ಶೈಲಿ ಪಡೆದುಕೊಂಡಿದೆ. ಹಾಗೆಯೇ 1,080 x 2,460 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಇದರಲ್ಲಿದ್ದು, 120Hz ರಿಫ್ರೆಶ್ ರೇಟ್ ಹಾಗೂ 20.5:9 ಆಕಾರ ಅನುಪಾತವನ್ನು ಹೊಂದಿವೆ.

ಇನ್ಫಿನಿಕ್ಸ್ ಝೀರೋ ಸರಣಿ ಫೋನ್‌ಗಳ ಪ್ರೊಸೆಸರ್‌ ಯಾವುದು?

ಇನ್ಫಿನಿಕ್ಸ್ ಝೀರೋ 5G 2023 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ, ಝೀರೋ 5G 2023 ಟರ್ಬೊ ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 1080 ಚಿಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಎರಡೂ ಫೋನ್‌ಗಳು ಸಾಮಾನ್ಯವಾಗಿ 8GB RAM ಅನ್ನು ಹೊಂದಿದ್ದು, ಇಂಟರ್ನಲ್‌ ಸ್ಟೋರೇಜ್‌ನಲ್ಲಿ ಭಿನ್ನವಾಗಿವೆ. ಇನ್ಫಿನಿಕ್ಸ್ ಝೀರೋ 5G ಫೋನ್‌128GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಪಡೆದರೆ, ಟರ್ಬೊ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯವಿದೆ.

ಭಾರತದಲ್ಲಿ ಇನ್ಫಿನಿಕ್ಸ್‌ನ ಎರಡು ಸ್ಮಾರ್ಟ್‌ಫೋನ್‌ ಲಾಂಚ್‌; ಬೆಲೆ ಎಷ್ಟು?

ಇನ್ಫಿನಿಕ್ಸ್ ಝೀರೋ ಸರಣಿ ಫೋನ್‌ಗಳ ಕ್ಯಾಮೆರಾ ರಚನೆ

ಇನ್ಫಿನಿಕ್ಸ್ ಝೀರೋ ಸರಣಿ ಫೋನ್‌ಗಳು ಒಂದೇ ರೀತಿಯ ಕ್ಯಾಮೆರಾ ರಚನೆ ಹೊಂದಿವೆ. ಅದರಲ್ಲಿ ಪ್ರಮುಖವಾಗಿ 50MP ಪ್ರಾಥಮಿಕ ಸೆನ್ಸರ್‌, 2MP ಡೆಪ್ತ್ ಸೆನ್ಸರ್‌ ಮತ್ತು 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಇದ್ದು, 16MP ಸೆಲ್ಫಿ ಕ್ಯಾಮೆರಾ ಹಾಗೂ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಕ್ಯಾಮೆರಾ ಪ್ರಿಯರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಇನ್ಫಿನಿಕ್ಸ್ ಝೀರೋ ಸರಣಿ ಫೋನ್‌ಗಳ ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ವಿಚಾರದಲ್ಲೂ ಸಹ ಈ ಎರಡೂ ಫೋನ್‌ಗಳು ಒಂದೇ ಸಾಮರ್ಥ್ಯವನ್ನು ಪಡೆದುಕೊಂಡಿವೆ. 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್‌ಗಳಲ್ಲಿ ಇದ್ದು, 33W ವೇಗದ ಚಾರ್ಜಿಂಗ್ ಬೆಂಬಲ ಇವುಗಳಲ್ಲಿದೆ. ಇನ್ನುಳಿದಂತೆ 5G, ಡ್ಯುಯಲ್‌ ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ v5.1, ಜಿಪಿಎಸ್‌, 3.5mm ಆಡಿಯೊ ಜಾಕ್ ಹಾಗೂ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಈ ಫೋನ್‌ಗಳಲ್ಲಿದೆ. ಹಾಗೆಯೇ ಆಂಡ್ರಾಯ್ಡ್ 12 ಆಧಾರಿತ XOS 12 ಕಸ್ಟಮ್ ಸ್ಕಿನ್ ಅನ್ನು ರನ್ ಮಾಡಲಿದ್ದು, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ಅನ್ನು ನೀಡಲಾಗಿದೆ.

ಭಾರತದಲ್ಲಿ ಇನ್ಫಿನಿಕ್ಸ್‌ನ ಎರಡು ಸ್ಮಾರ್ಟ್‌ಫೋನ್‌ ಲಾಂಚ್‌; ಬೆಲೆ ಎಷ್ಟು?

ಇನ್ಫಿನಿಕ್ಸ್ ಝೀರೋ ಸರಣಿ ಫೋನ್‌ಗಳ ಬೆಲೆ ಹಾಗೂ ಲಭ್ಯತೆ

ಇನ್ಫಿನಿಕ್ಸ್ ಝೀರೋ 5G 2023 ಸ್ಮಾರ್ಟ್‌ಫೋನ್‌ನ 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ ಭಾರತದಲ್ಲಿ 17,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಇನ್ಫಿನಿಕ್ಸ್ ಝೀರೋ ಟರ್ಬೋ ಫೋನ್‌ನ 8GB RAM + 256GB ಸ್ಟೋರೇಜ್ ವೇರಿಯಂಟ್‌ಗೆ 19,999 ರೂ. ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಇನ್ನುಳಿದಂತೆ ಈ ಫೋನ್‌ಗಳು ಪರ್ಲಿ ವೈಟ್, ಕೋರಲ್ ಆರೆಂಜ್‌ ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಯಲ್ಲಿ ಈ ಫೋನ್‌ಗಳು ಲಭ್ಯ. ಇದರೊಂದಿಗೆ ಫೆಬ್ರವರಿ 11 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Infinix has launched Infinix Zero 5G and Zero 5G 2023 Turbo smartphones in India. These phones have mostly got similar features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+