ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಬಿಡುಗಡೆ!..ಬೆಲೆ ಎಷ್ಟು?

|

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗುರುತಿಸಿಕೊಂಡಿರುವ ಇನ್‌ಫಿನಿಕ್ಸ್‌ ಕಂಪನಿಯು ಇದೀಗ ಹೈ ಎಂಡ್ ಮಾದರಿಯ ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G90T SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ 8GB + 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಹೊಂದಿದೆ.

ಇನ್‌ಫಿನಿಕ್ಸ್‌

ಹೌದು, ಇನ್‌ಫಿನಿಕ್ಸ್‌ ಕಂಪನಿಯು ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಅನ್ನು ಇಂಡೋನೇಷಿಯಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಕ್ವಾಡ್‌ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಮಲ್ಟಿ ಡೈಮನ್ಶನಲ್ ಕೂಲಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಹಾಗೆಯೇ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ ಹೊಂದಿದೆ. ಇನ್ನುಳಿದಂತೆ ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಹೈ ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.85 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 90Hz ರೀಫ್ರೇಶ್‌ ರೇಟ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 180Hz ಸಾಮರ್ಥ್ಯದ ಟಚ್ ಸಾಂಪ್ಲಿಂಗ್ ರೇಟ್ ಒಳಗೊಂಡಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G90T SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ 8GB + 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಸಫೋರ್ಟ್‌ ಸಹ ಒಳಗೊಂಡಿದೆ.

ಕ್ವಾಡ್ ಕ್ಯಾಮೆರಾ

ಕ್ವಾಡ್ ಕ್ಯಾಮೆರಾ

ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸಲ್ ಸೆನ್ಸಾರ್‌ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ ಎರಡು ಕ್ಯಾಮೆರಾ ನೀಡಲಾಗಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದ್ದು, ಸೆಕೆಂಡರಿ ಕ್ಯಾಮೆರಾ 8ಎಂಪಿ ಸೆನ್ಸಾರ್ ನೀಡಲಾಗಿದೆ.

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 33W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ರಿಯರ್‌ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಆಂಬಿಯಂಟ್ ಲೈಟ್‌ ಸೆನ್ಸಾರ್‌, ಇ-ಕಾಂಪಾಸ್‌ ನಂತಹ ಸೌಲಭ್ಯಗಳನ್ನು ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್‌ಫಿನಿಕ್ಸ್‌ ಜೀರೊ 8 ಸ್ಮಾರ್ಟ್‌ಫೋನ್ 8GB + 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿದೆ. ಇಂಡೋನೇಷಿಯಾದಲ್ಲಿ ಈ ಫೋನ್ ಬೆಲೆಯು IDR 3,799,000 (ಭಾರತದಲ್ಲಿ ಅಂದಾಜು 19,200ರೂ.). ಈ ಫೋನ್ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವ ಬಗ್ಗೆ ಕಂಪನಿಯು ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Infinix Zero 8 has 128GB of storage onboard. It is backed by a 4,500mAh battery with support for 33W fast charging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X